More

    ಲಾಡ್ಲಾಪುರದಲ್ಲಿ ಬೆಳ್ಳಿ ಕುದುರೆ ಮೆರವಣಿಗೆ

    ವಾಡಿ: ಲಾಡ್ಲಾಪುರದಲ್ಲಿ ಅಸಂಖ್ಯಾತ ಜೈಘೋಷದ ಮಧ್ಯೆ ಸಂಭ್ರಮದಿAದ ಹಾಜಿ ಸರ್ವರ್ ದರ್ಗಾಕ್ಕೆ ಸಮರ್ಪಿತ ಬೆಳ್ಳಿ ಕುದುರೆಯ ಭವ್ಯ ಮೆರವಣಿಗೆ ಗುರುವಾರ ನಡೆಯಿತು. ಮಳೆಯನ್ನು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಸಾಗಿದರು.

    21 ಲಕ್ಷ ರೂ. ವೆಚ್ಚದ 28 ಕೆಜಿಯ ಬೆಳ್ಳಿ ಕುದುರೆ ಮೂರ್ತಿ ಇದಾಗಿದ್ದು, ಬೆಳಗ್ಗೆ ಸಿಹಿ ನೀರಿನ ಬಾವಿಯಲ್ಲಿ ಗಂಗಾ ಸ್ನಾನ ನೆರವೇರಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಅಪಾರ ಭಕ್ತರು ಜೈಘೋಷಗಳನ್ನು ಕೂಗಿದರು. ಸುಮಾರು 6 ಗಂಟೆ ಜರುಗಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಭಾಜಭಜಂತ್ರಿಗಳ ಮೇಳದ ಜತೆಗೆ ಯುವಕರ ಕೋಲಾಟ ಗಮನ ಸೆಳೆದವು. ಉತ್ಸವದಲ್ಲಿ ಲಾಡ್ಲಾಪುರ ಸಹಿತ ಸುತ್ತಲಿನ ಗ್ರಾಮಗಳ ಹಲವು ಭಕ್ತರು ಭಾಗಿಯಾಗಿದ್ದರು. ಸ್ಥಳೀಯ ಕರಿಬಸವೇಶ್ವರ ದೇವಸ್ಥಾನ ಯುವಪಡೆಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
    ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಪೂಜೆ ನಡೆಸಿ, ದೇವರ ಮನೆಯಲ್ಲಿ ಪಂಚಕಳಸಗಳ ಪಕ್ಕದ ಗದ್ದುಗೆಯ ಮೇಲೆ ಬೆಳ್ಳಿ ಕುದುರೆಯನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿವರ್ಷ ಉರುಸ್ ಸಂದರ್ಭದಲ್ಲಿ ಗಂಧ ಉತ್ಸವ ನಡೆಯುವ ವೇಳೆ ಬೆಳ್ಳಿ ಕುದುರೆಯನ್ನು ಮೆರವಣಿಗೆ ಮಾಡಲಾಗುವುದು. ಇದರಿಂದಾಗಿ ಉರುಸ್ ಕಳೆ ಹೆಚ್ಚಾಗಲಿದೆ ಎಂಬುದು ಭಕ್ತರ ಮಾತಾಗಿದೆ.

    ಗ್ರಾಪಂ ಅಧ್ಯಕ್ಷ ವೀರೇಶ ಪೂಜಾರಿ, ಪ್ರಮುಖರಾದ ನಾಗೇಂದ್ರಪ್ಪ ಮುಕ್ತೇದಾರ್, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ್, ಖಾಶೀಂ ಮುಲ್ಲಾ, ಬಸವರಾಜ ಮಾಲಿಪಾಟೀಲ್, ವಿಶ್ವನಾಥ ಗಾಂಧಿ, ಸಾಬಣ್ಣ ಗೊಡಗ, ನಾಗಣ್ಣ ಪೂಜಾರಿ, ಸುಬ್ಬಣ್ಣ ವಡ್ಡರ್, ಈರಣ್ಣ ಮಲ್ಕಂಡಿ, ಸಾಬಣ್ಣ ಆನೇಮಿ, ಶಾಂತಕುಮಾರ ಎಣ್ಣಿ, ಚಂದಪ್ಪ ಲಕಬಾ, ದತ್ತು ಗುತ್ತೇದಾರ್, ಹಣಮಂತ ಗಲಿಗಿನ, ಮೌನೇಶ ದೊರೆ, ಶರಣಪ್ಪ ಪೂಜಾರಿ, ವಸಂತ ಹಲಕರ್ಟಿ, ದಾನಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts