More

    ಲಿಯೋನೆಲ್ ಮೆಸ್ಸಿ ಅವರ ಹೊಸ ಫುಟ್‌ಬಾಲ್ ಕ್ಲಬ್, ಜೆರ್ಸಿ ನಂಬರ್ ಯಾವುದು ಗೊತ್ತೇ?

    ಪ್ಯಾರಿಸ್: ಲಿಯೋನೆಲ್ ಮೆಸ್ಸಿ ಎಂದರೆ ಬಾರ್ಸಿಲೋನಾ ಅಥವಾ ನಂಬರ್ 10 ಎಂಬಂತಿದ್ದ ಕಾಲ ಈಗ ಬದಲಾಗಿದೆ. ಇವೆರಡರ ನಂಟನ್ನೂ ಮೆಸ್ಸಿ ಈಗ ತ್ಯಜಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಮೆಸ್ಸಿ ಸಜ್ಜಾಗಿದ್ದಾರೆ.

    ಸ್ಪೇನ್‌ನ ಬಾರ್ಸಿಲೋನಾ ಕ್ಲಬ್ ಜತೆಗಿನ 21 ವರ್ಷಗಳ ಸಖ್ಯ ತೊರೆದಿರುವ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಫ್ರಾನ್ಸ್‌ನ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ಕ್ಲಬ್ ಸೇರಿಕೊಂಡಿದ್ದಾರೆ. 34 ವರ್ಷದ ಮೆಸ್ಸಿ ವಾರ್ಷಿಕ 305 ಕೋಟಿ ರೂ. (35 ದಶಲಕ್ಷ ಯುರೋ) ವೇತನಕ್ಕೆ ಪಿಎಸ್‌ಜಿ ಜತೆಗೆ 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, 3ನೇ ವರ್ಷಕ್ಕೆ ಇದನ್ನು ವಿಸ್ತರಿಸುವ ಆಯ್ಕೆಯನ್ನೂ ಮುಕ್ತವಾಗಿಡಲಾಗಿದೆ.

    ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಉಪ್ಪಾಗಿದೆ ಎಂದು ಹಾಕಿ ಗೋಲು ಕೀಪರ್ ಶ್ರೀಜೇಶ್ ಹೇಳಿದ್ದೇಕೆ?

    ಪಿಎಸ್‌ಜಿ ತವರು ಮೈದಾನವಾಗಿರುವ ಪಾರ್ಕ್ ಡೆಸ್ ಪ್ರಿನ್ಸೆಸ್‌ನಲ್ಲಿ ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅವರು ಶನಿವಾರ ಸುಮಾರು 50 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಪಿಎಸ್‌ಜಿ ಪರ ಮೊದಲ ಪಂದ್ಯವಾಡಲಿದ್ದಾರೆ. ಗೆಳೆಯ ಬ್ರೆಜಿಲ್‌ನ ನೇಮರ್, ದೇಶಬಾಂಧವ ಏಂಜೆಲ್ ಡಿ ಮರಿಯಾ ಮತ್ತು ಫ್ರಾನ್ಸ್ ಸ್ಟ್ರೈಕರ್ ಕೈಲಿಯನ್ ಎಂಬಾಪೆ ಜತೆಗೆ ಮೆಸ್ಸಿ ಕಣಕ್ಕಿಳಿಯಲಿದ್ದಾರೆ.

    ಪಿಎಸ್‌ಜಿ ತಂಡದಲ್ಲಿ 30 ನಂಬರ್ ಜೆರ್ಸಿ
    ಅರ್ಜೆಂಟೀನಾ ಪರ 10 ನಂಬರ್ ಜೆರ್ಸಿ ತೊಡುವ ಮೆಸ್ಸಿ ಬಾರ್ಸಿಲೋನಾ ತಂಡದಲ್ಲೂ ಅದೇ ಸಂಖ್ಯೆಯ ಜೆರ್ಸಿ ಧರಿಸುತ್ತಿದ್ದರು. ಆದರೆ ಪಿಎಸ್‌ಜಿ ಪರ ಅವರ 30 ನಂಬರ್ ಜೆರ್ಸಿ ಧರಿಸಿ ಆಡಲಿದ್ದಾರೆ. ಪಿಎಸ್‌ಜಿ ತಂಡದಲ್ಲಿ ನೇಮರ್ ಈಗಾಗಲೆ 10 ನಂಬರ್ ಜೆರ್ಸಿ ಬಳಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಆದರೆ ಮೆಸ್ಸಿಗಾಗಿ 10 ನಂಬರ್ ಜೆರ್ಸಿ ಬಿಟ್ಟುಕೊಡಲು ನೇಮರ್ ಮುಂದಾಗಿದ್ದರೂ, ಅವರು ಅದನ್ನು ನಯವಾಗಿಯೇ ನಿರಾಕರಿಸಿದ್ದಾರೆ. ಮೆಸ್ಸಿ ಬಾರ್ಸಿಲೋನಾ ಕ್ಲಬ್ ಪರ ಮೊದಲ ಬಾರಿಗೆ ಆಡಿದಾಗ 30 ನಂಬರ್ ಜೆರ್ಸಿಯನ್ನೇ ಧರಿಸಿದ್ದರಂತೆ! ಈ ಮೂಲಕ ಬಾರ್ಸಿಲೋನಾ ಜತೆಗಿನ ಭಾವನಾತ್ಮಕ ನಂಟನ್ನು ಮೆಸ್ಸಿ ಇನ್ನೂ ಉಳಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ.

    ಲಿಯೋನೆಲ್ ಮೆಸ್ಸಿ ಅವರ ಹೊಸ ಫುಟ್‌ಬಾಲ್ ಕ್ಲಬ್, ಜೆರ್ಸಿ ನಂಬರ್ ಯಾವುದು ಗೊತ್ತೇ?

    13ನೇ ವಯಸ್ಸಿನಲ್ಲೇ ಬಾರ್ಸಿಲೋನಾ ಕ್ಲಬ್ ಸೇರಿದ್ದ ಮೆಸ್ಸಿ, ಅದರ ಪರ ಒಟ್ಟಾರೆ 672 ಗೋಲು ಬಾರಿಸಿದ್ದರು. ಈ ಪೈಕಿ 2012-13ರ ಸಾಲಿನಲ್ಲೇ ದಾಖಲೆಯ 133 ಗೋಲು ಸಿಡಿಸಿದ್ದರು. 8 ಬಾರಿ ಸ್ಪಾನಿಷ್ ಲೀಗ್ ಮತ್ತು 6 ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆಲುವು ಕಂಡಿದ್ದರು. ಇತ್ತೀಚೆಗೆ ಅರ್ಜೆಂಟೀನಾ ಪರ ಕೋಪಾ ಅಮೆರಿಕ ಪ್ರಶಸ್ತಿ ಜಯಿಸುವ ಮೂಲಕ ಬಹುದಿನಗಳ ಕನಸು ನನಸಾಗಿಸಿದ್ದ ಮೆಸ್ಸಿ, ಮುಂದಿನ ವರ್ಷದ ಫಿಫಾ ವಿಶ್ವಕಪ್‌ನಲ್ಲೂ ಗೆಲುವು ಕಾಣುವ ಮೂಲಕ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ ಹೇಳುವ ಮಹದಾಸೆ ಹೊಂದಿದ್ದಾರೆ.

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts