More

    Video | ಸ್ಟ್ರೆಚರ್​ನಲ್ಲಿ ರೋಗಿಯ ಕರೆದೊಯ್ಯುವಾಗ ನಡೆಯಿತು ಭೀಕರ ಘಟನೆ; ಕುಸಿದ ಲಿಫ್ಟಲ್ಲಿ ಸಿಕ್ಕಿಕೊಂಡ ಸ್ಟ್ರೆಚರ್​, ಕೆಳಕ್ಕೆ ಬಿದ್ದ ರೋಗಿ!

    ಬೆಂಗಳೂರು: ಸ್ಟ್ರೆಚರ್​ನಲ್ಲಿ ರೋಗಿ ಇದ್ದಾನೆಂದರೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದೇ ಅರ್ಥ. ಅಂಥ ರೋಗಿಯೊಬ್ಬನನ್ನು ಕರೆದೊಯ್ಯುವಾಗ ಅರ್ಧ ಸ್ಟ್ರೆಚರ್​ ಹೊರಗೆ ಇರುವಾಗಲೇ ಲಿಫ್ಟ್ ಕೆಳಕ್ಕೆ ಹೋದರೆ ಹೇಗಾಗಬೇಡ?!

    – ಅಂಥದ್ದೊಂದು ಭೀಕರ ಘಟನೆ ನಡೆದೇ ಹೋಗಿದ್ದು, ಆ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿ ರೋಗಿಯನ್ನು ಸ್ಟ್ರೆಚರ್​ನಲ್ಲಿ ಮಲಗಿಸಿಕೊಂಡು ಮತ್ತೊಂದು ಕಡೆಗೆ ಆತನನ್ನು ಕರೆದೊಯ್ಯುತ್ತಿದ್ದರು.

    ಈ ಮಧ್ಯೆ ಒಂದು ಕಡೆ ಲಿಫ್ಟ್​ನಲ್ಲಿ ಹೋಗಬೇಕಾದಾಗ ಅಲ್ಲಿ ಅರ್ಧ ಸ್ಟ್ರೆಚರ್​ ಹೊರಗಿರುವಾಗಲೇ ರೋಗಿ ಹಾಗೂ ಒಳಗಿದ್ದ ಸಿಬ್ಬಂದಿಯೊಬ್ಬನ ಸಹಿತ ಲಿಫ್ಟ್​ ಕೆಳಕ್ಕೆ ಹೋಗಿದೆ. ಸ್ಟ್ರೆಚರನ್ನು ಪೂರ್ತಿ ಒಳಗೆ ತಳ್ಳಬೇಕು ಎನ್ನುವಷ್ಟರಲ್ಲಿ ಲಿಫ್ಟ್ ಕೆಳಕ್ಕೆ ಇಳಿದಿದ್ದಲ್ಲದೆ ಬಾಗಿಲು ಮುಚ್ಚಿಕೊಂಡಿದ್ದರಿಂದ ಅದು ಅಲ್ಲೇ ಸಿಕ್ಕಿಕೊಂಡಿದೆ. ಮಾತ್ರವಲ್ಲ ಲಿಫ್ಟ್​ ಒಳಗೆ ಪೇಷಂಟ್ ಕೆಳಕ್ಕೆ ಬಿದ್ದಿದ್ದಾನೆ.

    ಹೀಗೆ ಒಳ-ಹೊರಗಿನ ಎರಡೂ ಸಿಸಿಟಿವಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದ್ದು, ಆ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಲಕ್ಷಗಟ್ಟಲೆ ಜನರು ಇದನ್ನು ವೀಕ್ಷಿಸಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

    https://twitter.com/BornAKang/status/1607218575957282817?s=20&t=D7GoR6EuXde9uWXcEBRYLQ

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

    20 ಕೋಟಿ ರೂ. ಮೋಸ ಮಾಡಿದ್ದ ಮಹಾವಂಚಕಿಯ ಬಂಧನ; ಮಾತಲ್ಲೇ ಮರುಳು ಮಾಡುವ ಚಾಲಾಕಿಯಿಂದ 40 ಮಂದಿಗೆ ಧೋಖಾ

    ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಟಿಟಿ ಡ್ರೈವರ್ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts