More

    ಕುಪ್ಪಗಡ್ಡೆಯಲ್ಲಿ ಪುರಾತನ ಶಿವಲಿಂಗ ಪತ್ತೆ

    ಶಿರಸಿ: ತಾಲೂಕಿನ ಕುಪಗಡ್ಡೆಯಲ್ಲಿ ಭೂಮಿ ಸಮತಟ್ಟುಗೊಳಿಸುವ ವೇಳೆ ದೇವಸ್ಥಾನದ ಅವಶೇಷಗಳು ಗುರುವಾರ ಸಂಜೆ ದೊರೆತಿದೆ. ಸ್ಥಳೀಯರು ಕೌತುಕದಿಂದ ಆಗಮಿಸಿ ಪರಿಶೀಲಿಸಿದ್ದಾರೆ.
     ಇಲ್ಲಿಯ ಪಾಂಡುರಂಗ ಕಟ್ಟಿಮನಿ ಅವರಿಗೆ ಸೇರಿದ ಕೃಷಿ ಭೂಮಿ ಇದಾಗಿದೆ. ಜೆಸಿಬಿ ಯಂತ್ರ ಬಳಸಿ ಅವರು ಭೂಮಿ ಸಮತಟ್ಟು ಮಾಡುವಾಗ ಸಿಕ್ಕ ಕಲ್ಲುಗಳಲ್ಲಿ ದೇವರ ಚಿತ್ರಗಳಿದ್ದವು. ಬಳಿಕ ಈ ಜಾಗದಲ್ಲಿ ಇನ್ನಷ್ಟು ಪರಿಶೀಲನೆ ಮಾಡಿದಾಗ ಈ ಮಾದರಿಯ ನಾಲ್ಕು ಕಲ್ಲುಗಳು ಪತ್ತೆಯಾಗಿವೆ. ಶಿವನ ಚಿತ್ರ, ಲಿಂಗ ಮುದ್ರೆಗಳು ಈ ಕಲ್ಲಿನಲ್ಲಿ ಇರುವುದು ಪತ್ತೆಯಾಗಿವೆ.
     ಸ್ಥಳೀಯರು ಹೇಳುವಂತೆ ಕುಪಗಡ್ಡೆ ಊರಿನಲ್ಲಿ ಈ ರೀತಿ ದೇವರ ಚಿತ್ರ ಇರುವ ಕಲ್ಲುಗಳು ಸಾಮಾನ್ಯ. ಕದಂಬರ ಕಾಲದಲ್ಲಿ ಬನವಾಸಿ ರಾಜಧಾನಿಯಾಗಿತ್ತಲ್ಲದೇ, ಇಲ್ಲಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ದೇವಾಲಯಗಳನ್ನೂ ಅಧಿಕ ಸಂಖ್ಯೆಯಲ್ಲಿ ನಿರ್ಮಿಸಿದ್ದರು ಎನ್ನಲಾಗಿದೆ.
     ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಮೂರ್ತಿಗಳನ್ನು ಪರಿಶೀಲಿಸಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಇದನ್ನೂ ಓದಿ:: ಉರಗ ರಕ್ಷಕ ಅಬು ತಲಾ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts