More

    ನಾಲವಾರ ಶ್ರೀಗಳ ವಿಚಾರ ಸ್ಫೂರ್ತಿ

    ಶಹಾಬಾದ್: ನಮ್ಮ ಭಾಗದಲ್ಲಿನ ಮಠಗಳು ಬಸವ ತತ್ವ ಹಾಗೂ ಸಂವಿಧಾನದ ಆಶಯದಂತೆ ನಡೆಯುತ್ತಿವೆ. ನಾಲವಾರ ಮಠ ವೈಜ್ಞಾನಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ವಿಚಾರಗಳನ್ನು ಭಕ್ತರಲ್ಲಿ ಬೆಳೆಸುವ ಕೆಲಸ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ನಾಲವಾರ ಶ್ರೀಗಳ ವಿಚಾರಗಳು ಸ್ಫೂರ್ತಿಯಾಗಿದೆ ಎಂದು ಪಂಚಾಯತ್‌ರಾಜ್, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ನಾಲವಾರ ಮಠದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಶ್ರೀ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಭಾಗದ ಮಠಾಧೀಶರು ಕಾಯಕದ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮ ಸರ್ಕಾರವೂ ಬಸವಣ್ಣ, ಡಾ.ಅಂಬೇಡ್ಕರ್ ವಿಚಾರಧಾರೆಗಳಾದ ಕಾಯಕವೇ ಕೈಲಾಸ, ಸಮಬಾಳು, ಸಮಪಾಲು ತತ್ವದಡಿ ಕೆಲಸ ಮಾಡುತ್ತಿದೆ. ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ ಎಂದರು.

    ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ೧೨ನೇ ಶತಮಾನದ ಶರಣರ ವಚನಗಳಲ್ಲಿನ ಸಾರವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿ ಪ್ರಜಾ ಧರ್ಮವನ್ನು ಘೋಷಿಸಿದರು. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಲ್ಲಿ ಸಚಿವ ಪ್ರಿಯಂಕ್ ಖರ್ಗೆ ಅವರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.

    ಇಸ್ರೋ ಸಂಸ್ಥೆ ನಿರ್ದೇಶಕ ಎ.ಎಲ್.ರಾಮನಾಥನ್ ಮಾತನಾಡಿ, ವಿಜ್ಞಾನ ಮತ್ತು ಧರ್ಮ ರೈಲಿನ ಎರಡು ಹಳಿಗಳಿದ್ದಂತೆ. ನಾಲವಾರ ಮಠ ಧಾರ್ಮಿಕ ಹಾಗೂ ವೈಜ್ಞಾನಿಕ ಮನೋಭಾವ ಅಳವಡಿಸಿಕೊಂಡಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಇಸ್ರೋ ಸಂಸ್ಥೆ ಬಾಹ್ಯಾಕಾಶದಲ್ಲಿ ಗಗನಯಾನಿಗಳನ್ನು ಕಳಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಉದ್ಯಮಿ ಶಾಂತಗೌಡ ಪಾಟೀಲ್ ಅಲ್ಲೂರ್(ಕೆ), ಪ್ರಮುಖರಾದ ಡಾ.ತೋಟೇಂದ್ರ ವರ್ತೂರ, ನಾಗಲಿಂಗಯ್ಯ ಮಠಪತಿ, ಮಹಾದೇವ ಗಂವ್ಹಾರ್ ಇತರರಿದ್ದರು.

    ನೀಲು ಕಾಮಣ್ಣಿ, ಶ್ರೇಯಾ ಅವರು ಭರತನಾಟ್ಯ ಪ್ರದರ್ಶನ ಮಾಡಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು. ಚನ್ನಾರಡ್ಡಿ ಪಾಟೀಲ್ ತುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಿದ್ದರಾಜ ಕರೆಡ್ಡಿ, ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಶಾಂತಕುಮಾರ ಜೇರಟಗಿ ತಬಲಾ, ಸಿದ್ದಯ್ಯ ಪಡದಳ್ಳಿ ಹಾರ್ಮೋನಿಯಂ ಸಾಥ್ ನೀಡಿದರು.

    ಸಾಧಕರಿಗೆ ಶ್ರೀ ಸಿದ್ಧತೋಟೇಂದ್ರ ಪುರಸ್ಕಾರ
    ನಾಲವಾರ ಮಠದಿಂದ ಕೊಡಮಾಡುವ ಪ್ರತಿಷ್ಠಿತ ಶ್ರೀ ಸಿದ್ಧತೋಟೇಂದ್ರ ಪುರಸ್ಕಾರವನ್ನು ಇಬ್ಬರು ಸಾಧಕರಿಗೆ ನೀಡಲಾಯಿತು. ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಪರ ನಿರ್ದೇಶಕ ಎ.ಎಲ್. ರಾಮನಾಥನ್ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವ ಪರ ಪ್ರಾಚಾರ್ಯರು ಪ್ರಶಸ್ತಿ ಸ್ವೀಕರಿಸಿದರು. ಪುರಸ್ಕಾರವೂ ೧೦ ಸಾವಿರ ರೂ. ನಗದು, ಅರ್ಧ ತೊಲಾ ಬಂಗಾರವನ್ನು ಹೊಂದಿದೆ. ಹಂಪಿ ವಿವಿಯಿಂದ ನಾಡೋಜ ಗೌರವ ಪಡೆದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

    ನಾಲವಾರ ಮಠದಲ್ಲಿ ೧೨ನೇ ಶತಮಾನದ ಮಹಾಮನೆಯ ದೃಶ್ಯ ಕಾಣುತ್ತಿದೆ. ಹಸಿದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮವಾಗಿದೆ. ಶ್ರೀಮಠ ಧರ್ಮ ಕಾರ್ಯದ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಶ್ರಮಿಸುತ್ತಿದೆ. ಕೋರಿಸಿದ್ಧೇಶ್ವರ ಶ್ರೀಗಳು ಸಾಕಷ್ಟು ಪವಾಡಗಳ ಮೂಲಕ ಅಪಾರ ಭಕ್ತರನ್ನು ಉದ್ಧರಿಸಿದ್ದಾರೆ. ಅವರ ಮಾರ್ಗದಲ್ಲಿಯೇ ಪ್ರಸ್ತುತ ಪೀಠಾಧಿಪತಿ ಸಿದ್ಧತೋಟೇಂದ್ರ ಶ್ರೀಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    | ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷ, ಅನುಭವ ಮಂಟಪ, ಬಸವಕಲ್ಯಾಣ

    ಕೋರಿಸಿದ್ಧೇಶ್ವರ ಜಾತ್ರೆ ಎಂಬುದು ನೆಪ ಮಾತ್ರ, ನಾಡಿನ ಹಾಗೂ ಪರನಾಡಿನ ಭಕ್ತರು ಒಂದೆಡೆ ಸೇರುವುದು ಮುಖ್ಯವಾಗಿದೆ. ಇಲ್ಲಿ ನಡೆಯುವ ಭಕ್ತರ ಹರಕೆಯ ತನಾರತಿ ಮಹೋತ್ಸವ ದಕ್ಷಿಣ ಭಾರತದ ಮಹಾ ದೀಪ ಮೇಳ ಎಂಬ ಖ್ಯಾತಿ ಪಡೆದಿದೆ. ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳು ಅಪಾರ ಭಕ್ತರ ಕಷ್ಟಗಳನ್ನು ದೂರ ಮಾಡಿ, ಕಲಿಯುಗದ ಕಾಮಧೇನುವಾಗಿದ್ದಾರೆ ಎಂದರು.
    | ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ಪೀಠಾಧಿಪತಿ

    ಕಲ್ಯಾಣದಲ್ಲಿ ವಚನ ವಿವಿ ಸ್ಥಾಪಿಸಿ: ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರ ೬೦೦ ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತಿದೆ. ಈ ಭವ್ಯ ಕಟ್ಟಡಕ್ಕೆ ಜೀವಂತಿಕೆ ಬರಬೇಕಾದರೆ ವಚನಗಳ ಅಧ್ಯಯನ ಕಾರ್ಯ ನಡೆಯಬೇಕು. ಹೀಗಾಗಿ ವಚನ ಸಂಶೋಧನೆ ಹಾಗೂ ವಿವಿಧ ಭಾಷೆಗಳಿಗೆ ಅನುವಾದ ಮಾಡಲು ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ಸಚಿವದ್ವಯರಿಗೆ ಮನವಿ ಮಾಡಿದರು.

    ಕೋರಿಸಿದ್ಧನ ಸನ್ನಿಧಾನದಲ್ಲಿ ತನಾರತಿ ವೈಭವ: ಮಹಾನ್ ಸಂತ, ಪವಾಡ ಪುರುಷ ಶ್ರೀ ಕೋರಿಸಿದ್ಧೇಶ್ವರ ಸನ್ನಿಧಾನದಲ್ಲಿ ಜಾತ್ರೋತ್ಸವ ಹಾಗೂ ಅವರಾತ್ರಿ ಅಮಾವಾಸ್ಯೆ ನಿಮಿತ್ತ ಶುಕ್ರವಾರ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾ ದೀಪ ಮೇಳವೆಂದೇ ಖ್ಯಾತಿ ಪಡೆದ ಭಕ್ತರ ಹರಕೆಯ ತನಾರತಿ ಮಹೋತ್ಸವ ಸಂಭ್ರಮದಿAದ ನಡೆಯಿತು. ಚಳಿಯಲ್ಲೂ ತಣ್ಣೀರ ಸ್ನಾನ ಮಾಡಿ, ಮಡಿಯುಟ್ಟು ತಲೆಯ ಮೇಲೆ ತನಾರತಿ ಹೊತ್ತು ಭಕ್ತರು ಹೆಜ್ಜೆ ಹಾಕಿ ಹರಕೆ ತೀರಿಸಿದರು. ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಪಾರಂಪರಿಕ ಪೋಷಾಕಿನಲ್ಲಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿದರು. ಬಳಿಕ ಛತ್ರ, ಚಾಮರ, ಕಹಳೆ ಸೇರಿ ವಿವಿಧ ವಾಧ್ಯಗಳೊಂದಿಗೆ ತನಾರತಿ ಮಹೋತ್ಸವದಲ್ಲಿ ಪಾಲ್ಗೊಂಡರು. ಶ್ರೀಗಳ ಹಿಂದೆ ಭಕ್ತರು ತನಾರತಿ ಹೊತ್ತು ಗದ್ದುಗೆಗೆ ಐದು ಪ್ರದಕ್ಷಿಣೆ ಹಾಕಿ ಕೃತಾರ್ಥರಾದರು.

    ಗುರುಗಳ ಥೇರನೆಳೆದ ಭಕ್ತರು: ಜಾತ್ರೋತ್ಸವ ನಿಮಿತ್ತ ನಾಲವಾರ ಮಠದಲ್ಲಿ ಬೆಳಗ್ಗೆ ಶ್ರೀ ಕೋರಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಿದವರು. ಬಳಿಕ ಮಠದ ಆವರಣದಲ್ಲಿ ಭಕ್ತರಿಂದ ಭಜನೆ, ಪಲ್ಲಕ್ಕಿ ನೆರವೇರಿತು. ಸಂಜೆ ಅಸಂಖ್ಯಾತ ಭಕ್ತರ ಮಧ್ಯೆ ಅದ್ದೂರಿ ರಥೋತ್ಸವಕ್ಕೆ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ಕೋರಿಸಿದ್ಧೇಶ್ವರ ಮಹಾರಾಜ್‌ಕಿ ಜೈ.. ಜೈ ಗುರುದೇವ.. ಕೈ ಕೋರಿಸಿದ್ಧ.. ಸಿದ್ಧತೋಟೇಂದ್ರ ಮಹಾರಾಜ್‌ಕಿ ಜೈ ಸೇರಿ ಹಲವು ಘೋಷಣೆಗಳು ಮೊಳಗಿದವು. ಜನರು ಥೇರಿಗೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಎಸೆದು ಇಷ್ಟಾರ್ಥ ಪೂರೈಸಲು ಬೇಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts