More

    ಚಳಿಗಾಲದಲ್ಲಿ ಎಲೆಕೋಸು ಸೇವನೆ ಚರ್ಮದ ಆರೋಗ್ಯಕ್ಕೆ ಸಹಕಾರಿ

    ಅಶ್ವಿನಿ ಎಚ್.ಆರ್, ಬೆಂಗಳೂರು

    ಚಳಿಗಾಲ ಬಂತೆಂದರೆ ಅನೇಕರ ಮನೆಯಲ್ಲಿ ಆಲೂಗಡ್ಡೆ-ಎಲೆಕೋಸು ಕರಿ, ಎಲೆಕೋಸು ಫ್ರೈ, ಎಲೆಕೋಸು ಪರಾಟ…ಹೀಗೆ ಬಗೆ ಬಗೆಯ ಎಲೆಕೋಸಿನ ಖಾದ್ಯಗಳು ಸಿದ್ಧವಾಗುತ್ತವೆ. ಜನರು ಥಂಡಿ ಕಾಲದಲ್ಲಿ ಎಲೆಕೋಸಿನ ರುಚಿ ನೋಡಲು ಹೆಚ್ಚು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಎಲೆಕೋಸು ಎಲ್ಲ ಋತುವಿನಲ್ಲಿ ಲಭ್ಯವಿದ್ದರೂ, ಇದನ್ನು ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚು ಉಪಯೋಗಿಸಲು ಕಾರಣವೂ ಇದೆ. ಎಲೆಕೋಸಿನಲ್ಲಿ ವಿಟಮಿನ್ ಸಿ, ಫೈಬರ್, ಪ್ರೋಟಿನ್, ರಂಜಕವಿದ್ದು, ಇದರಿಂದ ದೇಹಕ್ಕೆ ಹೆಚ್ಚು ಪ್ರಯೋಜನವಿದೆ. ಎಲೆಕೋಸಿನಲ್ಲಿ ಅನೇಕ ವಿಧಗಳಿದ್ದು, ಉಪಯೋಗಗಳು ಒಂದೇ ಆಗಿವೆ. ಹಾಗಾದರೆ ನಮ್ಮ ಆಹಾರದಲ್ಲಿ ಎಲೆಕೋಸು ಸೇರಿಸುವುದರಿಂದ ಹಾಗೂ ಚಳಿಗಾಲದಲ್ಲಿ ಎಲೆಕೋಸು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ ಬನ್ನಿ…

    ತೂಕ ನಿಯಂತ್ರಿಸಲು ಸಹಕಾರಿ
    ಪರಾಟ, ಪಕೋಡ ತಿನ್ನುವುದರಿಂದ ದಪ್ಪಗಾಗುತ್ತೇವೆ ಎಂದು ಯೋಚಿಸುವವರು ಎಲೆಕೋಸಿನ ಖಾದ್ಯಗಳನ್ನು ಸೇವಿಸಿ. ಇದು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ತರಕಾರಿ ತಿನ್ನುವುದರಿಂದ ಬೊಜ್ಜು ಕೂಡ ಬೆಳೆಯುವುದಿಲ್ಲ. ಅಷ್ಟೇ ಅಲ್ಲ, ಎಲೆಕೋಸು ಸೇವನೆಯಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಇದು ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹ ಸಹಕಾರಿ. ಒಟ್ಟಾರೆ ಎಲೆಕೋಸು ಸೇವಿಸಲು ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು.

    ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು
    ಎಲೆಕೋಸಿನಲ್ಲಿ ವಿಟಮಿನ್ ಕೆ, ಅಯೋಡಿನ್ ಮತ್ತು ಆಂಥೋಸಯಾನಿನ್​ಗಳಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇವು ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಧ್ಯಯನಗಳ ಪ್ರಕಾರ ಎಲೆಕೋಸಿನಂತಹ ತರಕಾರಿಗಳು ಮರೆಗುಳಿ ಕಾಯಿಲೆಗೂ ಒಳ್ಳೆಯದು.

    ಹೀಗೆ ಸೇವಿಸಿ
    ಯಾವಾಗಲೂ ತಾಜಾ ಎಲೆಕೋಸು ಖರೀದಿಸಿ. ಎಲೆಕೋಸನ್ನು ಚೆನ್ನಾಗಿ ತೊಳೆದು, ಕುದಿಸಿ ಅಥವಾ ಹುರಿಯಿರಿ ಅಥವಾ ಬೇಯಿಸಿ. ಸಾಧ್ಯವಾದಷ್ಟು ಹಸಿಯಾಗಿ ತಿನ್ನುವುದನ್ನು ತಪ್ಪಿಸಿ. ಕೆಲವರಿಗೆ ಎಲೆಕೋಸು ತಿಂದರೆ ಅಲರ್ಜಿಯುಂಟಾಗುತ್ತದೆ. ಅಂತಹವರು ಎಲೆಕೋಸಿನಿಂದ ದೂರವಿರಿ. ನೀವು ಈಗಾಗಲೇ ಮಧುಮೇಹ ಔಷಧಗಳನ್ನು ಸೇವಿಸುತ್ತಿದ್ದರೆ, ಎಲೆಕೋಸು ಸೇವಿಸುವುದನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಕೇಳಿ. ಮೊದಲೇ ಕತ್ತರಿಸಿಟ್ಟ ಎಲೆಕೋಸು ಖರೀದಿಸುವುದನ್ನು ತಪ್ಪಿಸಿ. ಏಕೆಂದರೆ ಅದನ್ನು ಕತ್ತರಿಸಿ ದೀರ್ಘಕಾಲ ಇಟ್ಟಾಗ ಅದರಲ್ಲಿರುವ ಪೌಷ್ಟಿಕಾಂಶ ನಷ್ಟವಾಗಿರುತ್ತದೆ.

    ಚರ್ಮದ ಕ್ಯಾನ್ಸರ್ ತಡೆಗಟ್ಟುತ್ತದೆ
    ಎಲೆಕೋಸಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಪೋಷಕಾಂಶವು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇಲಿಗಳ ಮೇಲೆ ಅಧ್ಯಯನ ನಡೆಸಿದ ಪ್ರಕಾರ, ಚರ್ಮದ ಕ್ಯಾನ್ಸರ್ ತಡೆಗಟ್ಟುವಲ್ಲಿ ಕೆಂಪು ಎಲೆಕೋಸು ಬಹುಮುಖ್ಯ ಪಾತ್ರವನ್ನು ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts