More

    ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?

    ಬೆಂಗಳೂರು: ಹುಲಿ ಉಗುರಿನ ಡಾಲರ್ ಧರಿಸಿದ್ದ ಕಾರಣಕ್ಕಾಗಿ ಬಿಗ್​ ಬಾಸ್ ಸ್ಪರ್ಧಿಯಾದ ವರ್ತೂರು ಸಂತೋಷ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಬೆನ್ನಲ್ಲೇ ನಟ ದರ್ಶನ್, ಜಗ್ಗೇಶ್‌, ರಾಕ್‌ಲೈನ್‌ ವೆಂಕಟೇಶ್‌ ಹಾಗೂ ನಿಖಿಲ್‌ ಕುಮಾರಸ್ವಾಮಿಗೂ ಸಂಕಷ್ಟ ಎದುರಾಗಿದೆ. ನಿನ್ನೆ ಅಧಿಕಾರಿಗಳು ಈ ಪ್ರಕಣದಲ್ಲಿ ಸಿಲುಕಿಕೊಂಡಿರುವ ಸೆಲೆಬ್ರೆಟಿಗಳ ಮನೆಗೆ ಭೇಟಿ ನೀಡಿ ಶೋಧ ಕಾರ್ಯ ನಡೆಸಿ ನೊಟೀಸ್​ ಕೊಟ್ಟು ಬಂದಿದ್ದಾರೆ.

    ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?

    ದರ್ಶನ್ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದು, ಊಹಿಸಲು ಸಾಧ್ಯವಾಗದಷ್ಟು ಹುಲಿ ಉಗುರು ಮಾದರಿ ದಡಾಲರ್​​ಗಳು ಸಿಕ್ಕಿವೆ ಎನ್ನಲಾಗಿದೆ. ಮನೆಯ ಸರ್ಚ್​ಗೆ ಬಂದ ವೇಳೆ ಅಧಿಕಾರಿಗಳಿಗೆ ದರ್ಶನ್ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.

    ಮೂಲಗಳ ಪ್ರಕಾರ, ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್​​ಗಳು. ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.

    ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್‌ ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದು, 8 ರಿಂದ 10 ಹುಲಿ ಉಗುರಿನ ಮಾದರಿ ಪೆಂಡೆಂಟ್‌ಗಳು ,ಹಸುವಿನ ಕೊಂಬಿನ ಪೆಂಡೆಂಟ್‌ಗಳು ಇದೆ ಎನ್ನಲಾಗುತ್ತಿದೆ. ಅಧಿಕಾರಿಗಳಿಗೆ ಸಿಕ್ಕಿರುವ ಪೆಂಡೆಂಟ್‌ಗಳು ನಕಲಿಯಾ ಎನ್ನುವ ಅನುಮಾನ ಶುರುವಾಗಿದೆ. ಅಸಲಿಯೋ, ನಕಲಿಯೋ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ.ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?

    ಅಧಿಕಾರಿಗಳಿಗೆ ಹೇಳಿರುವ ಪ್ರಕಾರ, ಶೂಟಿಂಗ್‌ಗಾಗಿ ಲಾಕೆಟ್‌ಗಳನ್ನು ಬಳಸುತ್ತೇವೆ ಎಂದಿದ್ದರಂತೆ. ಅದೇ ರೀತಿ ನನ್ನ ಬಳಿ ಇರುವ ಲಾಕೆಟ್‌ಗಳಿವು ಎಂದು ತೋರಿಸಿದ್ದಾರೆ.ದರ್ಶನ್ ಮನೆಯಲ್ಲಿ ಸಿಕ್ಕಿರುವ ಪೆಂಡೆಂಟ್‌ಗಳು ಹಸುವಿನ ಕೊಂಬಿನಿಂದ ಮಾಡಿದ್ದಾರೆ. ಇಂತಹದ್ದೊಂದು ಸುದ್ದಿ ದರ್ಶನ್ ಆಪ್ತ ವಲಯದಲ್ಲಿ ಹಾಗೂ ಅಧಿಕಾರಿಗಳ ಮೂಲಗಳಿಂದ ರಿವೀಲ್ ಆಗಿದೆ.

    ಇನ್ನು, ಜಗ್ಗೇಶ್ ಮನೆಯಲ್ಲೂ ಶೋಧ ನಡೆಸಲಾಗಿದ್ದು, ಅವರು ತಾಯಿ ಕೊಟ್ಟ ಹುಲಿ ಉಗುರಿನ ಲಾಕೆಟ್​ನ ಅಧಿಕಾರಿಗಳಿಗೆ ಮರಳಿ ನೀಡಿದ್ದಾರೆ. ಸದ್ಯ ದರ್ಶನ್, ಜಗ್ಗೇಶ್, ನಿಖಿಲ್ ಹಾಗೂ ರಾಕ್​ಲೈನ್ ವೆಂಕಟೇಶ್​ಗೆ ನೋಟಿಸ್ ನೀಡಲಾಗಿದೆ. ಇವರು ನೋಟಿಸ್​​ಗೆ ಉತ್ತರಿಸಬೇಕಿದೆ.

    ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?

    ಇನ್ನೊಂದೆಡೆ ಸ್ಟಾರ್‌ಗಳ ವಿರುದ್ಧ ಪರಿಸರವಾದಿಗಳು, ಹೋರಾಟಗಾರರು ಹಾಗೂ ಸೊಶೀಯಲ್​​ ಮೀಡಿಯಾ ಬಳಕೆದಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

    ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

    ಹುಲಿ ಉಗುರಿ ಪ್ರಕರಣ; ಚಿಕ್ಕಮಗಳೂರಿನಲ್ಲಿ ಇಬ್ಬರು ಅರ್ಚಕರು ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts