ಮುಂಬೈ: ದಸರಾ ಹಬ್ಬದ ಶುಭ ಸಂದರ್ಭದಲ್ಲಿ ನಟಿ ಪೂಜಾ ಹೆಗ್ಡೆ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಐಶಾರಾಮಿ ಕಾರಿನ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇವುಗಳನ್ನು ನೋಡಿದ ನೆಟ್ಟಿಗರು ಆ ಕಾರಿನ ಬೆಲೆಯನ್ನು ಹುಡುಕುತ್ತಿದ್ದಾರೆ. ಕಾರಿನ ಬೆಲೆ ಸುಮಾರು ನಾಲ್ಕು ಕೋಟಿ ಎಂದು ವರದಿಯಾಗಿದೆ.
4 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಟಿ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿ ಹೊಸ ಕಾರನ್ನು ಖರೀದಿಸಿದ್ದಾರೆ. ರೇಂಜ್ ರೋವರ್ ಒಂದು ಐಷಾರಾಮಿ SUV ಆಗಿದ್ದು, ಅದರ ಸುಧಾರಿತ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಉನ್ನತ-ಮಟ್ಟದ ವ್ಯವಸ್ಥೆಗಳು, ಇನ್ಫೋಟೈನ್‌ಮೆಂಟ್ ಪರದೆಗಳು ಮತ್ತು ಹಲವಾರು ಇತರ ಸೌಕರ್ಯಗಳು ಸೇರಿವೆ.
ಕಾರಿನ ಫೋಟೋ ವೈರಲ್ ಆಗಿದ್ದು, ಇದರಲ್ಲಿ ಪೂಜಾ ಮತ್ತು ಅವರ ಕುಟುಂಬ ಸದಸ್ಯರು ಹೊಸ ಕಾರಿನೊಂದಿಗೆ ಪೋಸ್ ನೀಡುತ್ತಿದ್ದಾರೆ. ಪೂಜಾ ಹೆಗ್ಡೆ ಈಗಾಗಲೇ ಐಷಾರಾಮಿ ಕಾರುಗಳಾದ ಪೋರ್ಷೆ ಕೆಯೆನ್ನೆ, ಜಾಗ್ವಾರ್, ಆಡಿ ಕ್ಯೂ7 ಮತ್ತು ಇನ್ನೂ ಅನೇಕ ಕಾರುಗಳನ್ನು ಹೊಂದಿದ್ದಾರೆ. ಇದೀಗ ಈ ರೇಂಜ್ ರೋವರ್ ಕೂಡ ಸೇರಿಕೊಂಡಿದೆ.
ಪೂಜಾ ಅಲ್ಲದೆ, ಅಲಿಯಾ ಭಟ್, ನಿಮ್ರತ್ ಕೌರ್, ಆದಿತ್ಯ ರಾಯ್ ಕಪೂರ್, ಸೋನಮ್ ಕಪೂರ್, ಮಹೇಶ್ ಬಾಬು, ಮೋಹನ್ ಲಾಲ್ ಮತ್ತು ಮಲೈಕಾ ಅರೋರಾ ಅವರಂತಹ ಹಲವಾರು ಸೆಲೆಬ್ರಿಟಿಗಳು ಸಹ ಇದೇ ಕಾರನ್ನು ಹೊಂದಿದ್ದಾರೆ.
ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾಗೆ ಸಹಿ ಹಾಕಿದ್ದಾರೆ. ನಿನ್ನೆಯಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಚಿತ್ರದ ಬಿಡುಗಡೆಗೆ ನಿರ್ಮಾಪಕರು 2024 ದಸರಾ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಪೂಜಾ ಅವರ ಕೊನೆಯ ಎರಡು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಈ ಬಾರಿ ಹಿಟ್ ಸಿಗುತ್ತದೋ ಕಾದು ನೋಡೋಣ.
ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?