More

    10 ರೂಪಾಯಿ ಷೇರು 10 ರೂಪಾಯಿ ಲಾಭಾಂಶ ನೀಡಲಿದೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್​

    ಮುಂಬೈ: ಹೂಡಿಕೆದಾರರಿಂದ ಭಾರಿ ಲಾಭ ಗಳಿಸಿಕೊಟ್ಟಿರುವ ಈಗ ಲಾಭಾಂಶ (dividend) ನೀಡಲು ಸಜ್ಜಾಗಿದೆ. ಶ್ರೀರಾಮ್ ಫೈನಾನ್ಸ್ ಕಂಪನಿಯ ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ ಈ ಡಿವಿಡೆಂಡ್​ ನೀಡಲಾಗುತ್ತದೆ.

    ಶ್ರೀರಾಮ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ 1,818.3 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು 2.3% ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ, 1,777 ಕೋಟಿ ರೂ. ನಿವ್ವಳ ಲಾಭವನ್ನು ಕಂಪನಿ ದಾಖಲಿಸಿತ್ತು.

    ಈಗ ಈ ಕಂಪನಿಯು ಒಂದು ಷೇರಿಗೆ 10 ರೂಪಾಯಿ ಲಾಭಾಂಶ ನೀಡಲು ಮುಂದಾಗಿದೆ.

    ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಮತ್ತೊಮ್ಮೆ ಶ್ರೀರಾಮ್ ಫೈನಾನ್ಸ್ ಡಿವಿಡೆಂಡ್ ಅನ್ನು ಘೋಷಿಸಿದೆ. ಈ ಬಾರಿ ಕಂಪನಿಯು 1 ಷೇರಿನ ಮೇಲೆ 10 ರೂಪಾಯಿ ಲಾಭಾಂಶವನ್ನು ನೀಡಲಿದೆ. ಇದಕ್ಕಾಗಿ ಫೆಬ್ರವರಿ 6, ಮಂಗಳವಾರ ದಿನವನ್ನು ನಿಗದಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

    ಈ ಕಂಪನಿಯು 2023 ರಲ್ಲಿ ಹೂಡಿಕೆದಾರರಿಗೆ ಲಾಭಾಂಶವನ್ನು ಮೂರು ಬಾರಿ ನೀಡಿದೆ.
    ಅರ್ಹ ಹೂಡಿಕೆದಾರರಿಗೆ ಪ್ರತಿ ಷೇರಿಗೆ ರೂ 55 ಡಿವಿಡೆಂಡ್​ ಲಭಿಸಿತ್ತು.. 2022 ರಲ್ಲಿಯೂ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗಿತ್ತು.

    ಈಗ ಈ ಕಂಪನಿಯು ಬರುವ ಜನವರಿ 23 ರಂದು 10 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 10 ರೂಪಾಯಿ ಲಾಭಾಂಶ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

    ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ

    ಎಟಿಎಂ ಪೂರೈಸುವ ಕಂಪನಿಯ ರೂ 22 ಬೆಲೆಯ ಷೇರು ಖರೀದಿಗೆ ಒಲವು: ಒಂದೇ ದಿನದಲ್ಲಿ 11% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts