More

    ಯಾವುದೇ ಭಾಷೆ ಸಿನಿಮಾ, ಒಂದೇ ಟಿಕೆಟ್ ಬೆಲೆ! ಆಂಧ್ರ ಮಾದರಿ ಕರುನಾಡಲ್ಲಿ ಬೇಕೆ?

    ಟಿಕೆಟ್ ಬೆಲೆ ಇಳಿತದ ಬಗ್ಗೆ ಇಷ್ಟು ದಿನ ಆಂಧ್ರದಲ್ಲಿ ಸಿಕ್ಕಾಪಟ್ಟೆ ಚರ್ಚಯಾಗಿತ್ತು. ಅಂದಹಾಗೆ, ಜಗನ್ ಸರ್ಕಾರದ ಹೊಸ ಟಿಕೆಟ್ ಬೆಲೆಯ ನಿಯಮಗಳ ಖಾಯ್ದೆಯ ವಿರುದ್ಧ ಬಹುತೇಕ ಇಡೀ ತೆಲುಗು ಚಿತ್ರರಂಗವೇ ಸಿಡಿದ್ದೆದ್ದಿತು. ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಪಕರು, ಸ್ಟಾರ್ ನಟರಂತೂ ಜಗನ್ ಅವರು ತಮ್ಮ ಈ ನಿರ್ಧಾರವನ್ನು ಬದಲಿಸಿಕೊಳ್ಳ ಬೇಕೆಂದು ವಿನಂತಿಸಲು ಅವರ ಕಾರ್ಯಾಲಯದ ಮುಂದೆ ಸಾಲುಗಟ್ಟಿ ನಿಂತರು. ಜಗನ್ ಕೂಡಾ ಹೊಸ ಟಿಕೆಟ್ ಬೆಲೆಯ ನಿಯಮಗಳ ಖಾಯ್ದೆಯ ಬಗ್ಗೆ ಮರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ತಿಳಿಸಿದರು.
    ಅದರಂತೆ, ಕುತೂಹಲಕಾರಿಯಾಗಿ ಜಗನ್ ಸರ್ಕಾರ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಹೈಬಜೆಟ್ ಸಿನಿಮಾ ರಾಧೆ ಶ್ಯಾಮ್ಬಿಡುಗಡೆಗೆ ನಾಲ್ಕು ದಿನಗಳ ಮುಂಚಿತವಾಗಿ ಟಿಕೆಟ್ ಬೆಲೆ ಪರಿಷ್ಕರಣೆಯ ಹೊಸ GO ಪಾಸ್ ಮಾಡಿತು. ಇದರಿಂದ, ಸದ್ಯ ದೊಡ್ಡ ಬಜೆಟ್ ಸಿನಿಮಾ ಮಂದಿ ಆಂಧ್ರದಲ್ಲಿ ಚುರು ನೆಮ್ಮದಿಯಾಗಿದ್ದಾರೆ. ಆದರೆ, ಆಂಧ್ರ ಸರ್ಕಾರ ನವೆಂಬರ್ 24 ರಂದು ತಂದ ಹೊಸ ಟಿಕೆಟ್ ಬೆಲೆಯ ಖಾಯ್ದೆ ಸಣ್ಣ ಬಜೆಟ್​  ಸಿನಿಮಾಗಳಿಗೆ ಒಳ್ಳೆಯದಾಗಿತ್ತು ಎಂಬ ಅಭಿಪ್ರಾಯವಿತ್ತು.
    ಕಾರಣ, ಎಲ್ಲಾ ಸಿನಿಮಾಗಳಿಗೆ ಟಿಕೆಟ್ ಬೆಲೆ ಒಂದೇ ಇದ್ದರೆ, ಆಗ ದೊಡ್ಡ ಬಜೆಟ್ ಸಿನಿಮಾಗಳ ಜತೆಗೆ ಸಣ್ಣ ಬಜೆಟ್ ಸಿನಿಮಾಗಳು ಸಹ ಚಿತ್ರಮಂದಿರಗಳಲ್ಲಿ ಕಾಂಪೀಟ್ ಮಾಡಲು ಸಾಧ್ಯವಾಗುತ್ತೆ. ಹಾಗಾಗಿ, ಈಗ ಇದೇ ಕಾರಣಕ್ಕೆ ಜಗನ್ ಸರ್ಕಾರದ ಹೊಸ ಟಿಕೆಟ್ ಬೆಲೆಯ ನಿಯಮಗಳ ಖಾಯ್ದೆಯನ್ನು ಕರುನಾಡಲ್ಲಿ ತರಬೇಕು ಎನ್ನಲಾಗುತ್ತಿದೆ. ಹೌದು, ರೇಟ್ ಆಪ್ ಅಡ್ಮಿಶನ್ ಅಂದರೆ ಟಿಕೆಟ್ ಬೆಲೆ ಜಾಸ್ತಿ ಆಗುತ್ತಿರೋ ಬಗ್ಗೆ ಸಿಎಂಗೆ ಮತ್ತೆ ಮನವಿ ಮಾಡಲಿದೆಯಂತೆ ವಾಣಿಜ್ಯ ಮಂಡಳಿ. ಈ ಹಿಂದೆ ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಸಿನಿಮಾ ಟಿಕೆಟ್ ಬೆಲೆ ಬಗ್ಗೆ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು.
    ಇನ್ನು, ಆಗ ಸಿಂಗಲ್ ಸ್ಕ್ರೀನಿಂಗ್ ಇರಲಿ, ಮಲ್ಟಿಪ್ಲೆಕ್ಸ್ ಇರಲಿ, ಯಾವುದೇ ಚಿತ್ರಮಂದಿರವಾದರೂ ಟಿಕೆಟ್ ಪ್ರೈಸ್ 200 ದಾಟೋ ಆಗಿಲ್ಲ‌ ಅಂತ ಆದೇಶ ಹೊರಡಿಸಲಾಗಿತ್ತು. ಆದರೆ, ಮಲ್ಟಿಪ್ಲೆಕ್ಸ್ ಮಾಲೀಕರು ಸರ್ಕಾರದ ಆದೇಶದ ವಿರುದ್ದ ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ಟಿಕೆಟ್ ಬೆಲೆಯ ಹೊಸ ಆದೇಶದ ಮೇಲೆ ಸ್ಟೇ ತರಲಾಗಿದ್ದು, ಸದ್ಯ, ಈ ವಿಚಾರ ಇನ್ನೂ ಕೋರ್ಟ್ ನಲ್ಲಿದೆ. ಮತ್ತೊಂದೆಡೆ, ನಾಳೆ ಅಂದರೆ ಮಾ. 25 ರಂದು ಆರ್​ಆರ್​ಆರ್ರಿಲೀಸ್ ಆಗಲಿದ್ದು, ಮಲ್ಟಿಪ್ಲೆಕ್ಸ್ ನವರು ಮನಸೋ ಇಚ್ಚೆ ಪ್ರೈಸ್ ಫಿಕ್ಸ್ ಮಾಡುತ್ತಿದ್ದಾರೆ. ಈಗಾಗಲೇ, ‘ಆರ್​ಆರ್​ಆರ್ಟಿಕೆಟ್ ಪ್ರೈಸ್ ಕರುನಾಡಲ್ಲಿ 500-1000 ರೂ.. ದಾಟುತ್ತಿದೆ.
    ಇದ್ರಿಂದ ಪರೋಕ್ಷವಾಗಿ ಕನ್ನಡ ಸಿನಿಮಾಗೆ ಎಫೆಕ್ಟ್ ಆಗುತ್ತಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಸಿನಿಮಾ ಕಡಿಮೆ ರೇಟ್ ಗೆ ಪ್ರದರ್ಶನ ಆಗುತ್ತಿದೆ. ಉದಾಹರಣೆಗೆ, ‘ಜೇಮ್ಸ್ಸಿನಿಮಾ ಟಿಕೆಟ್ ಸದ್ಯ ಮಲ್ಟಿಪ್ಲೆಕ್ಸ್​ಗಳಲ್ಲಿ 250-500 ರೂ.. ಇದೆ. ಇದು, ಜನರ ಅರಿವಿಗೆ ಬುರುವುದಿಲ್ಲ. ‘ಆರ್​ಆರ್​ಆರ್ಸಿನಿಮಾಗೆ 1000 ರೂ ಕೊಟ್ಟಿದವರು, ಈಗ ಕನ್ನಡ ಸಿನಿಮಾ ಟಿಕೆಟ್ ಗೂ 500-1000 ಕೊಡಬೇಕೇನೋ ಅಂದುಕೊಂಡು ಮಲ್ಟಿಪ್ಲೆಕ್ಸ್ ಕಡೆ ಜನ ಬರಲ್ಲ. ಆಗ ಕನ್ನಡ‌ ಸಿನಿಮಾಗೆ ಹೊಡೆತ ಬೀಳುತ್ತೆ.
    1000 ರೂ ಕೊಟ್ಟು ಆರ್​ಆರ್​ಆರ್ನೋಡಿದವರು ಮತ್ತೆ ಬೇರೆ ಸಿನಿಮಾ ನೋಡುತ್ತಾರೆ ಎನ್ನುವುದು ಕೂಡಾ ಅನುಮಾನ. ಇದು, ಕನ್ನಡ ಚಿತ್ರರಂಗಕ್ಕೆ ದೊಡ್ಡ ಲಾಸ್ ಎಂದೇ ಹೇಳಬೇಕು. ಇದಕ್ಕೆ, ಕಡಿವಾಣ ಹಾಕಬೇಕು ಅಂದರೆ ಕರ್ನಾಟಕ ಸರ್ಕಾರ ಆಂಧ್ರ ಮಾಡೆಲ್ ನ ಟಿಕೆಟ್ ಬೆಲೆಯ ನಿಯಮಗಳನ್ನು ತರಬೇಕು ಎಂಬ ಮಾತುಗಳು ಕೆಲವರಿಂದ ಕೇಳಿಬರುತ್ತಿವೆ. ಕನ್ನಡ ಅಥವಾ ಯಾವುದೇ ಪರಭಾಷಾ ಸಿನಿಮಾ ಆದರೂ ಒಂದೇ ರೇಟ್ ಫಿಕ್ಸ್ ಮಾಡಬೇಕು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

    ಅತಿ ಆಸೆ ಗತಿ ಗೆಡಿಸುತ್ತೆ… ಥಿಯೇಟರ್​ನವರಿಗೆ ಟಾಂಗ್ ಕೊಟ್ಟ ಶಿವಣ್ಣ!

    7M ​ಗೆ ಫಾಲೋವರ್ಸ್​ ಏರಿಸಿಕೊಂಡ ನಾಗಚೈತನ್ಯರನ್ನು ಅನ್​ಫಾಲೋ ಮಾಡಿದ ಮಾಜಿ ಪತ್ನಿ ಸಮಂತಾ!

    ಎದೆಹಾಲು ದಾನದ ಬಗ್ಗೆ ಮಾತಾಡಿದ ನಟಿ ರಾಧಿಕಾ ಪಂಡಿತ್ ವಿಡಿಯೋ ವೈರಲ್

    ಬಾಡಿಗಾರ್ಡ್ ಆಗಿದ್ದ ಯೂಕ್ರೇನ್ ಸೈನಿಕನಿಗೆ ಹಣ ಸಹಾಯ ಮಾಡಿದ RRR ನಟ ರಾಮ್ ಚರಣ್ ತೇಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts