More

    ಡಾರ್ಲಿಂಗ್ ಪ್ರಭಾಸ್ ಪ್ರೀತಿಗೆ ಧ್ವನಿಯಾದ ಶಿವಣ್ಣ? ‘ರಾಧೆ ಶ್ಯಾಮ್’ ಚಿತ್ರತಂಡ ಹೇಳಿದ್ದೇನು?

    ಹೈದರಾಬಾದ್: ಪ್ಯಾನ್​ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 11 ರಂದು ‘ರಾಧೆ ಶ್ಯಾಮ್ತೆರೆಗಪ್ಪಳಿಸಲಿದೆ. ಇದರಲ್ಲಿ, ಬಹುಭಾಷಾ ನಟಿ ಪೂಜಾ ಹೆಗ್ಡೆ ಹಾಗೂ ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿದ್ದು, ಇದೇ ಕಾರಣಕ್ಕೆ ಈ ಚಿತ್ರ ಒಂದು ಬಹುನಿರೀಕ್ಷಿತ ಸಿನಿಮಾ ಆಗದೆ. ಆದರೆ, ಇದೀಗ ಈ ಪ್ಯಾನ್​ ಇಂಡಿಯನ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸುವಂತಹ ಸುದ್ದಿಯೊಂದು ಕೇಳಿಬಂದಿದೆ.
    ಹೌದು, ಮೂಲದಲ್ಲಿ ಇದು ಒಂದು ತೆಲುಗಿನ ಸಿನಿಮಾ ಆಗಿದ್ದು, ಬಳಿಕ ಪ್ಯಾನ್ ಇಂಡಿಯಾ ಆದ ಕಾರಣ ಈ ಚಿತ್ರತಂಡಕ್ಕೆ ಸೆಂಚುರಿ ಸ್ಟಾರ್ ನಟ ಶಿವರಾಜ್​ಕುಮಾರ್ ಕೂಡಾ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅಂದಹಾಗೆ, ‘ರಾಧೆ ಶ್ಯಾಮ್​’ ಸಿನಿಮಾದ ನಿರ್ಮಾಪಕರೇ ಸ್ವತಃ ಈ ಮಾಹಿತಿ ಅಭಿಮಾನಿಗಳಿಗೆ ನೀಡಿದ್ದಾರೆ. ಹಾಗಾದರೆ, ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಮ್ಮ ಶಿವಣ್ಣನಿಗೆ ಏನು ಕೆಲಸ ಆಂತೀರಾ?. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ.
    ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ ‘ರಾಧೆ ಶ್ಯಾಮ್ಚಿತ್ರ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ 5 ಭಾಷೆಗಳಲ್ಲಿ, ಅಂದರೆ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ, ನಟ ಶಿವರಾಜ್​ಕುಮಾರ್ ಅವರು ರಾಧೆ ಶ್ಯಾಮ್ಚಿತ್ರದ ಕನ್ನಡ ಅವತರಣಿಕೆಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಡಬ್ಬಿಂಗ್ ನಡೆದಿದ್ದು, ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಧ್ವನಿ ನೀಡಿದ್ದಾರೆ.
    ಹೌದು, ಶಿವಣ್ಣನಂತೆ ಖ್ಯಾತ ನಿರ್ದೇಶಕ ರಾಜಮೌಳಿ ಅವರು ತೆಲುಗಿನಲ್ಲಿ ಮತ್ತು ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ‘ರಾಧೆ ಶ್ಯಾಮ್‘ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಆದರೆ, ತಮಿಳು ವರ್ಷನ್​ನಲ್ಲಿ ಯಾರ ಧ್ವನಿ ಕೇಳಿಬರಿಲಿದೆ ಎಂಬ ಮಾಹಿತಿ ಇನ್ನೂ ಹೊರಬಂದಿಲ್ಲ. ಈ ಸುದ್ದಿಕೇಳಿ ಸಿನಿಪ್ರೇಕ್ಷಕರಿಗೆ ಸಖತ್​ ಥ್ರಿಲ್​ ಆಗಿದೆ. ಕೊನೇ ಹಂತದಲ್ಲಿ ದಿಗ್ಗಜರೆಲ್ಲ ‘ರಾಧೆ ಶ್ಯಾಮ್​’ ಸಿನಿಮಾ ತಂಡವನ್ನು ಸೇರಿಕೊಂಡಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನು, ಚಿತ್ರತಂಡ ಈ ದಿಗ್ಗಜರಿಗೆ ಸಿನಿಮಾದ ಭಾಗವಾಗಿದ್ದಕ್ಕೆ ತಮ್ಮ ಟ್ವೀಟ್​ನಲ್ಲಿ ಧನ್ಯವಾದಗಳನ್ನು ತಿಳಿಸಿದೆ.

    ಡಾರ್ಲಿಂಗ್ ಪ್ರಭಾಸ್ ಪ್ರೀತಿಗೆ ಧ್ವನಿಯಾದ ಶಿವಣ್ಣ? ‘ರಾಧೆ ಶ್ಯಾಮ್' ಚಿತ್ರತಂಡ ಹೇಳಿದ್ದೇನು? ಡಾರ್ಲಿಂಗ್ ಪ್ರಭಾಸ್ ಪ್ರೀತಿಗೆ ಧ್ವನಿಯಾದ ಶಿವಣ್ಣ? ‘ರಾಧೆ ಶ್ಯಾಮ್' ಚಿತ್ರತಂಡ ಹೇಳಿದ್ದೇನು?

    ಪವನ್, ಟಿಡಿಪಿ VS ಜಗನ್: ಸಿಎಂ ಜಗನ್ ಎಂಥ ಉಗ್ರವಾದಿ ಗೊತ್ತಾ ಎಂದ ಚಂದ್ರಬಾಬು ನಾಯ್ಡು!

    ಹೂವಿನ ಉಯ್ಯಾಲೆಯ ಮೇಲೆ ಕುಳಿತ ಅಮೂಲ್ಯ! ಹೊಸ ಫೋಟೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts