More

    2023ರಲ್ಲಿ ಗುರಿ ಮುಟ್ಟಿದ ಗಿಲ್! ಹಳೇ ವರ್ಷದಂತೆ 2024 ಕೂಡ ಶುಭಮನ್​ ಪಾಲಿಗೆ ಸಿಹಿಯಾಗುತ್ತಾ?

    ನವದೆಹಲಿ: 2023ಕ್ಕೆ ಗುಡ್​ಬೈ ಹೇಳಿ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಅನೇಕರು ಈ ವರ್ಷದಲ್ಲಿ ಸಾಧಿಸಬೇಕಾದ ಅಥವಾ ಅನುಸರಿಸಬೇಕಾದ ತಮ್ಮದೇಯಾದ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲವರು ಹಿಂದಿನ ವರ್ಷದ ಗುರಿಗಳ ಸಾಧನೆ ಬಗ್ಗೆ ವಿಮರ್ಶ ಮಾಡುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಶುಭಮನ್​ ಗಿಲ್​ ಅವರ 2023ನೇ ವರ್ಷದ ಬಹುತೇಕ ಸಂಕಲ್ಪಗಳು ಈಡೇರಿದ್ದು, ಅದನ್ನು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

    ಗಿಲ್​ ಅವರು 2023ರ ಗುರಿಗಳನ್ನು ಫೋಟೋಗಳೊಂದಿಗೆ ಮೆಲುಕು ಹಾಕಿದ್ದಾರೆ. ಕೇವಲ 24 ವರ್ಷಕ್ಕೆ ಸ್ಟಾರ್​ ಆಟಗಾರನಾಗಿ ಹೊರ ಹೊಮ್ಮಿರುವ ಗಿಲ್​, ಎಲ್ಲ ಮಾದರಿಯ ಪಂದ್ಯಗಳಲ್ಲೂ ತಂಡಕ್ಕೆ ಅನಿವಾರ್ಯ ಆಟಗಾರ ಎನಿಸಿಕೊಂಡಿದ್ದಾರೆ. ಗಿಲ್​, ವೃತ್ತಿ ಜೀವನದ ಪಾಲಿಗೆ 2023 ಮಹತ್ವದ ವರ್ಷವಾಗಿದೆ. ಈ ವರ್ಷದಲ್ಲಿ ಎಲ್ಲ ಮಾದರಿ ಪಂದ್ಯಗಳಿಂದ 7 ಶತಕಗಳೊಂದಿಗೆ 2 ಸಾವಿರಕ್ಕೂ ಅಧಿಕ ರನ್​ ಕಲೆ ಹಾಕುವ ಮೂಲಕ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ.

    2023ರಲ್ಲಿ ಗಿಲ್​ ಅವರು ಕೆಲವೊಂದಿಷ್ಟು ಗುರಿಗಳನ್ನು ಹಾಕಿಕೊಂಡಿದ್ದರು. ಅವುಗಳಲ್ಲಿ ಬಹುತೇಕ ಗುರಿಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಬೇಕೆಂಬುದು ಪ್ರಮುಖ ಗುರಿಯಾಗಿತ್ತು. ಅದು ಕೂಡ ನೆರವೇರಿದೆ. ಅಲ್ಲದೆ, ಗಿಲ್ ಅವರು ವಿಶ್ವಕಪ್ ಮತ್ತು ಐಪಿಎಲ್​ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಮೇಲೆ ತಮ್ಮ ಕಣ್ಣಿಟ್ಟಿದ್ದರು. ಎರಡೂ ಪಂದ್ಯಾವಳಿಗಳಲ್ಲಿ ಗಮನಾರ್ಹ ಪ್ರಭಾವ ಬೀರಲು ತಮ್ಮ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದರು.

    ಒಂದು ತಿಂಗಳ ಹಿಂದಷ್ಟೇ ಮುಗಿದ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶುಭಮನ್​ ಗಿಲ್​ ತಮ್ಮ ಅಮೋಘ ಬ್ಯಾಟಿಂಗ್​ ಕೌಶಲವನ್ನು ಪ್ರದರ್ಶಿಸಿದರು. ಒಟ್ಟು 9 ಇನ್ನಿಂಗ್ಸ್​ ಆಡಿದ ಗಿಲ್​, 44.25 ರನ್​ ಸರಾಸರಿಯಲ್ಲಿ 4 ಅರ್ಧಶತಕಗಳೊಂದಿಗೆ 354 ರನ್​ ಕಲೆ ಹಾಕಿದರು. ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ಗಿಲ್​ ಅವರಿಗೆ ಸಾಧ್ಯವಾಗದಿದ್ದರೂ, ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಮ್ಮ ಪ್ರಾಬಲ್ಯ ಮೆರೆದರು. ಕೇವಲ 17 ಇನ್ನಿಂಗ್ಸ್‌ಗಳಲ್ಲಿ 890 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್​ ಕಪ್​ ಗೆಲ್ಲುವ ತಮ್ಮ ಗುರಿಯನ್ನು ಸಾಧಿಸಿದರು.

    ಈ ಎಲ್ಲ ಕಾರಣಗಳಿಂದ ಗಿಲ್​ ಅವರಿಗೆ 2023 ಎಂದಿಗೂ ನೆನಪಿನಲ್ಲಿ ಉಳಿಯುವಂತಹ ವರ್ಷವಾಗಿದೆ. ಹೀಗಾಗಿ ಹಳೆಯ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ಗಿಲ್​, 2023ಕ್ಕೆ ಬೀಳ್ಕೊಡಿಗೆ ನೀಡಿದ್ದಾರೆ. 2023 ಅಂತ್ಯಗೊಳ್ಳುವುದರೊಂದಿಗೆ, ಈ ವರ್ಷವು ಉತ್ತಮ ಅನುಭವಗಳು, ವಿನೋದದ ಕ್ಷಣಗಳು ಮತ್ತು ಸಾಕಷ್ಟು ಉತ್ತಮ ಕಲಿಕೆಗಳಿಂದ ತುಂಬಿತ್ತು. ವರ್ಷದ ಅಂತ್ಯವು ಯೋಜಿಸಿದಂತೆ ನಡೆಯಲಿಲ್ಲ, ಆದರೆ ನಾವು ನಮ್ಮ ಗುರಿಗಳ ಹತ್ತಿರಕ್ಕೆ ಬಂದಿದ್ದೇವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಮುಂಬರುವ ವರ್ಷವು ತನ್ನದೇ ಆದ ಸವಾಲುಗಳನ್ನು ಮತ್ತು ಅವಕಾಶಗಳನ್ನು ತರುತ್ತದೆ. ಆಶಾದಾಯಕವಾಗಿ ನಾವು 2024ರಲ್ಲಿ ನಮ್ಮ ಗುರಿಗಳಿಗೆ ಹತ್ತಿರವಾಗುತ್ತೇವೆ. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಪ್ರೀತಿ, ಸಂತೋಷ ಮತ್ತು ಶಕ್ತಿಯನ್ನು ಕಂಡುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಗಿಲ್​ ಅವರು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    2023 ರಲ್ಲಿ ಗಿಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದರು. ಏಳು ಶತಕಗಳು ಸೇರಿದಂತೆ 52 ಇನ್ನಿಂಗ್ಸ್‌ಗಳಲ್ಲಿ 2154 ರನ್‌ ಕಲೆ ಹಾಕುವ ಮೂಲಕ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. ಹೆಚ್ಚುವರಿಯಾಗಿ, ಅವರು ಅದೇ ವರ್ಷದಲ್ಲಿ ಏಕದಿನ ಪಂದ್ಯಗಳಲ್ಲಿ ಪ್ರಮುಖ ರನ್ ಗಳಿಸುವವರಾಗಿ ತಮ್ಮ ಅಸಾಧಾರಣ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಇದಲ್ಲದೆ, ಗಿಲ್ ಅವರು ತಮ್ಮ ಫೀಲ್ಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಕಳೆದ ವರ್ಷ ಗಿಲ್​, ಒಟ್ಟು 24 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಅತ್ಯಧಿಕ ಸಂಖ್ಯೆಯ ಕ್ಯಾಚ್‌ಗಳನ್ನು ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಾಯಿ ಪಲ್ಲವಿ ದತ್ತು ಪುತ್ರಿನಾ? ಅವರ ನಿಜವಾದ ತಂದೆ-ತಾಯಿ ಯಾರೆಂಬ ರಹಸ್ಯ ಬಿಚ್ಚಿಟ್ಟ ಸ್ಟಾರ್ ಬ್ಯೂಟಿ!

    IPS ಹುದ್ದೆಗೆ ರಾಜೀನಾಮೆ ನೀಡಿದ ಅಸ್ಸಾಂ ಸಿಂಗಂ! ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts