More

    ಕಲ್ಯಾಣದಲ್ಲಿ ಶಿವಸೃಷ್ಟಿ ನಿರ್ಮಾಣ

    ಬಸವಕಲ್ಯಾಣ: ನಗರದಲ್ಲಿ ಶಿವಸೃಷ್ಟಿ ನಿರ್ಮಾಣವಾಗಬೇಕು ಎಂಬ ನನ್ನ ಕನಸು ಸಾಕಾರಕ್ಕೆ ಪ್ರಯತ್ನಿಸುತ್ತಿರುವುದಾಗಿ ಮರಾಠಾ ಸಮಾಜ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎಂ.ಜಿ. ಮುಳೆ ಹೇಳಿದರು.

    ನಗರದ ಶಿವಾಜಿ ಪಾರ್ಕ್ನಲ್ಲಿ ಮರಾಠಾ ಸಮಾಜ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ನನ್ನ ಮತ್ತು ಪ್ರಮುಖರ ಪ್ರಯತ್ನದಿಂದ ಬಿಕೆಡಿಬಿ ರಚನೆಯಾಗಿದೆ. ಧರ್ಮಸಿಂಗ್ ಸಿಎಂ ಆಗಿದ್ದಾಗ ಮೊದಲ ಬಾರಿಗೆ ಮಂಡಳಿಗೆ ಅನುದಾನ ನೀಡಿದರು. ಅದರಲ್ಲಿ ಶಾಸಕನಾಗಿದ್ದ ನನ್ನ ಪ್ರಯತ್ನವೂ ಇದೆ. ಆದರೆ ಯಾರು ನೆನಪಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಹಿಂದೆ ನಾನು ಶಾಸಕನಾಗಿದ್ದಾಗ ನಗರದಲ್ಲಿ ಶಿವಾಜಿ ಪಾರ್ಕ್ ಸ್ಥಾಪಿಸಿದ್ದು, ಇದಕ್ಕೂ ಮುನ್ನ ಶಾಸಕರಾಗಿದ್ದ ಬಸವರಾಜ ಪಾಟೀಲ್ ಅಟ್ಟೂರ್ ಹಾಗೂ ಎಂ.ಜಿ.ಮುಳೆ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಕ್ಕಿಗಾಗಿ ಹೋರಾಡುತ್ತೇನೆ ಎಂದು ಹೇಳಿದರು.

    ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಶಿವಾಜಿ ಪಾರ್ಕ್ ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದರಿಂದ ಕೆಕೆಆರ್‌ಡಿಬಿಯಿಂದ ೧.೫೦ ಕೋಟಿ ರೂ. ಮಂಜೂರಾಗಿದೆ. ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣು ಸಲಗರ ಮಾತನಾಡಿ, ಯಾರೇ ಬೈದರೂ, ಆರೋಪಿಸಿದರೂ ಮಾರ್ಗದರ್ಶನ ನೀಡಿದ್ದಾರೆ ಎಂದು ಸಕಾರಾತ್ಮವಾಗಿ ಸ್ವೀಕರಿಸುತ್ತೇನೆ. ಹಿಂದೆ ಶಾಸಕರಾಗಿದ್ದ ಬಸವರಾಜ ಪಾಟೀಲ್ ಅಟ್ಟೂರ, ಎಂ.ಜಿ.ಮುಳೆ, ಮಲ್ಲಿಕಾರ್ಜುನ ಖೂಬಾ ಹಾಗೂ ಬಿ.ನಾರಾಯಣರಾವ ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದಾರೆ. ಹೀಗಾಗಿ ಕಲ್ಯಾಣದಲ್ಲಿ ಪ್ರಗತಿ ಕಾಣುತ್ತಿದೆ ಎಂದು ತಿಳಿಸಿದರು.

    ಮುಖಂಡರಾದ ಮಾಲಾ ಬಿ.ನಾರಾಯಣರಾವ, ಧನರಾಜ ತಾಳಂಪಳ್ಳಿ, ಅನೀಲ ಭೂಸಾರೆ, ಡಾ.ದಿನಕರ ಮೋರೆ, ಗಿರಿರಾಜ ಯಳಮಲೆ ಮಾತನಾಡಿದರು. ಲಾತೂರನ ಇತಿಹಾಸ ತಜ್ಞ ಡಾ.ಗಣೇಶ ಬೆಳಂಬೆ ವಿಶೇಷ ಉಪನ್ಯಾಸ ನೀಡಿದರು. ಸದಾನಂದ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.
    ಪ್ರಮುಖರಾದ ಶಹಜಹಾನ್ ಶೇಖ್ ತನ್ವೀರ್, ಅಂಗದರಾವ ಜಗತಾಪ, ಆನಂದ ಪಾಟೀಲ್, ಮಾಧವರಾವ ಹಾಸೂರೆ, ತುಕಾರಾಮ ಮಲ್ಲಪ್ಪ, ದೀಪಕ ಗಾಯಕವಾಡ, ಮೀರ್ ವಾರೀಸ್ ಅಲಿ, ಇಸ್ಮಾಯಿಲ್ ಬೆಳಕೋಣಿ, ದತ್ತಾತ್ರೇಯ ಧೂಳೆಪಾಟೀಲ್, ಪೃಥ್ವಿಗೀರ ಗೋಸ್ವಾಮಿ, ರಾಜು ಪಾಟೀಲ್ ಹಳ್ಳಿ, ಬಾಲಾಜಿ ಚಂಡಕಾಪುರ, ರಾಜು ಭೋಸ್ಲೆ, ಜ್ಞಾನೇಶ್ವರ ಮುಳೆ, ಓಂಪ್ರಕಾಶ ಪಾಟೀಲ್, ಅಭಿಮನ್ಯು ಪಾಟೀಲ್, ರಾಜು ಸೂರ್ಯವಂಶಿ, ಸೂರಜ್ ಪಾಟೀಲ್ ಇತರರಿದ್ದರು.

    ಕೆಕೆಎಂಪಿ ತಾಲೂಕು ಅಧ್ಯಕ್ಷ ವಿ.ಟಿ.ಶಿಂಧೆ ಸ್ವಾಗತಿಸಿದರು. ಸಂದೀಪ ಬಿರಾದಾರ ನಿರೂಪಣೆ ಮಾಡಿದರು. ಶಿವಾಜಿ ಪಾರ್ಕ್ ಅಭಿವೃದ್ಧಿಗೆ ೧.೫ ಕೋಟಿ ರೂ. ಕೆಕೆಆರ್‌ಡಿಬಿಯಿಂದ ಅನುದಾನ ಮಂಜೂರಿಗೆ ಪ್ರಯತ್ನಿಸಿದ ವಿಜಯಸಿಂಗ್ ಅವರನ್ನು ಸನ್ಮಾನಿಸಲಾಯಿತು.

    ಶಿವಸೃಷ್ಟಿ ನಿರ್ಮಾಣಕ್ಕಾಗಿ ೧೦ ಎಕರೆ ಭೂಮಿ ಮಂಜೂರಾಗಿದ್ದು, ೧೦ ಕೋಟಿ ಅನುದಾನ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದರೂ ಬಿಡುಗಡೆಯಾಗಿಲ್ಲ. ಮಂಜೂರಾದ ಸ್ಥಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾವ್ದಾರಿ. ಅನುದಾನ ಬಿಡುಗಡೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜತೆ ಚರ್ಚಿಸಿ ಸಿಎಂಗೆ ಕೋರಲಾಗುವುದು.
    | ಶರಣು ಸಲಗರ ಶಾಸಕ

    ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅವರ ಶೌರ್ಯ, ಸಾಹಸ, ಆದರ್ಶ ಮೌಲ್ಯಗಳನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಕೆಲಸ ನಡೆಯಬೇಕು.
    | ಡಾ.ಗಣೇಶ ಬೆಳಂಬೆ ಇತಿಹಾಸ ತಜ್ಞ ಲಾತೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts