More

    ಹೆಬ್ಬಾರ ಪುತ್ರ ಕಾಂಗ್ರೆಸ್‌ ಸೇರ್ಪಡೆಗೆ ಸಜ್ಜಾದ ವೇದಿಕೆ: ಶಾಸಕರ ಬೆಂಬಲಿಗರಿಂದ ಬಿಜೆಪಿಗೆ ರಾಜೀನಾಮೆ ಸಲ್ಲಿಕೆ

    ಶಿರಸಿ: ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕಳಿಸಲು ಸಿದ್ಧತೆ ನಡೆಸಿದ್ದಾರೆ. ಅದರ ಭಾಗವಾಗಿ ಬನವಾಸಿ ಭಾಗದ ಭಾಗದ ಕೆಲ ಹೆಬ್ಬಾರ ಬೆಂಬಲಿಗರು ಮಂಗಳವಾರ ಬಿಜೆಪಿಯ ತಮ್ಮ ಜವಾಬ್ದಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
    ಶಾಸಕ ಹೆಬ್ಬಾರ ಅವರು ತಮ್ಮ ಕ್ಷೇತ್ರದ ಬನವಾಸಿ ಭಾಗದ ಕಾರ್ಯಕರ್ತರ ಆಂತರಿಕ ಸಭೆಯನ್ನು ಮಂಗಳವಾರ ಕೆಡಿಸಿಸಿ ಬ್ಯಾಂಕ್ ಪ್ರವಾಸಿ ಮಂದಿರದಲ್ಲಿ ನಡೆಸಿದ್ದಾರೆ. ಇದೇ ವಾರದಲ್ಲಿ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಹಾಗೂ ಬನವಾಸಿ ಹೋಬಳಿಯ ಪ್ರಮುಖರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಹೆಬ್ಬಾರ ತಮ್ಮ ಬೆಂಬಲಿಗರಿಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ರಾಜೀನಾಮೆ

    ಸಭೆಯ ಮುಂದುವರಿದ ಭಾಗವಾಗಿ ಬದನಗೋಡ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಬಿ. ಗೌಡ್ರು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣದಿಂದ ತಾವು ಈ ಹುದ್ದೆಯಲ್ಲಿ ಮುಂದುವರಿಯುತ್ತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಹಲಗದ್ದೆ ಶಕ್ತಿ ಕೇಂದ್ರದ ಪ್ರಮುಖ ಅರವಿಂದ ತೆಲಗುಂದ ಸಹ ಮಂಗಳವಾರವೇ ರಾಜೀನಾಮೆ ಸಲ್ಲಿಸಿದ್ದು, ಅವರೂ ವಯಕ್ತಿಕ ಸಮಸ್ಯೆಯ ಕಾರಣವನ್ನೇ ತಿಳಿಸಿದ್ದಾರೆ.

    ಹೆಬ್ಬಾರ ಮುಂದುವರಿಕೆ..?

    ಹೆಬ್ಬಾರ ಅವರು ಬಿಜೆಪಿಗೆ ತಾವಾಗಿಯೇ ರಾಜೀನಾಮೆ ನೀಡಿದಲ್ಲಿ ಅವರ ಶಾಸಕ ಸ್ಥಾನವೂ ಹೋಗಲಿದೆ. ಮತ್ತೆ ಉಪ ಚುನಾವಣೆ ಎದುರಿಸಬೇಕಾಗುತ್ತದೆ. ಇದರಿಂದ ಅವರು ರಾಜೀನಾಮೆ ನೀಡದೇ ಇರಲು ತಾವು ನಿರ್ಧರಿಸಿದ್ದಾಗಿ ಸಭೆಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
    ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸದೇ ಪಕ್ಷದ ವಿಪ್ ಉಲ್ಲಂಘಿಸಿದ ಅವರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಲ್ಲಿ, ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ಕೊಟ್ಟು, ಶಾಸಕರಾಗಿ ಮುಂದುವರಿಯಬಹುದು ಎಂಬ ತಮ್ಮ ಯೋಜನೆಯನ್ನು ಹೆಬ್ಬಾರರು ಬೆಂಬಲಿಗರ ಸಭೆಯಲ್ಲಿ ಮಂಗಳವಾರ ವಿವರಿಸಿದ್ದಾರೆ ಎನ್ನಲಾಗಿದೆ.

    ಆದರೆ, ಶಾಸಕ ಶಿವರಾಮ ಹೆಬ್ಬಾರ್ ಈ ಸಭೆಯ ಬಗ್ಗಾಗಲೀ ಅಥವಾ ತಾವು ಕಾಂಗ್ರೆಸ್ ಸೇರುತ್ತಿರುವ ಬಗ್ಗಾಗಲೀ ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ. ವಿವೇಕ ಹೆಬ್ಬಾರ್ ಕಾಂಗ್ರೆಸ್ ಸೇರುವ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು ” ಅದು ಅವರ ವಿವೇಚನೆಗೆ ಬಿಟ್ಟಿದ್ದು” ಎಂದು ಹಾರಿಕೆಯ ಉತ್ತರ ನೀಡಿದರು.

    ಇದನ್ನೂ ಓದಿ: ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts