More

    ಸುಭದ್ರ ಕರ್ನಾಟಕಕ್ಕಾಗಿ VOTE ಮಾಡೋಣ: ಮತ ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದ ವಧು

    ಚಿಕ್ಕಮಗಳೂರು: ಈ ಬಾರಿ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಅದಕ್ಕೆ ಬೆಂಬಲವಾಗಿ ವಧುವೊಬ್ಬಳು ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

    ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ವಧುವೊಬ್ಬಳು ಮತ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಮುಹೂರ್ತಕ್ಕೂ ಮುನ್ನ ಮತ ಚಲಾವಣೆ ಮಾಡಿ, ನಂತರ ಮದುವೆ ಮಂಟಪಕ್ಕೆ ವಧು ತೆರಳಿದಳು.

    ಮತದಾನ ದಿನ ರಜೆ ಸಿಕ್ತು ಅಂತ ಕೆಲ ಯುವಕ-ಯುವತಿಯರು ಪ್ರವಾಸದ ಮೋಜಿಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ. ಕಳೆದ ಬಾರಿ ಮತದಾನ ಪ್ರಮಾಣದಲ್ಲಿ ಭಾರೀ ಕುಸಿತವಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ತೀವ್ರ ಕುಸಿತಕಂಡಿತ್ತು. ಹೀಗಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ್ದು, ಅದರ ಫಲಿತಾಂಶ ಆರಂಭದಲ್ಲೇ ಗೋಚರವಾಗಿದೆ.

    ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ; ಅಮೆರಿಕಾದಿಂದ ಶಿರಸಿಗೆ ಬಂದು ಮತ ಚಲಾಯಿಸಿದ ಮಹಿಳೆ

    ರಾಜ್ಯದಲ್ಲಿ ಮತದಾನ ಚುರುಕಾಗಿ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇ. 8.02 ರಷ್ಟು ಮತದಾನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಮಾಹಿತಿ ಮಾಹಿತಿ ನೀಡಿದೆ. ಅಂಕಿ-ಅಂಶಗಳನ್ನು ನೋಡಿದರೆ ಈ ಬಾರಿಯ ಮತದಾನಕ್ಕೆ ಉತ್ತಮ ಆರಂಭ ಸಿಕ್ಕಿದೆ.

    ಮೇ 13ಕ್ಕೆ ಫಲಿತಾಂಶ

    ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

    ಮತಗಟ್ಟೆ ಮುಂದೆ ಧರಣಿ ಕುಳಿತ ಅಜ್ಜಿ! ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

    ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಡಾ.ವಿಜಯ ಸಂಕೇಶ್ವರ ಕುಟುಂಬಸ್ಥರು

    ಮತದಾನ ಮಾಡಿದ ರಕ್ಷಿತ್ ಶೆಟ್ಟಿ; ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ ಎಂದ ಸಿಂಪಲ್ ಸ್ಟಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts