More

    ಸಿಎಂ ತವರಲ್ಲಿ ಮಾಟ-ಮಂತ್ರದ ಸದ್ದು!

    ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ರಾಜ್ಯಾದ್ಯಂತ ರಂಗೇರಿದೆ. ಗೆಲುವಿಗೆ ನಾನಾ ರಣತಂತ್ರ ರೂಪಿಸುತ್ತಿರುವ ಅಭ್ಯರ್ಥಿಗಳು ದೇವರ ಪೂಜೆ, ಹೋಮ, ಹರಕೆಯ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಮಲೆನಾಡಿನ ಹಲವೆಡೆ ಮಾಟ-ಮಂತ್ರದ ಸದ್ದು ಜೋರಾಗಿದ್ದು, ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ತಳಮಳ ಸೃಷ್ಟಿಸಿದೆ.

    ಸಿಎಂ ಯಡಿಯೂರಪ್ಪರ ತವರು ಜಿಲ್ಲೆಯ ಸೋಗಾನಾ ಗ್ರಾಪಂ ವ್ಯಾಪ್ತಿಯ ಓತಿಘಟ್ಟದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಅಭ್ಯರ್ಥಿ ಮನೆ ಒಳಗೊಂಡಂತೆ 40 ಮನೆಗಳ ಮುಂದೆ ಅರಿಶಿಣ-ಕುಂಕುಮ ಸುರಿದು ಹೋಗಿದ್ದಾರೆ. ವಿರೋಧಿಗಳು ವಾಮಾಚಾರ ಮಾಡಿಸಿದ್ದಾರೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ. ಇದನ್ನೂ ಓದಿರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಆತ್ಮಹತ್ಯೆ

    ಬುಧವಾರ ತಡರಾತ್ರಿ ಮನೆಗಳ ಮುಂದೆ ಅರಿಶಿಣ ಕುಂಕುಮ ಎರಚಿರುವ ದೃಶ್ಯ ಕಂಡು ಬಂದಿದೆ. 40 ಮನೆಗಳ ಮುಂದೆ ಇದೇ ರೀತಿ ಮಾಡಲಾಗಿದೆ. ಓತಿಘಟ್ಟಹಳ್ಳಿಯು ಸೋಗಾನೆ ಗ್ರಾಪಂ ವ್ಯಾಪ್ತಿಗೆ ಬರಲಿದ್ದು, ಸೋಗಾನೆ ಗ್ರಾಪಂ ಚುನಾವಣೆಯ ಅಖಾಡಕ್ಕೆ 9 ಮಂದಿ ಇಳಿದಿದ್ದಾರೆ. ಇದು ವಾಮಾಚಾರ ಎಂದೇ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

    ಪ್ರತಿ ಚುನಾವಣೆ ವೇಳೆಯೂ ಇದೇ ರೀತಿ ಮಾಡಲಾಗುತ್ತಿದೆಯಂತೆ. ಚುನಾವಣಾ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರನ್ನು ಹೆದರಿಸಲು ಇಂತಹ ಕೃತ್ಯವನ್ನು ವಿರೋಧ ಬಣ ಮಾಡುವುದು ಸಾಮಾನ್ಯ. ಆದರೆ ಇಂತಹ ಕೃತ್ಯಕ್ಕೆ ಯಾರೂ ಅಂಜುವುದಿಲ್ಲ ಎಂದು ಗ್ರಾಮದ ಕೆಲವರು ಎಚ್ಚರಿಸಿದ್ದಾರೆ.

    ಹೊಸಕೋಟೆ ಟಿಎಚ್​ಒ ನಾಪತ್ತೆ ಪ್ರಕರಣದ ಹಿಂದೆ ಎಂಟಿಬಿ ಆಪ್ತನ ಕೈವಾಡ?

    ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

    ನಿನ್ನ ಜತೆಗಿನ ಅಕ್ರಮ ಸಂಬಂಧ ಮುರಿದುಕೊಳ್ಳಲು ನಾ ಒಲ್ಲೆ… ಎನ್ನುತ್ತಲೇ ಪ್ರಿಯಕರನ ಜತೆಗೂಡಿ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts