More

    ಜೈನ ಮುನಿಗಳ ಹತ್ಯೆ ಖಂಡಿಸಿ ಮೌನ ಮೆರವಣಿಗೆ

    ತಾಳಿಕೋಟೆ: ಸಾಧು ಸಂತರು ಭಕ್ತೋದ್ಧಾರ ಮಾಡುತ್ತಾ ಸಾಗಿ ಬಂದಿದ್ದಾರೆ. ಅಂತಹುದರಲ್ಲಿ ಚಿಕ್ಕೋಡಿ ತಾಲೂಕಿನ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ ಎಂದು ಆರ್‌ಎಸ್‌ಎಸ್ ವಿಜಯಪುರ ವಿಭಾಗದ ಸಂಘಟನಾ ಸಂಚಾಲಕ ಚಿದಂಬರ ಕರಮರಕರ ಹೇಳಿದರು.

    ಸ್ಥಳೀಯ ದಿಗಂಬರ ಜೈನ ಸೇವಾ ಟ್ರಸ್ಟ ಹಾಗೂ ಪಟ್ಟಣದ ಹಿಂದು ಸಂಘಟನೆಗಳ ವತಿಯಿಂದ ಜೈನ ಮುನಿ ಮಹಾರಾಜರ ಹತ್ಯೆ ಖಂಡಿಸಿ ಗುರುವಾರ ಆಯೋಜಿಸಿದ್ದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

    ಕಳೆದ ಹತ್ತಾರು ವರ್ಷಗಳಿಂದ ರಾಜಕೀಯದಲ್ಲಿ ಧರ್ಮ ಬೇರೆ ಮಾಡುವಂತಹ ಹುನ್ನಾರಗಳು ನಡೆದಿವೆ. ಹೀಗಾಗಿ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಧರ್ಮ, ದೇಶ ಒಂದು ಆತ್ಮವಿದ್ದಂತೆ, ಧರ್ಮ ರಾಜಕೀಯಕ್ಕಿಂತ ಶ್ರೇಷ್ಠವಾದದ್ದು ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

    ಜೈನ ಸಮಾಜದ ಮುನಿಗಳ ಹತ್ಯೆ ಖಂಡನೀಯ. ಸಮಾಜ ಸುಧಾರಣೆ ಮಾಡುವಂತಹವರನ್ನು ಕೊಲ್ಲುವುದು ಹೇಡಿತನ. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲು ಸರ್ಕಾರ ಮುಂದೆ ಇಂತಹ ಕುಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದರು.

    ಪುರಸಭೆ ಸದಸ್ಯರಾದ ಜೈಸಿಂಗ್ ಮೂಲಿಮನಿ, ವಾಸುದೇವ ಹೆಬಸೂರ ಮಾತನಾಡಿ, ಅಕ್ಷರ ಕಲಿಸುವುದು, ಆಶ್ರಯ ಇಲ್ಲದವರಿಗೆ ಆಶ್ರಯ ನೀಡುವಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದ ಜೈನ ಮುನಿಗಳ ಹತ್ಯೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

    ಜೈನ ಸಮಾಜದ ಜೈನ ಬಸದಿಯಿಂದ ಕಪ್ಪುಬಟ್ಟೆ ಧರಿಸಿದ ಎಲ್ಲ ಪ್ರತಿಭಟನಾಕಾರರು ಮೌನ ಪ್ರತಿಭಟನಾ ಮೆರವಣಿಗೆಯೊಂದಿಗೆ ರಾಜವಾಡೆ, ಪಂಚಸೈಯದ ದರ್ಗಾ, ಕತ್ರಿ ಬಜಾರ, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸವೇಶ್ವರ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು.

    ದಿಗಂಬರ ಜೈನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪದ್ಮರಾಜ ಧನಪಾಲ, ಉಪಾಧ್ಯಕ್ಷ ವಜ್ರಕುಮಾರ ಪ್ರಥಮಶೆಟ್ಟಿ, ಕಾರ್ಯದರ್ಶಿ ಪ್ರಭು ಗೋಗಿ, ಕುಲಭೂಷಣ ಹುಬ್ಬಳ್ಳಿ, ಕಸ್ತೂರಿ ಪ್ರಥಮಶೆಟ್ಟಿ, ಮೋಹನ ಧನಪಾಲ, ಎ.ಬಿ. ಇರಾಜ, ಗುಂಡುರಾವ ಧನಪಾಲ, ಸಂತೋಷ ಪ್ರಥಮಶೆಟ್ಟಿ, ಎಸ್.ಬಿ. ಗೊಂಗಡಿ, ರತ್ನಪ್ಪ ಶಿಸಪ್ಪ ಪ್ರಥಮಶೆಟ್ಟಿ, ಮಹಾವೀರ ಪ್ರಥಮಶೆಟ್ಟಿ, ಎಸ್.ಆರ್. ಹುಬ್ಬಳ್ಳಿ, ಸಿ.ಎಸ್. ಗೋಗಿ, ಬಾಹುಬಲಿ ಸುರಪುರ, ಪದ್ಮರಾಜ ಯಾಥಗಿರಿ, ಬಸವಕುಮಾರ ಶಿರಸಿ, ಮಹಾವೀರ ಶಿರಶ್ಯಾಡ, ಅಶೋಕ ರತನೆಕಾರ, ಮಹಾವೀರ ಯಾಥಗಿರಿ, ಜೈಪಾಲ ಯಾಥಗಿರಿ, ರಾಜಕುಮಾರ ವರ್ಧಮಾನ, ಶ್ರೀಪಾಲ ಸಂಗ್ಮಿ ಇತರರಿದ್ದರು. ಪ್ರಕಾಶ ಸುರಪುರ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts