More

    ಕರ್ನಾಟಕ, ಕೇರಳದಲ್ಲಿದ್ದಾರೆ 200 ಐಎಸ್ ಉಗ್ರರು : ವಿಶ್ವಸಂಸ್ಥೆ ವರದಿ ಎಚ್ಚರಿಕೆ

    ನವದೆಹಲಿ: ಉಗ್ರ ಸಂಘಟನೆಗಳು ಭಾರತದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿವೆ. ಅಲ್​ಕೈದಾದ ಭಾರತೀಯ ಉಪಖಂಡದ ವಿಭಾಗ (ಎಕ್ಯೂಐಎಸ್​) ಪ್ರತೀಕಾರಕ್ಕೆ ಚಿಂತನೆ ನಡೆಸಿದರೆ, ಐಎಸ್​ಐಎಸ್​ನ ಸಹ ಸಂಘಟನೆ ಹಿಂದ್ ವಿಲಾಯಾಹ್​ ಈಗಾಗಲೇ ತನ್ನ ನೆಲೆಯನ್ನು ಕರ್ನಾಟಕ ಕೇರಳದಲ್ಲಿ ಬಲಪಡಿಸತೊಡಗಿದೆ. ಅಲ್ಲಿ 180-200 ಉಗ್ರರು ಈಗಾಗಲೇ ಇದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ವರದಿ ಎಚ್ಚರಿಸಿದೆ.

    ಹಿಂದ್ ವಿಲಾಯಾಹ್​ ಎಂಬ ಉಗ್ರ ಸಂಘಟನೆ ಭಾರತದಲ್ಲಿ ಐಎಸ್​ಐಎಸ್ ಉಗ್ರಸಂಘಟನೆಯ ಸಹಸಂಘಟನೆಯಾಗಿದ್ದು, 180-200 ಉಗ್ರ ಸದಸ್ಯರಿದ್ದಾರೆ ಎಂದು 2019ರ ಮೇ 19ರಂದು ಘೋಷಿಸಿತ್ತು. ಇದೂ ಸೇರಿ ಬೇರೆ ಬೇರೆ ಅಂಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅನಲಿಟಿಕಲ್ ಸಪೋರ್ಟ್​ ಆ್ಯಂಡ್ ಸ್ಯಾಂಕ್ಷನ್ಸ್​ ಮಾನಿಟರಿಂಗ್ ಟೀಂ ಗುರುವಾರ ಬಿಡುಗಡೆ ಮಾಡಿರುವ 26ನೇ ವರದಿಯಲ್ಲಿದೆ ಎಂದು ಐಎಎನ್​ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ವೆನಿಜುವೆಲಾ ಚೀಫ್ ಜಸ್ಟೀಸ್​ ಬಂಧನಕ್ಕೆ 50 ಲಕ್ಷ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ!

    ಮಾಜಿ ನಾಯಕ ಆಸಿಮ್ ಉಮರ್ ಹತ್ಯೆಗೆ ಪ್ರತೀಕಾರ ತೀರಿಸಲು ಎಕ್ಯೂಐಎಸ್ ಹವಣಿಸುತ್ತಿದೆ. ಆಸಿಮ್ ಉಮರ್ ಹತ್ಯೆ ನಂತರದಲ್ಲಿ ಈ ಸಂಘಟನೆಯ ನೇತೃತ್ವವನ್ನು ಒಸಾಮಾ ಮಹಮೂದ್ ವಹಿಸಿಕೊಂಡಿದ್ದಾನೆ. ಈ ಸಂಘಟನೆಯು ತಾಲೀಬಾನ್​ ಸಂಘಟನೆಯ ಅಧೀನ ಸಂಘಟನೆಯಾಘಿದ್ದು, ನಿಮ್ರುಝ್​, ಹೆಲ್ಮಂಡ್​, ಕಂದಹಾರ್ ಪ್ರಾಂತ್ಯಗಳಲ್ಲಿ ಸಕ್ರಿಯವಾಗಿದೆ. ಈ ಸಂಘಟನೆಗೂ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನಗಳಲ್ಲಿ 150-200 ಉಗ್ರ ಸದಸ್ಯರಿದ್ದಾರೆ.

    ಇದನ್ನೂ ವೀಕ್ಷಿಸಿ: VIDEO: ಮಾಸ್ಕ್ ಮಹತ್ವ ಗೊತ್ತಾಗಿಲ್ವಾ, ಇದನ್ನೊಮ್ಮೆ ನೋಡಿ..

    ಈ ಉಗ್ರಸಂಘಟನೆಗಳು ತಮ್ಮ ಸಂವಹನಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಆ್ಯಪ್​ಗಳನ್ನು ಅವಲಂಬಿಸಿವೆ. ನೇಮಕಾತಿ, ಹಣಸಂಗ್ರಹ, ಉಗ್ರ ಕೃತ್ಯ ಅನುಷ್ಠಾನ ಎಲ್ಲವನ್ನೂ ಆ್ಯಪ್​ಗಳ ಮೂಲಕ ಸಂವಹನ ನಡೆಸಿಯೇ ಮಾಡಲಾಗುತ್ತದೆ. ಡ್ರಾಪ್​ ಬಾಕ್ಸ್​, ಫೈಲ್ಸ್​.ಎಫ್​ಎಂ. ಇಂಟರ್ನೆಟ್ ಆರ್ಚಿವ್​, ಮೈಕ್ರೋಸಾಫ್ಟ್ ಒನ್​ಡ್ರೈವ್​, ನೆಕ್ಸ್ಟ್​ ಕ್ಲೌಡ್, ರಾಕಟ್​.ಚಾಟ್​, ವಿಮಿಯೋ ಮುಂತಾದ ವೇದಿಕೆಯನ್ನು ಉಗ್ರ ಸಂಘಟನೆಗಳು ಬಳಸಿಕೊಂಡಿವೆ. ಐಎಸ್​ಐಎಸ್​ ಮತ್ತು ಅಲ್​ಕೈದಾ ಸಂಘಟನೆಗಳು ಈಗ ಟೆಲಿಗ್ರಾಂ ಆ್ಯಪ್​ಗೆ ಪರ್ಯಾಯ ಆ್ಯಪ್​ಗಳನ್ನು ಹುಡುಕತೊಡಗಿವೆ ಎಂದು ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)

    ಆತ್ಮನಿರ್ಭರ ಭಾರತ ಪ್ಯಾಕೇಜ್​ ವ್ಯಾಪ್ತಿಯಲ್ಲಿ ಇದುವರೆಗೆ 5 ಪ್ರಸ್ತಾವನೆಗಳಿಗೆ ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts