More

    ಚೌಹಾಣ್ ನಾಲ್ಕನೇ ಬಾರಿ ಮಧ್ಯಪ್ರದೇಶ ಸಿಎಂ: ರಾಜಭವನದಲ್ಲಿ ಸರಳ ಸಮಾರಂಭದಲ್ಲಿ ಪ್ರಮಾಣವಚನ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ರಾಜಕೀಯ ಪ್ರಹಸನದ ಬಳಿಕ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಸಂಜೆ 7.30ರ ಸುಮಾರಿಗೆ ಚೌಹಾಣ್​ರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಎಂದು ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿದರು. ಬಳಿಕ ರಾಜಭವನದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ರಾತ್ರಿ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಲಾಲ್​ಜಿ ತಂಡನ್ ಪ್ರಮಾಣವಚನ ಬೋಧಿಸಿದರು.

    22 ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು ವಿಶ್ವಾಸಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ವಿಶ್ವಾಸಮತಕ್ಕೂ ಮುಂಚೆಯೇ ಕಮಲ್​ನಾಥ್ ಮುಖ್ಯಮಂತ್ರಿ ಹುದ್ದೆಗೆ ಮಾ. 20ರಂದು ರಾಜೀನಾಮೆ ಸಲ್ಲಿಸಿದ್ದರು. ಆ ಬಳಿಕ ಬಿಜೆಪಿ ಸರ್ಕಾರ ರಚನೆ ಹಾದಿ ಸುಗಮವಾಗಿತ್ತಾದರೂ ಮುಖ್ಯಮಂತ್ರಿ ಪದವಿ ರೇಸ್​ನಲ್ಲಿ ಚೌಹಾಣ್, ನರೇಂದ್ರ ಸಿಂಗ್ ತೋಮರ್, ನರೋತ್ತಮ್ ಮಿಶ್ರಾ ಸೇರಿ ಇನ್ನೂ ಹಲವರ ಹೆಸರುಗಳು ಇದ್ದವು. ಆದರೆ ಶಾಸಕರ ಒಲವು ಹಾಗೂ ಹೈಕಮಾಂಡ್ ಆದೇಶದಂತೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮತ್ತೆ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.

    2005ರಿಂದ 2018ರ ಅವಧಿವರಗೆ ಶಿವರಾಜ್ ಸಿಂಗ್ ಚೌಹಾಣ್ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಮಧ್ಯಪ್ರದೇಶದಲ್ಲಿ ಅರ್ಜುನ್ ಸಿನ್ಹಾ ಮತ್ತು ಶ್ಯಾಮ್ರಣ್ ಶುಕ್ಲಾ ತಲಾ ಮೂರು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದ ದಾಖಲೆ ಹೊಂದಿದ್ದರು. ಈಗ ಶಿವರಾಜ್ ಸಿಂಗ್ ಚೌಹಾಣ್ ಆ ದಾಖಲೆಯನ್ನು ಮುರಿದಿದ್ದಾರೆ. ಅಧಿಕಾರಕ್ಕೇರಿದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ವಿಶ್ವಾಸಮತ ಸಾಬೀತು ಪಡಿಸಬೇಕಾಗುತ್ತದೆ. (ಏಜೆನ್ಸೀಸ್)

    Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್​ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts