More

    ಬೆಳ್ಳುಳ್ಳಿ ಸೇವನೆಯ ಅಡ್ಡ ಪರಿಣಾಮಗಳೇನು? ಅದನ್ನು ಸೇವಿಸಬೇಕಾದ ಸರಿಯಾದ ಕ್ರಮ ಇಲ್ಲಿದೆ!

    ಬೆಂಗಳೂರು: ಹಲವಾರು ಶತಮಾನದಿಂದ ಭಾರತೀಯ ಆಹಾರದಲ್ಲಿ ಬೆಳ್ಳುಳ್ಳಿ ಒಂದು ಪ್ರಮುಖವನ್ನು ಪಾತ್ರವನ್ನು ನಿರ್ವಹಿಸುತ್ತಿದೆ. ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚು ಮಾಡುವುದರ ಜತೆಗೆ ಆರೋಗ್ಯದ ದೃಷ್ಟಿಯಲ್ಲೂ ಉಪಯೋಗಕಾರಿ. ವಿಶೇಷವಾಗಿ ಚಳಿಗಾಲದಲ್ಲಿ, ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ಜನರು ಬೆಳ್ಳುಳ್ಳಿಯಿಂದ ದೂರವಿರುವುದು ಉತ್ತಮ.

    ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಯಾರು ಸೇವಿಸಬಾರದು?

    1. ಗರ್ಭಿಣಿಯರು ಬೆಳ್ಳುಳ್ಳಿಯನ್ನು ಅತಿಯಾಗಿ ತಿನ್ನಬಾರದು.
    2. ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಳ್ಳುಳ್ಳಿಯಿಂದ ದೂರವಿರಬೇಕು
    3. ದೇಹದ ದುರ್ವಾಸನೆಯೊಂದಿಗೆ ಹೋರಾಡುವ ಜನರು ತಿನ್ನಬಾರದು,
    4. ಅಸಿಡಿಟಿ ಸಮಸ್ಯೆ ಹೊಂದಿರುವ ಜನರು
    5. ಭೇದಿಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಪ್ಪಿಸಬೇಕು.
    6. ರಕ್ತ ತೆಳುವು ಅಥವಾ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಹ ಬೆಳ್ಳುಳ್ಳಿಯನ್ನು ತಿನ್ನಬಾರದು.

    ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು

    ಬೆಳ್ಳುಳ್ಳಿ ಬಹಳಷ್ಟು ಜನರ ದೇಹಕ್ಕೆ ಹೊಂದುವುದಿಲ್ಲ. ಅದನ್ನು ಹೊರತು ಪಡಿಸಿದರೆ ಬೆಳ್ಳುಳ್ಳಿ ಒಳ್ಳೆಯ ಮೆಡಿಸಿನ್ ರೀತಿ ಕೆಲಸ ಮಾಡುತ್ತದೆ. ಹೃದಯದ ಆರೋಗ್ಯದಿಂದ ಹಿಡಿದು ರೋಗನಿರೋಧಕ ಶಕ್ತಿಯವರೆಗೆ ಎಲ್ಲದಕ್ಕೂ ಇದರ ಪ್ರಯೋಜನಗಳಿವೆ:

    1. ಇನ್​ಫೆಕ್ಷನ್​​ ವಿರುದ್ಧ ಹೊರಾಡುತ್ತದೆ.
    2. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
    3. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
    4. ಹೈಪರ್​ ಟೆನ್ಷನ್​ ಅನ್ನು ತಡೆಯುತ್ತದೆ.

    ಬೆಳ್ಳುಳ್ಳಿಯನ್ನು ಸೇವಿಸುವ ಸರಿಯಾದ ಕ್ರಮ

    ತಜ್ಱರ ಪ್ರಕಾರ ಬೆಳ್ಳುಳ್ಳಿಯನ್ನು ಬೇಯಿಸಿ ಸೇವಿಸುವುದುಕ್ಕಿಂತ ಹಸಿಯಾಗಿ ತಿನ್ನುವುದು ಉತ್ತಮ. ಏಕೆಂದರೆ ಬೆಳ್ಳುಳ್ಳಿಯನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಆ್ಯಂಟಿಆಕ್ಸಿಡೆಂಟ್​​ ನಿಷ್ಕ್ರಿಯಗೊಳ್ಳುತ್ತದೆ. ಬೆಳ್ಳುಳ್ಳಿಯನ್ನು ಸೇವಿಸುವಾಗ ಪ್ರಮಾಣದ ಬಗ್ಗೆ ನಿಗವಹಿಸುವುದು ಬಹಳ ಮುಖ್ಯ. (ಏಜೆನ್ಸೀಸ್)

    ಕಣ್ಣಿಗೊಂದು ಸವಾಲ್​: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರೋ ಹುಲಿ ಗುರುತಿಸಲು ಸಾಧ್ಯ!

    ಮರಾಠಿಯಲ್ಲೂ ಅದ್ಭುತ ಪ್ರವಚನ ನೀಡುತ್ತಿದ್ದ ಸಿದ್ಧೇಶ್ವರ ಶ್ರೀಗಳು: ನೆನಪು ಮಾಡಿಕೊಂಡ ಮಹಾರಾಷ್ಟ್ರ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts