More

    ಪ್ರೋತ್ಸಾಹದಿಂದ ಪ್ರತಿಷ್ಠಾಪನಾ ಕಲೆಯ ವಿಸ್ತಾರ ಸಾಧ್ಯ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಪ್ರತಿಷ್ಠಾಪನಾ ಕಲೆಗೆ ಪೂರಕ ವಾತಾವರಣ ಕಲ್ಪಿಸಿದಷ್ಟು ಕಲೆಯ ವಿಸ್ತಾರತೆ ಆಗಲು ಸಾಧ್ಯ. ಇನ್ನರ್​ ಸೆನ್ಸ್​ನಂತಹ ವಿಶಿಷ್ಟ ಕಲೆಯನ್ನು ಜನರಿಗೆ ಪರಿಚಯಿಸಲು ತ್ರಿವರ್ಣ ಆರ್ಟ್​ ಗ್ಯಾಲರಿ ಮುಂದಾಗಿರುವುದು ಶ್ಲಾನೀಯ. ಇಂತಹ ಚಟುವಟಿಕೆ ನಿರಂತರ ನಡೆಯುವಂತಾಗಬೇಕು ಎಂದು ಹಿರಿಯ ಕಲಾವಿದ ಮತ್ತು ಆರ್ಟಿಸ್ಟ್​ ೋರಂನ ಅಧ್ಯಕ್ಷ ರಮೇಶ್​ ರಾವ್​ ಹೇಳಿದರು.

    ವಿಶ್ವದ ಅತಿಶ್ರೇಷ್ಠ ವರ್ಣ ಚಿತ್ರಕಾರ ಲಿಯಾನಾರ್​ಡೋ ಡಾ. ವಿನ್ಸಿ ಜನ್ಮದಿನದ ಸ್ಮರಣಾರ್ಥ ಮಣಿಪಾಲದ ತ್ರಿವರ್ಣ ಆರ್ಟ್​ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಇನ್ನರ್​ ಸೆನ್ಸ್​’ ಪ್ರತಿಷ್ಠಾಪನಾ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಉಡುಪಿಯ ಯ್ಯಾಂ ಕೇರ್​ ಕ್ಲಿನಿಕ್​ನ ರೊ. ಡಾ. ಕೆ. ಸುರೇಶ್​ ಶೆಣೈ ಮಾತನಾಡಿ, ಯುವ ಸಮುದಾಯ ಇಂತಹ ವಿಶಿಷ್ಟ ಕಲೆಯಲ್ಲಿ ತೊಡಗಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

    ಸಂಸ್ಥೆಯ ಕಲಾ ವಿದ್ಯಾರ್ಥಿಗಳಾದ ಅನಿರುದ್ಧ ನಾಯ್ಕ್​, ಪ್ರಸಾದ್​ ಆರ್​., ಯಶ್ಮಿತಾ ಗಣೇಶ್​ ಉಪಸ್ಥಿತರಿದ್ದರು. ಅನುಷಾ ಆಚಾರ್ಯ ಪ್ರಾರ್ಥಿಸಿದರು. ಕೇಂದ್ರದ ಮಾರ್ಗದರ್ಶಕ ಹರೀಶ್​ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜ್ವಲ್​ ನಿಟ್ಟೆ ವಂದಿಸಿದರು. ಚೇತನಾ ಗಣೇಶ್​ ಕಾರ್ಯಕ್ರಮ ನಿರೂಪಿಸಿದರು.

    ಆಕರ್ಷಕ ನೆರಳು-ಬೆಳಕಿನ ಸಂಯೋಜನೆ

    ಕಲೆಯ ವಿವಿಧ ಮಜಲುಗಳಾದ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನಾಟ್ಯ, ನಾಟಕದಂತಹ ಲಲಿತ ಕಲೆಗಳೇ ಇನ್ನರ್​ ಸೆನ್ಸ್​ನ ಕೇಂದ್ರಬಿಂದುವಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳೇ ಕಾಗದ, ರಟ್ಟು, ಅಂಟು, ಮಣ್ಣು, ಮರಳು, ಹಗ್ಗ, ಬುಟ್ಟಿ, ಬಟ್ಟೆ, ರಂಗೋಲಿ ಪೌಡರ್​, ಸರಿಗೆಯಂತಹ ಕಚ್ಚಾ ವಸ್ತು ಬಳಸಿ ವಿವಿಧ ಕಲೆ ತಯಾರಿಸಿದ್ದರು. ನೆರಳು-ಬೆಳಕಿನ ಸಂಯೋಜನೆಯಡಿ ಪ್ರದರ್ಶನಗೊಂಡ ಈ ವಿಶಿಷ್ಟ ಕಲೆ ಜನರ ಗಮನ ಸೆಳೆಯಿತು. ಏ.16ರ ಸಂಜೆ 7:30ರ ವರೆಗೆ ಪ್ರದರ್ಶನ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts