More

    ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ಅವರಿಗೆ ಕೋವಿಡ್​ 19 ಪಾಸಿಟಿವ್​

    ಭೋಪಾಲ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, ಕೋವಿಡ್19 ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಈ ವಿಷಯವನ್ನು ಸ್ವತಃ ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಆಡಳಿತ ವಿಚಾರಗಳನ್ನು ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದಾಗಿ ಘೋಷಿಸಿದ್ದಾರೆ.

    ಟ್ವೀಟ್​ ಮೂಲಕ ಹೇಳಿದ್ದಿಷ್ಟು- ನನಗೆ ಕೋವಿಡ್ ವೈರಸ್​ನ ಸೋಂಕು ತಗುಲಿರುವ ಗುಣಲಕ್ಷಣಗಳು ಗೋಚರಿಸಿದ್ದವು. ಟೆಸ್ಟ್ ಮಾಡಿಸಿದೆ. ಅದರ ರಿಪೋರ್ಟ್ ಬಂದಿದ್ದು, ಪಾಸಿಟಿವ್ ಇದೆ. ಹೀಗಾಗಿ ನಾನು ಕ್ವಾರಂಟೈನ್​ ಪಾಲಿಸಲು ತೆರಳುತ್ತಿದ್ದೇನೆ. ನನ್ನ ಜತೆಗೆ ಸಂಪರ್ಕಕ್ಕೆ ಬಂದ ಸಹೋದ್ಯೋಗಿಗಳು ಮತ್ತು ಎಲ್ಲರೂ ಅವರ ಕರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ನನ್ನ ಆಪ್ತ ವಲಯದವರೆಲ್ಲರೂ ಕ್ವಾರಂಟೈನ್​ಗೆ ತೆರಳಿದ್ದಾರೆ.

    ಇದನ್ನೂ ಓದಿ: ಕರ್ನಾಟಕ, ಕೇರಳದಲ್ಲಿದ್ದಾರೆ 200 ಐಎಸ್ ಉಗ್ರರು : ವಿಶ್ವಸಂಸ್ಥೆ ವರದಿ ಎಚ್ಚರಿಕೆ

    ನಾನು ಕೋವಿಡ್​-19 ವೈರಸ್ ಸೋಂಕು ತಡೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ​ನಿಯಮಗಳನ್ನೂ ಚಾಚೂ ತಪ್ಪದೆ ಪಾಲಿಸುತ್ತೇನೆ. ನನ್ನ ಅನುಪಸ್ಥಿತಿಯಲ್ಲಿ ಸಭೆಗಳನ್ನು ರಾಜ್ಯ ಗೃಹ ಸಚಿವ ಡಾ. ನರೋತ್ತಮ ಮಿಶ್ರಾ, ನಗರಾಭಿವೃದ್ಧಿ ಸಚಿವ ಭೂಪೇಂಧ್ರ ಸಿಂಗ್, ಆರೋಗ್ಯ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​, ಆರೋಗ್ಯ ಸಚಿವ ಡಾ. ಪಿ.ಆರ್.ಚೌಧರಿ ಅವರು ನಡೆಸಲಿದ್ದಾರೆ ಎಂದು ಚೌಹಾಣ್ ತಿಳಿಸಿದ್ದಾರೆ. (ಏಜೆನ್ಸೀಸ್)

    VIDEO: ಮಾಸ್ಕ್ ಮಹತ್ವ ಗೊತ್ತಾಗಿಲ್ವಾ, ಇದನ್ನೊಮ್ಮೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts