More

    ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಸಂಪನ್ನ

    ಸೊರಬ: ಶಿವಶರಣ ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತ್ಯುತ್ಸವವನ್ನು ತಾಲೂಕಿನ ಬೆದವಟ್ಟಿಯಲ್ಲಿ ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು. ಶಿರಾಳಕೊಪ್ಪದ ತಡಗಣಿಯಿಂದ ಸಿದ್ದರಾಮೇಶ್ವರರ ಭಾವಚಿತ್ರದ ಅದ್ದೂರಿ ಮೆರವಣಿಗೆ ತಾಲೂಕಿನ ಬೆದವಟ್ಟಿ ಗ್ರಾಮದವರೆಗೆ ನಡೆಯಿತು.

    ಸಮತೆಯ ಸಾಕಾರ ಮೂರ್ತಿಯಾದ ಶಿವಯೋಗಿ ಸಿದ್ದರಾಮೇಶ್ವರರು ಜ್ಞಾನಯೋಗಿ, ಕರ್ಮಯೋಗಿಗಳು. ಸಮಾಜದ ಅಂಧಕಾರದ ವಿರುದ್ಧ ಹೋರಾಡಿ ಸಮಾನತೆಯ ಸಂದೇಶವನ್ನು ಸಾರಿದ ಆಧ್ಯಾತ್ಮಿಕ ದಾರ್ಶನಿಕ. ಅವರ ತತ್ವ-ಸಿದ್ಧಾಂತಗಳ ಸಾರ್ವಕಾಲಿಕ ಎಂದು ಶ್ರೀಗಳ ಕುರಿತು ಜಯಘೋಷಗಳ ಕೂಗುತ್ತ ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಾದ್ಯ, ಮೇಳ, ಭಜನಾ ತಂಡಗಳು ಮೆರವಣಿಗೆಗೆ ಮತ್ತಷ್ಟು ಕಳೆ ತುಂಬಿದವು.
    ಸುತ್ತು ಕೋಟೆ, ಬಿಳವಾಣಿ, ಶಿವಪುರ ಮೂಲಕ ಮೆರವಣಿಗೆ ಬೆದವಟ್ಟಿ ಗ್ರಾಮ ತಲುಪಿತು. ಮಾರ್ಗ ಮಧ್ಯೆ ಭಕ್ತರು ಹಣ್ಣು ಕಾಯಿ ಅರ್ಪಿಸಿದರು. ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts