ಬರುತ್ತಿದ್ದಾರೆ ಲಕ್ಷೋಪಲಕ್ಷ ಜನ; ನಾಳೆ ಬೆಳಗ್ಗೆವರೆಗೂ ಮುಂದುವರೆಯುವುದೇ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ?

blank

ವಿಜಯಪುರ: ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಕಾರಣಕ್ಕೆ, ಇಂದು ಸಂಜೆಗೆ ಅಂತಿಮಗೊಳ್ಳಬೇಕಿದ್ದ ಅಂತಿಮ ದರ್ಶನದ ವ್ಯವಸ್ಥೆಯನ್ನು ನಾಳೆವರೆಗೆ ಮುಂದುವರಿಸಲಾಗುವುದೇ? ಇಂಥದೊಂದು ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ, ‘ಪರಮಪೂಜ್ಯರ ದರ್ಶನಕ್ಕೆ ತಂಡೋಪತಂಡವಾಗಿ ಭಕ್ತರ ಆಗಮನದ ಕಾರಣಕ್ಕೆ, ಇಂದು ಸಂಜೆ 4 ಗಂಟೆಗೆ ಮುಗಿಯಬೇಕಿದ್ದ ದರ್ಶನ ಕಾರ್ಯವನ್ನು ಮುಂದುವರಿಸಬೇಕಾಗುತ್ತದೆ… ಎಷ್ಟೇ ತಡವಾದರೂ ಚಿಂತೆಯಿಲ್ಲ, ಎಲ್ಲ ಸದ್ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ, ಯಾರೂ ಆತಂಕ ಪಡುವುದು ಬೇಡ, ಚಿಂತೆ ಬೇಡ…’ ಎಂದು ವಿನಂತಿಸಿಕೊಂಡಿದ್ದಾರೆ.

‘ಭಕ್ತರು ತಮ್ಮ ತಮ್ಮ ಸ್ಥಳಗಳಿಂದಲೇ ಮಾಧ್ಯಮದ ಮೂಲಕ ದರ್ಶನ ಪಡೆದುಕೊಳ್ಳಬಹುದು, ಇಲ್ಲಿಗೆ ಬಂದ ಭಕ್ತರಿಗೆ ನಿರಾಸೆಯಾಗುವುದಿಲ್ಲ, ನೂಕುನುಗ್ಗಲಿಗೆ ಅವಕಾಶ ಕೊಡದೆ, ಶಾಂತಿಯಿಂದ, ಭಕ್ತಿಯಿಂದ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಿ…’ ಎಂದು ಶ್ರೀ ವಚನಾನಂದ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ವಿಶ್ವಸನೀಯ ಮೂಲಗಳ ಪ್ರಕಾರ, ಸದ್ಯಕ್ಕೆ ಶ್ರೀಗಳ ಅಂತಿಮ ಮೆರವಣಿಗೆ ಆರಂಭವಾಗಿದ್ದು, ಆಶ್ರಮ ತಲುಪಿದ ನಂತರ ಅಲ್ಲಿ ಸಾವಿರ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ, ಸರಿಸುಮಾರು 8 ಗಂಟೆಯಿಂದ 9 ಗಂಟೆ ಆಗಬಹುದು ಎಂದು ತಿಳಿದುಬಂದಿದೆ.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…