ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಟಿಟಿ ಡ್ರೈವರ್ ಅರೆಸ್ಟ್

ಪಣಜಿ: ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಾಲಕನೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಮುಂಬೈನವಳಾಗಿದ್ದು, ಗೋವಾದಲ್ಲಿ ಈ ಪ್ರಕರಣ ನಡೆದಿದೆ. ಗೋವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಗೋವಾದ ಮಾರ್ಮುಗಾವೊ ಎಂಬಲ್ಲಿನ ಜುವಾರಿನಗರದ ನಿವಾಸಿ ಚಂದ್ರಶೇಖರ ವಾಸು ಲಮಾಣಿ ಎಂಬಾತನೇ ಅತ್ಯಾಚಾರ ಆರೋಪಿ. ಈತನ ವಿರುದ್ಧ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಮೇರೆಗೆ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಸೇರಿ ಹದಿನಾಲ್ಕು ಮಂದಿ ಇತ್ತೀಚೆಗೆ ಗೋವಾಗೆ ಬಂದಿದ್ದು, … Continue reading ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಟಿಟಿ ಡ್ರೈವರ್ ಅರೆಸ್ಟ್