More

    ಬಾಬೂಜಿಗೆ ತಾಲೂಕು ಆಡಳಿತ ಅಪಮಾನ

    ಕಾಳಗಿ: ತಹಸಿಲ್, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಅಂಗನವಾಡಿ ಕೇಂದ್ರ, ಹಾಸ್ಟೆಲ್ ಸೇರಿ ತಾಲೂಕಿನ ಯಾವೊಂದು ಕಚೇರಿಯಲ್ಲೂ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನ್ ರಾಮ್ ಅವರ ಜಯಂತಿ ಆಚರಿಸಿಲ್ಲ. ಈ ಮೂಲಕ ತಾಲೂಕು ಆಡಳಿತ ಮಹಾನ್ ನಾಯಕನಿಗೆ ಅಪಮಾನ ಮಾಡಿದೆ ಎಂದು ಡಾ.ಬಾಬುಜಗಜೀವನ್ ರಾಮ್ ೧೧೭ನೇ ಜಯಂತ್ಯುತ್ಸವ ಸಮತಿ ತಾಲೂಕು ಅಧ್ಯಕ್ಷ ರವಿ ಸಿಂಗೆ ದೂರಿದರು.

    ತಹಸಿಲ್ ಸೇರಿ ಇನ್ನಿತರ ಕಚೇರಿಗಳ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪೂರ್ವಭಾವಿ ಸಭೆ ಕರೆದು ತಾಲೂಕಿನ ಎಲ್ಲ ಕಚೇರಿಗಳಲ್ಲಿ ಬಾಬೂಜಿ ಜಯಂತಿ ಆಚರಿಸಲು ಸೂಚನೆ ನೀಡಬೇಕಾದ ತಹಸೀಲ್ದಾರ್‌ರು ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾರೆ. ತಾವು ಬಂದಿಲ್ಲ, ಕೆಳ ಹಂತದ ಅಧಿಕಾರಿಗಳಿಗೂ ಸೂಚನೆ ನೀಡಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಬಾಬೂಜಿ ಜಯಂತಿ ಆಚರಿಸಿ, ಗೌರವ ಸಲ್ಲಿಸುವ ಕೆಲಸ ಆಗಿಲ್ಲ ಎಂದು ಕಿಡಿಕಾರಿದರು.

    ಪ್ರಮುಖರಾದ ರೇವಣಸಿದ್ದ ಕಟ್ಟಿಮನಿ, ಸುಂದರ ಸಾಗರ, ಶರಣು ರಾಜಾಪುರ, ಮಹೇಶ ಭರತನೂರ, ರೇವಣಸಿದ್ದ ಕೊಡ್ಲಿ, ಮಲ್ಲಿಕಾರ್ಜುನ ಸಿಂಗೆ, ಹಣಮಂತ ಮಂಗಲಗಿ, ಕರಣ ರಾಜಾಪುರ, ಮಹೇಶ ತಾಡಪಳ್ಳಿ, ಅನೀಲ, ಮಾರುತಿ ಕೊಡ್ಲಿ, ಸಂಜು ಮೋಘಾ ಕಾಳಗಿ, ಕೃಷ್ಣ ಕಟ್ಟಿಮನಿ, ಅಶೋಕ ಸಿಂಗೆ ಇತರರಿದ್ದರು.

    ಪ್ರತಿಭಟನೆ ಬಳಿಕ ತರಾತುರಿ ಪೂಜೆ: ಬಾಬೂಜಿ ಜಯಂತ್ಯುತ್ಸವ ಸಮಿತಿ ಹಾಗೂ ಮಾದಿಗ ಸಮಾಜದಿಂದ ಪ್ರತಿಭಟನೆ ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ತರಾತುರಿಯಲ್ಲಿ ವಿವಿಧ ಕಚೇರಿಗಳಲ್ಲಿ ಕೆಳ ಹಂತದ ಸಿಬ್ಬಂದಿ ಡಾ.ಬಾಬುಜಗಜೀವನ್ ರಾಮ್ ಅವರ ಭಾವಚಿತ್ರವಿಟ್ಟು ಪೂಜೆ ಮಾಡಿ ಕೈತೊಳೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts