More

    ನಮ್ಮ ಹಕ್ಕನ್ನು ನಾವು ಮರೆಯಬಾರದು: ಮತ ಚಲಾಯಿಸಿ ಮದುವೆ ಮಂಟಪಕ್ಕೆ ಹೊರಟ ವರನ ಕುಟುಂಬ

    ಶಿವಮೊಗ್ಗ: ತಾಳಿ ಕಟ್ಟುವ ಮುನ್ನ ಮದುಮಗನೊಬ್ಬ ಮತ ಚಲಾವಣೆ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಮತದಾನ ಪ್ರಮಾಣ ಹೆಚ್ಚಿಸಬೇಕೆಂಬ ಚುನಾವಣಾ ಆಯೋಗದ ಪ್ರಯತ್ನಕ್ಕೆ ಸಾಥ್​ ನೀಡಿದ್ದಾರೆ.

    ಸಾಗರ ಶಿವಪ್ಪನಗರ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ಎಂಬುವರು ಮದುವೆಗೆ ಹೊರಡುವ ಮುನ್ನ ಮತ ಚಲಾವಣೆ ಮಾಡಿ ಇತರರಿಗೆ ಮಾದರಿಯಾದರು.

    ಇದನ್ನೂ ಓದಿ: ಗಣ್ಯರ ಟೆಂಪಲ್ ರನ್ ಡಿಕೆಶಿ ಕುಟುಂಬದಿಂದ ಮತದಾನ

    ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಪಲ್ಲವಿ ಎಂಬವರೊಂದಿಗೆ ಇಂದು ನಿಶ್ಚಯವಾಗಿತ್ತು. ಚುನಾವಣೆಯ ದಿನಾಂಕ ನಿಗದಿಗೂ ಮುನ್ನವೇ ವಿವಾಹದ ದಿನಾಂಕ ನಿಶ್ಚಯವಾಗಿತ್ತು. ತನ್ನ ಕುಟುಂಬದ ಎಲ್ಲ ಸದಸ್ಯರು ಬೆಳಗ್ಗೆ ಮತ ಚಲಾವಣೆ ಮಾಡಿ ಮದುವೆಗೆ ಹೊರಟರು.

    ಈ ವೇಳೆ ನಮ್ಮ ಹಕ್ಕನ್ನು ನಾವು ಮರೆಯಬಾರದು ಎಂದು ಹೇಳುವ ಮೂಲಕ ಮತದಾನವನ್ನು ನಿರ್ಲಕ್ಷಿಸುವವರಿಗೆ ಸಂದೇಶ ರವಾನಿಸಿದರು.

    ಮತದಾನ ದಿನ ರಜೆ ಸಿಕ್ತು ಅಂತ ಕೆಲ ಯುವಕ-ಯುವತಿಯರು ಪ್ರವಾಸದ ಮೋಜಿಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ. ಕಳೆದ ಬಾರಿ ಮತದಾನ ಪ್ರಮಾಣದಲ್ಲಿ ಭಾರೀ ಕುಸಿತವಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ತೀವ್ರ ಕುಸಿತಕಂಡಿತ್ತು. ಹೀಗಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ್ದು, ಅದರ ಫಲಿತಾಂಶ ಆರಂಭದಲ್ಲೇ ಗೋಚರವಾಗಿದೆ.

    ಇದನ್ನೂ ಓದಿ: ಕಾರು ಪಲ್ಟಿ: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಸಹೋದರನಿಗೆ ಗಂಭೀರ ಗಾಯ

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    ಸುಭದ್ರ ಕರ್ನಾಟಕಕ್ಕಾಗಿ VOTE ಮಾಡೋಣ: ಮತ ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದ ವಧು

    ಮತ ಚಲಾಯಿಸಿದ ಪದ್ಮಶ್ರೀ ಮಂಜಮ್ಮ ಜೋಗತಿ

    ಮತದಾನ ಮಾಡಿದ ರಿಯಲ್ ಸ್ಟಾರ್; ಸೆಲ್ಫಿಗೆ ಮುಗಿಬಿದ್ದ ಜನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts