More

    ಕೆಎಸ್​ಆರ್​ಟಿಸಿ ನೌಕರರಿಗೆ ಶಾಕ್! ನಿಗಮದ ಕಡಿಮೆ ಬಡ್ಡಿ ಸಹಾಯಧನಕ್ಕೆ ಬ್ರೇಕ್

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಲ್ಲಿ ಚಾಲ್ತಿ ಇರುವ ಗೃಹಸಾಲದ ಮೇಲಿನ ಶೇ.4 ಬಡ್ಡಿ ಸಹಾಯ ಧನ ನೀಡುವ ಯೋಜನೆಯನ್ನು ಕರೊನಾ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಸ್ಥಗಿತಗೊಳಿಸಿದೆ.

    ಕರೊನಾ ಹಾಗೂ ಮುಷ್ಕರದಿಂದ ನಿಗಮಕ್ಕೆ ಸಾಕಷ್ಟು ನಷ್ಟವಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ನಿಗಮದಲ್ಲಿ ಅಧಿಕಾರಿ, ನೌಕರರಿಗೆ ಪ್ರತಿ ವರ್ಷ ನೀಡುತ್ತಿರುವ ಗೃಹಸಾಲದ ಮೇಲಿನ ಶೇ.4 ಬಡ್ಡಿ ಸಹಾಯಧನ ಯೋಜನೆಯನ್ನು ನಿಗಮದ ಆರ್ಥಿಕ ಹಿತದೃಷ್ಟಿಯಿಂದ 2020-21ನೇ ಸಾಲಿಗೆ ಅನ್ವಯವಾಗುವಂತೆ ಸ್ಥಗಿತಗೊಳಿಸಲಾಗಿದೆ. ಎಲ್ಲರೂ ಇದನ್ನು ಪಾಲಿಸಿಸಬೇಕೆಂದು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ನಿಗಮದಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿ ಮತ್ತು ನೌಕರರಿಗೆ ಸೂಚಿಸಿದ್ದಾರೆ.

    ಮನ್​ ಕೀ ಬಾತ್ ಬದಲು ‘ಪೆಟ್ರೋಲ್​ ಕೀ ಬಾತ್’ ಮಾಡಿ: ಕೇಂದ್ರದ ವಿರುದ್ಧ ಗುಡುಗಿದ ದೀದಿ

    ಗಂಡ ಸ್ಕ್ಯಾನಿಂಗ್​ಗೆ ಕರೆದುಕೊಂಡು ಹೋಗಲಿಲ್ಲವೆಂದು ನೇಣಿಗೆ ಕೊರಳೊಡ್ಡಿದ 7 ತಿಂಗಳ ಗರ್ಭಿಣಿ!

    ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts