ಮುಂಬೈ: ಬಾಲಿವುಡ್ ನಟ ಹರ್ಮನ್ ಬವೇಜಾ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಲವ್ ಸ್ಟೋರಿ 2050, ವಾಟ್ಸ್ ಯುವರ್ ರಾಶಿಯಂತಹ ಚಲನಚಿತ್ರಗಳನ್ನು ಇದರಲ್ಲಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಅಂತಹ ವಿಶೇಷ ಸಾಧನೆಯನ್ನೇನೂ ಏನನ್ನೂ ಮಾಡಲಿಲ್ಲ.
ಆದರೆ, ಹರ್ಮನ್ ಅವರು ಷೇರು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ಐಪಿಒ ಮಾತ್ರ ಸಾಕಷ್ಟು ಸದ್ದು, ಮಾಡುತ್ತಿದ್ದು ಹೂಡಿಕೆದಾರರಿಗೆ ಸಾಕಷ್ಟು ಲಾಭ ತರುವ ನಿರೀಕ್ಷೆ ಮೂಡಿಸಿದೆ.
ಹಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಹರ್ಮನ್ ಬವೇಜಾ ಅವರ ಕಂಪನಿಯ ಐಪಿಒ ಬರಲಿದೆ. ಈ ಕಂಪನಿಯ ಹೆಸರು ಬವೇಜಾ ಸ್ಟುಡಿಯೋಸ್ ಲಿಮಿಟೆಡ್ (Baweja Studios Limited)
ಈ ಕಂಪನಿಯ ಐಪಿಒ ಜನವರಿ 29ರಿಂದ ಫೆಬ್ರವರಿ 1ರವರೆಗೆ ತೆರೆದಿರುತ್ತದೆ. ಇದರರ್ಥ ಹೂಡಿಕೆದಾರರು ಈ ಐಪಿಒನಲ್ಲಿ ಫೆಬ್ರವರಿ 1 ರವರೆಗೆ ಬೆಟ್ಟಿಂಗ್ ಮಾಡಬಹುದು.
ಐಪಿಒಗೆ ಅರ್ಜಿ ಸಲ್ಲಿಸುವ ಅವಧಿಗೆ ಮುಂಚಿತವಾಗಿಯೇ ಗ್ರೇ ಮಾರ್ಕೆಟ್‌ನಲ್ಲಿ ಈ ಐಪಿಒ 25 ರೂಪಾಯಿ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ.
ಎಷ್ಟು ರೂಪಾಯಿಗಳ ಪಟ್ಟಿ?:
ಜನವರಿ 27 ರಂದು ಈ ಐಪಿಒದ ಗ್ರೇ ಮಾರ್ಕೆಟ್ ಪ್ರೀಮಿಯಂ 25 ರೂ. ಆಗಿದೆ. ಇದೇ ಸಮಯದಲ್ಲಿ, ಈ ಐಪಿಒ ವಿತರಣೆಯ ಬೆಲೆಯನ್ನು ಪ್ರತಿ ಷೇರಿಗೆ 170-180 ರೂಪಾಯಿ ನಿಗದಿಪಡಿಸಲಾಗಿದೆ.
ಗ್ರೇ ಮಾರ್ಕೆಟ್ ಪ್ರೀಮಿಯಂ ಮತ್ತು ವಿತರಣೆಯ ಬೆಲೆಯನ್ನು ಸಂಯೋಜಿಸಿದರೆ 200 ರೂ.ಗಿಂತ ಹೆಚ್ಚಿನ ಬೆಲೆಯಲ್ಲಿ ಈ ಐಪಿಒ ಷೇರುಗಳು ಮಾರುಕಟ್ಟೆಯಲ್ಲಿ ಮೊದಲ ದಿನವೇ ಪಟ್ಟಿಯಾಗುವ ಸಾಧ್ಯತೆಯಿದೆ.
ಈ ಐಪಿಒ ಗಾತ್ರವು 97.20 ಕೋಟಿ ರೂ.ಗಳಾಗಿದೆ. ಇದು 72 ಕೋಟಿ ರೂ.ಗಳ ತಾಜಾ ವಿತರಣೆ ಮತ್ತು 25.20 ಕೋಟಿ ರೂ.ಗಳ OFS ಒಳಗೊಂಡಿದೆ. ಈ ಐಪಿಒನ ಒಂದು ಲಾಟ್‌ನಲ್ಲಿ 800 ಷೇರುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಕನಿಷ್ಠ 1,44,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಫೆಬ್ರವರಿ 5 ರಂದು ಷೇರುಗಳ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ತದನಂತರ ಮಂಗಳವಾರ, ಫೆಬ್ರವರಿ 6 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಈ ಕಂಪನಿಯ ಷೇರು ಪಟ್ಟಿ ಮಾಡಬಹುದು.
23 ವರ್ಷದ ಕಂಪನಿ:
ಬವೇಜಾ ಸ್ಟುಡಿಯೋಸ್ ಲಿಮಿಟೆಡ್ ಕಂಪನಿಯು 23 ವರ್ಷ ಹಳೆಯದು. 2001 ರಲ್ಲಿ ಸ್ಥಾಪನೆಯಾದ ಬವೇಜಾ ಸ್ಟುಡಿಯೋಸ್ ಲಿಮಿಟೆಡ್, ಚಾರ್ ಸಾಹಿಬ್ಜಾದೆ, ಲವ್ ಸ್ಟೋರಿ 2050, ಕಯಾಮತ್, ಸ್ಪೀಡ್, ಮೇನ್ ಮುಂತಾದ ಚಲನಚಿತ್ರಗಳನ್ನು ನಿರ್ಮಿಸುವ ನಿರ್ಮಾಣ ಕಂಪನಿಯಾಗಿದೆ.
ಐಸಾ ಹಿ ಹೂನ್, ದಿಲ್ಜಲೆ, ತೀಸ್ರಿ ಆಂಖ್ ಮುಂತಾದ ಹಿಂದಿ ಮತ್ತು ಪಂಜಾಬಿ ಚಿತ್ರಗಳನ್ನು ತಯಾರಿಸಿದೆ. . ಇವುಗಳಲ್ಲಿ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಭೌಕಲ್ ಎಂಬ ವೆಬ್ ಸೀರೀಸ್ ಕೂಡ ನಿರ್ಮಾಣ ಮಾಡಿದೆ.
ಈ ಕಂಪನಿಯ ಪ್ರವರ್ತಕರು ಹರ್ಜಸ್ಪಾಲ್ ಸಿಂಗ್ ಬವೇಜಾ, ಪರಮ್ಜೀತ್ ಹರ್ಜಸ್ಪಾಲ್, ಹರ್ಮನ್ ಬವೇಜಾ ಮತ್ತು ರೊವೆನಾ ಬವೇಜಾ. ಹರ್ಮನ್ ಬವೇಜಾ ಕಂಪನಿಯ ಸಿಇಒ ಕೂಡ ಆಗಿದ್ದಾರೆ.
ಎಟಿಎಂ ಪೂರೈಸುವ ಕಂಪನಿಯ ರೂ 22 ಬೆಲೆಯ ಷೇರು ಖರೀದಿಗೆ ಒಲವು: ಒಂದೇ ದಿನದಲ್ಲಿ 11% ಹೆಚ್ಚಳ
ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ