More

    ತಪೋ ಭೂಮಿ ಅಭಿವೃದ್ಧಿ ಆಗಲಿ

    ಜೇವರ್ಗಿ: ಚರಚಕ್ರವರ್ತಿ, ೧೭ನೇ ಶತಮಾನದ ಶ್ರೇಷ್ಠ ವಚನಕಾರ ಶ್ರೀ ಷಣ್ಮುಖ ಶಿವಯೋಗಿಗಳ ತಪೋ ಭೂಮಿ ಜೋಗಿಕೊಳ್ಳದಲ್ಲಿ ಯಾತ್ರಿ ನಿವಾಸ ನಿರ್ಮಿಸುವುದರ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

    ಕೋಳಕೂರಿನ ಜೋಗಿಕೊಳ್ಳದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಷಣ್ಮುಖ ಶಿವಯೋಗಿ ಸೇವಾ ಟ್ರಸ್ಟ್​ನಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಷಣ್ಮುಖ ಶಿವಯೋಗಿಗಳ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ಚಚನ ನೀಡಿ, ಬರೋಬ್ಬರಿ ೧೨ ವರ್ಷ ಶ್ರೀಗಳು ಜೋಗಿಕೊಳ್ಳದಲ್ಲಿ ತಪಸ್ಸು ಮಾಡಿದ್ದಾರೆ. ಪೂಣ್ಯ ಭೂಮಿ ಇದಾಗಿದ್ದು, ಅವರ ಸ್ಮಾರಕವೂ ಇದೆ. ಮುಂದಿನ ದಿನಗಳಲ್ಲಿ ಯಾತ್ರಿ ನಿವಾಸ, ವಚನ ಗ್ರಂಥಾಲಯ, ದೇವಸ್ಥಾನ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕಾಗಿದೆ. ವರ್ಷಕ್ಕೊಂದು ಕಾರ್ಯಕ್ರಮ ನಡೆಸಬೇಕು ಎಂದು ಮನವಿ ಮಾಡಿದರು.

    ಶ್ರೀ ಷಣ್ಮುಖ ಶಿವಯೋಗಿಗಳು ಸಾಕಷ್ಟು ವಚನಗಳ ಮೂಲಕ ಸಮಾಜದಲ್ಲಿ ನೆಲೆಯೂರಿದ್ದ ಮೂಢನಂಬಿಕೆ, ಅನಿಷ್ಠ ಆಚರಣೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ವಚನ ಸಾಹಿತ್ಯದ ಕೊನೆಯ ಕೊಂಡಿಯಾಗಿದ್ದು, ಶರಣರ ಸಾಹಿತ್ಯ ಉಳಿಸುವ ಕೆಲಸ ಆಗಬೇಕಿದೆ. ನಾವೆಲ್ಲರೂ ಸೇರಿ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಶ್ರೀ ಷಣ್ಮುಖ ಶಿವಯೋಗಿಗಳ ತಪೋಭೂಮಿ ಅಭಿವೃದ್ಧಿಗೆ ಮನವಿ ಮಾಡೋಣ ಎಂದರು.

    ಬಸವಪಟ್ಟಣದ ಮರೆಪ್ಪ ಮುತ್ಯಾ, ಕೋಳಕೂರಿನ ಶ್ರೀ ಕೆಂಚಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

    ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಬಿಜೆಪಿ ಮುಖಂಡ ಗಿರೀಶ ಪಾಟೀಲ್ ರದ್ದೇವಾಡಗಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಡ್ಡನಗೇರಿ, ಶ್ರೀ ಸಿದ್ಧಬಸವೇಶ್ವರ ಟ್ರಸ್ಟ್ ಅಧ್ಯಕ್ಷ ನೀಲಕಂಠರಾಯಗೌಡ ಪಾಟೀಲ್, ಸಂಶೋಧಕ ಡಾ.ಬಿ.ನಂಜುಂಡ ಸ್ವಾಮಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಗೌಡ ಪಾಟೀಲ್ ಕೋಳಕೂರ, ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಆದಪ್ಪ ಸಿಕೇದ್, ಶರಣಬಸಪ್ಪ ನಿಷ್ಠಿ, ಗಿರೀಶಗೌಡ ಪಾಟೀಲ್ ಇನಾಮದಾರ, ಪ್ರಶಾಂತಗೌಡ ಜೈನಾಪುರ, ಸುರೇಶ ಪಾಟೀಲ್ ನೇದಲಗಿ, ಡಾ.ಎಚ್.ಟಿ.ಶೈಲಜಾ, ಶ್ರೀಹರಿ ಕರಕಿಹಳ್ಳಿ, ಡಾ.ಧರ್ಮಣ್ಣ ಬಡಿಗೇರ, ಚಂದ್ರಶೇಖರ ಹೂಗಾರ, ಪ್ರಕಾಶ ಪುಲಾರಿ, ವಿಶ್ವನಾಥ ಪಾಟೀಲ್, ಬಂಗಾರೆಪ್ಪ ಆಡೀನ್, ಕವಿತಾ ಹಳ್ಳಿ, ಸುನಂದಾ ಕಲ್ಲಾ, ಸಿದ್ರಾಮ ಕಟ್ಟಿ, ಅಮೃತಗೌಡ ಪೇಠಪಾಟೀಲ್, ರಾಜಕುಮಾರ ಕೂಡಿ, ಹೊನ್ನಪ್ಪ ಹೊನಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts