More

    ಘೋಸ್ಟ್ ಟ್ರೇಲರ್ ಇಂದು ; ರಾಜಮೌಳಿ, ಧನುಷ್, ಪೃಥ್ವಿರಾಜ್ ಸುಕುಮಾರ್​ರಿಂದ ಬಿಡುಗಡೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಶಿವರಾಜಕುಮಾರ್ ಅಭಿನಯದ, ಶ್ರೀನಿ ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಘೋಸ್ಟ್’. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಈಗಾಗಲೇ ಶಿವರಾಜಕುಮಾರ್ ಅವರ ಸ್ಟ್ ಲುಕ್, ಒಜಿ ಮ್ಯೂಸಿಕ್ ಹಾಗೂ ಟೀಸರ್‌ಗಳಿಂದ ಸಿನಿಮಾ ಕುತೂಹಲ ಮೂಡಿಸಿದೆ. ಜತೆಗೆ ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ‘ಘೋಸ್ಟ್’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹಾಗೇ ‘ಘೋಸ್ಟ್’ ಹಾಗೂ ‘ಬೀರ್‌ಬಲ್’ ಚಿತ್ರಗಳ ಮೂಲಕ ಒಂದು ಸಿನಿಮ್ಯಾಟಿಕ್ ಯೂನಿವರ್ಸ್ ಸೃಷ್ಟಿಸಲು ನಿರ್ದೇಶಕ ಶ್ರೀನಿ ಮುಂದಾಗಿರುವುದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

    ಇದನ್ನೂ ಓದಿ : ಜನತ್-2 ನಟಿಗೆ ಕಾಸ್ಟಿಂಗ್​ ಕೌಚ್​; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಶಾ ಗುಪ್ತಾ

    ಘೋಸ್ಟ್ ಟ್ರೇಲರ್ ಇಂದು ; ರಾಜಮೌಳಿ, ಧನುಷ್, ಪೃಥ್ವಿರಾಜ್ ಸುಕುಮಾರ್​ರಿಂದ ಬಿಡುಗಡೆ

    ಹೀಗೆ ಹಲವು ವಿಶೇಷತೆಗಳಿಂದ ಕೂಡಿರುವ ‘ಘೋಸ್ಟ್’ ಚಿತ್ರದ ಟ್ರೇಲರ್ ಇಂದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳ್ಲಲೂ ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ‘ಬಾಹುಬಲಿ’, ‘ಆರ್‌ಆರ್‌ಆರ್’ ಖ್ಯಾತಿಯ ಮಾಸ್ಟರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ, ತಮಿಳಿನಲ್ಲಿ ನಟ ಧನುಷ್ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಟ್ರೇಲರ್‌ಅನ್ನು ಬೆ. 11 ಗಂಟೆಗೆ ರಿಲೀಸ್ ಮಾಡಲಿದ್ದಾರೆ.

    ಇದನ್ನೂ ಓದಿ : ‘ಸಲಾರ್’​ ಹೀರೋ ಕೈಯಲ್ಲಿವೆ ಎರಡು ಹೊಸ ಪ್ರಾಜೆಕ್ಟ್​ಗಳು!

    ಘೋಸ್ಟ್ ಟ್ರೇಲರ್ ಇಂದು ; ರಾಜಮೌಳಿ, ಧನುಷ್, ಪೃಥ್ವಿರಾಜ್ ಸುಕುಮಾರ್​ರಿಂದ ಬಿಡುಗಡೆ

    ಶಿವಣ್ಣ, ಅನುಪಮ್ ಖೇರ್, ಜಯರಾಮ್ ಜತೆ ಚಿತ್ರದಲ್ಲಿ ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಶಾಂತ್ ನಾರಾಯಣನ್, ‘ಕೆಜಿಎಫ್​’ ಖ್ಯಾತಿಯ ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಪ್ರಸನ್ನ ಮತ್ತು ಮಾಸ್ತಿ ಸಂಭಾಷಣೆ, ಮಹೇಂದ್ರ ಸಿಂಹ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.

    ಇದನ್ನೂ ಓದಿ : ‘ನಾನು ರೂಂಗೆ ಬೀಗ ಹಾಕುತ್ತಿದ್ದೆ’; ರಣದೀಪ್ ಹೂಡಾ ಖಿನ್ನತೆಗೆ ಅಕ್ಷಯ್ ಕುಮಾರ್ ಕಾರಣರಾದ್ರಾ..?

    ಘೋಸ್ಟ್ ಟ್ರೇಲರ್ ಇಂದು ; ರಾಜಮೌಳಿ, ಧನುಷ್, ಪೃಥ್ವಿರಾಜ್ ಸುಕುಮಾರ್​ರಿಂದ ಬಿಡುಗಡೆ

    ಜತೆಗೆ ಚೇತನ್ ಡಿಸೋಜಾ, ಮಾಸ್ ಮಾದ, ಅರ್ಜುನ್ ರಾಜ್ ಹಾಗೂ ವೆಂಕಟ್ ಅವರ ಸಾಹಸ ನಿರ್ದೇಶನದಲ್ಲಿ ಚಿತ್ರಕ್ಕಿರಲಿದೆ. ‘ಘೋಸ್ಟ್’ ಪ್ಯಾನ್ ಇಂಡಿಯಾ ಪಂಚ ಭಾಷೆಗಳಲ್ಲಿ ಇದೇ ಅ. 19ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

    ಘೋಸ್ಟ್ ಟ್ರೇಲರ್ ಇಂದು ; ರಾಜಮೌಳಿ, ಧನುಷ್, ಪೃಥ್ವಿರಾಜ್ ಸುಕುಮಾರ್​ರಿಂದ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts