More

    ಎಟಿಎಂ ಪೂರೈಸುವ ಕಂಪನಿಯ ರೂ 22 ಬೆಲೆಯ ಷೇರು ಖರೀದಿಗೆ ಒಲವು: ಒಂದೇ ದಿನದಲ್ಲಿ 11% ಹೆಚ್ಚಳ

    ಮುಂಬೈ: ವಕ್ರಾಂಗಿ ಲಿಮಿಟೆಡ್ (Vakrangee Ltd). ಇದು 1990 ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿ, ಐಟಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದೆ. ಇದು ತನ್ನ ಸೇವೆಗಳನ್ನು ಗ್ರಾಮೀಣ, ಅರೆ-ನಗರ ಮತ್ತು ನಗರ ಜನಸಂಖ್ಯೆಗೆ ವಿಸ್ತರಿಸಿದೆ.. ಕಂಪನಿ ಎಟಿಎಂ, ಇ-ಕಾಮರ್ಸ್ ಮತ್ತು
    ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತದೆ.

    ಕಳೆದ ಗುರುವಾರ ಷೇರುಪೇಟೆ ಮಂದಗತಿಯಲ್ಲಿದ್ದರೂ ಈ ವಾತಾವರಣದ ನಡುವೆಯೂ ಕೆಲ ಪೆನ್ನಿ ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದವು. ಐಟಿ ವಲಯಕ್ಕೆ ಸಂಬಂಧಿಸಿದ ಇಂತಹ ಒಂದು ಪೆನ್ನಿ ಷೇರು ಕಂಪನಿ ವಕ್ರಾಂಗಿ ಲಿಮಿಟೆಡ್. ಈ ಪೆನ್ನಿ ಸ್ಟಾಕ್ ಗುರುವಾರ ಅಂದಾಜು ಶೇಕಡಾ 11ಕ್ಕಿಂತಲೂ ಹೆಚ್ಚಿನ ಏರಿಕೆ ಕಂಡಿದೆ. ವಕ್ರಾಂಗಿ ಲಿಮಿಟೆಡ್​ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇಕಡಾ 19ರಷ್ಟು ಏರಿಕೆಯಾಗಿದೆ.

    ಗಣರಾಜ್ಯೋತ್ಸವದ ಕಾರಣ ಜನವರಿ 26 ಶುಕ್ರವಾರದಂದು ಷೇರು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.

    ವಾರದ ಕೊನೆಯ ವಹಿವಾಟಿನ ದಿನವಾದ ಗುರುವಾರ, ವಕ್ರಾಂಗಿ ಲಿಮಿಟೆಡ್‌ನ ಷೇರಿನ ಬೆಲೆಯು ಹಿಂದಿನಕ್ಕಿಂತ 2.30 ರೂಪಾಯಿ ಹೆಚ್ಚಳ ಕಂಡು 22.85ಕ್ಕೆ ತಲುಪಿತು. ಈ ಮೂಲಕ 52 ವಾರದ ಗರಿಷ್ಠ ಸಮೀಪಕ್ಕೆ ಬಂದಿತು. ಕಳೆದ ವರ್ಷ ಫೆಬ್ರವರಿ 1 ರಂದು ಈ ಷೇರಿನ 52 ವಾರದ ಗರಿಷ್ಠ 26.05 ರೂ ಆಗಿದೆ. 52 ವಾರದ ಕನಿಷ್ಠ ಬೆಲೆ 13.70 ರೂ. ಇದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 2,423.11 ಕೋಟಿ ರೂಪಾಯಿ.

    ಈ ಕಂಪನಿಯಲ್ಲಿ ಪ್ರವರ್ತಕರ ಪಾಲು 42.60 ಪ್ರತಿಶತದಷ್ಟಿದೆ. ಅದೇ ಸಮಯದಲ್ಲಿ, 57.40 ರಷ್ಟು ಪಾಲು ಸಾರ್ವಜನಿಕರ ಒಡೆತನದಲ್ಲಿದೆ.

    ಈ ಕಂಪನಿಯಲ್ಲಿ ವಕ್ರಾಂತಿ ಹೋಲ್ಡಿಂಗ್​ ಪ್ರೈವೇಟ್​ ಲಿಮಿಟೆಡ್​ ಗರಿಷ್ಠ ಪಾಲನ್ನು ಹೊಂದಿದೆ. ಇದು 25,09,50,388 ಷೇರುಗಳನ್ನು ಹೊಂದಿದೆ. ಇದು ಪ್ರವರ್ತಕರ ಒಟ್ಟು ಪಾಲಿನ 23.69 ಪ್ರತಿಶತಕ್ಕೆ ಸಮನಾಗಿರುತ್ತದೆ. NJD ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕೂಡ ಪ್ರವರ್ತಕರಲ್ಲಿ 12 ಶೇಕಡಾಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ.

    ಈ ಕಂಪನಿಯು ಎಟಿಎಂ, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುವ ಮೂಲಕ ವಿವಿಧ ಪ್ರದೇಶಗಳಲ್ಲಿ ವಿಸ್ತರಿಸುತ್ತಿದೆ. ಈ ಕಂಪನಿಯು ದೇಶದ 31 ರಾಜ್ಯಗಳ 560 ಜಿಲ್ಲೆಗಳಲ್ಲಿ ಸೇವೆಯನ್ನು ಒದಗಿಸುತ್ತಿದೆ.

    ಇಂದು ಕಂಪನಿಯು ಗ್ರಾಮೀಣ ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ATM ಪೂರೈಕೆದಾರನಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಂಪನಿಯ ಸೇವಾ ಪಾಲುದಾರನಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts