More

    ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಯಕ್ಷಗಾನ ಮೇಳ ಯಾನಾರಂಭ

    ಮೂಲ್ಕಿ: ಯಕ್ಷಗಾನ ಕಲೆ ಪಾರಂಪರಿಕವಾಗಿ ಧರ್ಮ, ಸಂಸ್ಕಾರಯುತ ಶಿಕ್ಷಣವನ್ನು ಸಮಾಜಕ್ಕೆ ನೀಡುತ್ತ ಬಂದಿದ್ದು, ಅದನ್ನು ಅಭಿವೃದ್ಧಿಪಡಿಸಿ ಸಮಾಜಕ್ಕೆ ನೀಡುವ ಕಾರ್ಯ ನಮ್ಮದಾಗಬೇಕು ಎಂದು ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಹೇಳಿದರು.

    ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಗಾನ ಮೇಳದ ಯಾನಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಅಶೀರ್ವಚನ ನೀಡಿದರು.

    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಲ ಫೌಂಡೇಶನ್ ಮೂಲಕ ಅಶಕ್ತ ಕಲಾವಿದರಿಗೆ ನೆರಳಾಗಿ ಸೇವೆಗೈಯುತ್ತ, ಕಲಾವಿದನಿಂದ ಸಂಚಾಲಕ ಬಡ್ತಿಯೊಂದಿಗೆ ಜವಾಬ್ದಾರಿ ಹೆಚ್ಚಿಸಿಕೊಂಡಿರುವ ಪಟ್ಲ ಸತೀಶ್ ಶೆಟ್ಟಿ ಅವರಿಂದ ಕಲೆಯ ಆರಾಧನೆ ನಿರಂತರವಾಗಿರಲಿ ಎಂದರು.

    ದೇವಳದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಗಣ್ಯರು, ದಾನಿಗಳನ್ನು ಗೌರವಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಶುಭ ಹಾರೈಸಿದರು. ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್ ಮೇಳದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

    ಮೂಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೀತಾರಾಮ ರೈ ಸವಣೂರು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಸುಧಾಕರ ಪೂಂಜ, ಜಿಪಂ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಪಂ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ.ಮೋಹನ್ ಆಳ್ವ, ಮುಂಬೈ ಭವಾನಿ ಶಿಪ್ಪಿಂಗ್ಸ್ ಸರ್ವಿಸಸ್‌ನ ಕೆ.ಡಿ.ಶೆಟ್ಟಿ, ಬರೋಡಾ ತುಳುಕೂಟ ಅಧ್ಯಕ್ಷ ಶಶಿಧರ ಶೆಟ್ಟಿ, ಯುಎಸ್‌ಎ ನ್ಯೂಜೆರ್ಸಿ ಪುತ್ತಿಗೆ ಮಠದ ವಿದ್ವಾನ್ ಯೋಗೀಂದ್ರ ಭಟ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ಮೂಡುಮನೆ ಗಣೇಶ್ ಭಟ್, ಶ್ರೀ ಕ್ಷೇತ್ರ ವಗೆನಾಡು ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ಎಸ್.ವಿ.ಮಯ್ಯ, ಶ್ರೀಪತಿ ಭಟ್ ಮೂಡುಬಿದಿರೆ, ಸಿಎ ಸುದೇಶ್ ರೈ ಮಂಗಳೂರು, ಸಿಎ ದಿವಾಕರ್ ರಾವ್ ಬೆಂಗಳೂರು, ಕಿಶನ್ ಹೆಗ್ಡೆ, ಶಾಂತಾರಾಮ ಶೆಟ್ಟಿ ಪಂಜಗುತ್ತು, ಮಹಾಬಲ ಶೆಟ್ಟಿ ಪಟ್ಲಗುತ್ತು, ಯಾದವ ಕೋಟ್ಯಾನ್ ಪೆರ್ಮುದೆ, ಧರ್ಮೇಂದ್ರ, ಬಿ.ಸೂರ್ಯಕುಮಾರ್, ಚಂದ್ರಶೇಖರ ನಾನಿಲ್, ರಾಮದಾಸ್ ಪಾವಂಜೆ, ಡಾ.ಶಿವಾನಂದ ಪ್ರಭು, ರಾಮ ಟಿ.ಕಾಂಚನ್ ಪಾವಂಜೆ, ಪಿತಾಂಬರ ಶೆಟ್ಟಿಗಾರ್, ವಾಮನ ಇಡ್ಯಾ, ಮಜಿಲ ಫ್ರೆಂಡ್ಸ್‌ನ ಅಶೋಕ್, ಉದ್ಯಮಿ ಜೋಕಿಂ ಕೊರೆಯಾ, ಭುಜಬಲಿ ಧರ್ಮಸ್ಥಳ ಉಪಸ್ಥಿತರಿದ್ದರು.

    ಪ್ರಥಮ ಸೇವೆಯಾಟ: ಆರಂಭದಲ್ಲಿ ತೆಂಕು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನಾರಾಧನೆ, ದೇವಸ್ಥಾನದಿಂದ ಚೌಕಿಗೆ ದಾನಿಗಳು ನೀಡಿದ ಸುವಸ್ತುಗಳ ಸಹಿತ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಿಂದ ಚೌಕಿಗೆ ಭವ್ಯ ಮೆರವಣಿಗೆ ನಡೆಯಿತು. ಪ್ರಥಮ ಸೇವಾ ಬಯಲಾಟವಾಗಿ ‘ಪಾಂಡವಾಶ್ವಮೇಧ’ ಕಥಾನಕವನ್ನು ಆಡಿ ತೋರಿಸಿದರು.

    ಅಡ್ಯಾರು ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಮೇಳದ ಭಾಗವತ ಹಾಗೂ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಪ್ರಸ್ತಾವನೆಗೈದರು. ಕರ್ನಾಟಕ ಯಕ್ಷಗಾನ ಮಂಡಳಿ ಸದಸ್ಯ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು.

    ಕಲಾ ಸೇವೆಯಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಧರ್ಮ ನಿಷ್ಠೆಯನ್ನು ಅಳವಡಿಸಿಕೊಂಡಿಸಿರುವುದರಿಂದ ದೇವರು ಕೈಬಿಟ್ಟಿಲ್ಲ. ಕೇವಲ 45 ದಿನದಲ್ಲಿ ಮೇಳ ಪೂರ್ಣ ಪ್ರಮಾಣದಲ್ಲಿ ಮೇಳ ಹೊರಡಲು ಸಾಧ್ಯವಾಗಿದೆ. ಸುಬ್ರಹ್ಮಣ್ಯ ದೇವರೇ ಮೇಳದ ಯಜಮಾನರು, ಕಲಾವಿದರ ನೆರಳಾಗಿರುವ ಯಕ್ಷಾಭಿಮಾನಿಗಳೇ ಮೇಳದ ಶ್ರೀಕ್ಷೆಯಾಗಿದ್ದಾರೆ.
    – ಪಟ್ಲ ಸತೀಶ್ ಶೆಟ್ಟಿ, ಮೇಳದ ಭಾಗವತ, ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts