More

    ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!!

    ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ರೌಡಿಸಂ ಸಿನಿಮಾಕ್ಕೆ ಹೊಸ ಭಾಷ್ಯ ಬರೆದ ಸಿನಿಮಾ ಅಂದರೆ ಬೇರಾವುದೂ ಅಲ್ಲ ಅದುವೇ ‘ಓಂ’. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ನಾಯಕನಾಗಿ ನಟಿಸಿದ್ದ ಆ ಸಿನಿಮಾ ಚಂದನವನದ ಆಲ್​ ಟೈಮ್​ ಹಿಟ್​ ಸಿನಿಮಾಗಳಲ್ಲೊಂದು. ಕೇವಲ ಚಂದನವನ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಕಡೆ ನೋಡುವಂತೆ ಮಾಡಿದ ಕ್ಲಾಸಿಕ್​ ಸಿನಿಮಾ. ಇಂದಿಗೂ ಟಿವಿಯಲ್ಲಿ ಈ ಸಿನಿಮಾ ಬಿತ್ತರವಾದರೆ, ಟಿಆರ್​ಪಿ ಟಾಪ್​ನಲ್ಲಿರುತ್ತದೆ. ಈ ಮಾಸ್​ ಸಿನಿಮಾ ಇದೀಗ ವಿಶೇಷ ದಿನವೊಂದಕ್ಕೆ ಸಿದ್ಧವಾಗುತ್ತಿದೆ.

    ಇದನ್ನೂ ಓದಿ: ಇಂದು ವಿಜಯ್‌ಪ್ರಕಾಶ್ ಬಾಳಲ್ಲಿ ಸ್ಪೆಷಲ್ ದಿನ!

    ಹೌದು, ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಓಂ‘ ಸಿನಿಮಾ 1995ರ ಮೇ 19ರಂದು ಬಿಡುಗಡೆ ಆಗಿತ್ತು. ಹಾಗಾಗಿ ಇನ್ನೊಂದು ವಾರ ಕಳೆದರೆ, ಚಂದನವನದಲ್ಲಿ ಬರೋಬ್ಬರಿ 25 ವರ್ಷಗಳನ್ನು ‘ಓಂ’ ಸಿನಿಮಾ ಪೂರೈಸಿದಂತಾಗುತ್ತದೆ. ಭೂಗತ ಲೋಕದ ಕಥೆ ಮತ್ತು ಅದಕ್ಕೊಂದಿಷ್ಟು ಪ್ರೀತಿ ಪ್ರೇಮದ ಲೇಪನ ಮಾಡಲಾಗಿತ್ತು. ಅದನ್ನು ಇಡೀ ಪ್ರೇಕ್ಷಕ ಕುಲ ಅಷ್ಟೇ ಖುಷಿಯಿಂದಲೇ ಆಸ್ವಾದಿಸಿದ್ದರು. ಇದೀಗ ಅಭಿಮಾನಿಗಳು ಮತ್ತೊಂದು ಸಂಭ್ರಮ ಸಾಕ್ಷಿಯಾಗುವ ತವಕದಲ್ಲಿದ್ದಾರೆ.

    ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!!

    ಇದನ್ನೂ ಓದಿ: ಸನ್ನಿ ಲಿಯೋನ್ ಕುಟುಂಬ ಸಮೇತ ಅಮೆರಿಕಾಗೆ ವಾಪಸ್ಸು ಹೋಗಿದ್ದೇಕೆ?

    ಹೌದು, ಈಗಾಗಲೇ ಶಿವರಾಜ್​ಕುಮಾರ್​ ಅಭಿಮಾನಗಳು ಸಿಲ್ವರ್​ ಜುಬಿಲಿ ಸಂಭ್ರಮಕ್ಕೆ ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಟ್ವಿಟರ್​ನಲ್ಲಿ ಅಭಿಯಾನವನ್ನೇ ಶುರು ಮಾಡಲು ಸಿದ್ಧರಾಗುತ್ತಿದ್ದಾರೆ. ಆದರೆ, ಸಿಲ್ವರ್​ ಜುಬಿಲಿ ಪ್ರಯುಕ್ತ ಸಿನಿಮಾ ತಂಡದಿಂದ ಏನಾದರೂ ವಿಶೇಷತೆ ಇರಲಿದೆಯೇ? ಶಿವಣ್ಣ, ಉಪೇಂದ್ರ ಸಿನಿಮಾ ಬಗ್ಗೆ ಮತ್ತೆ ಮಾತನಾಡಲಿದ್ದಾರೆಯೇ ? ಈ ಎಲ್ಲ ಪ್ರಶ್ನೆಗಳಿಗೆ ಮೇ 19ರಂದೇ ಉತ್ತರ ಸಿಗಲಿದೆ.

    ವಾರ್ಷಿಕೋತ್ಸವದ ಮೂಡ್‌ನಲ್ಲಿ ‘ಬಿಗ್ ಬಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts