More

    ಶಿಷ್ಟರ ರಕ್ಷಣೆ ನರಸಿಂಹ ಅವತಾರದ ತತ್ವ

    ಕಂಪ್ಲಿ: ಇಲ್ಲಿನ ಕೋಟೆಯ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಮಂಗಳವಾರ ನರಸಿಂಹ ಜಯಂತ್ಯುತ್ಸವ ಆಚರಿಸಲಾಯಿತು.

    ನರಸಿಂಹ ದೇವರ ಜಯಂತಿ ನಿಮಿತ್ತ ಗಂಗಾವತಿಯ ಉಪನ್ಯಾಸಕ ವಾಗೀಶಾಚಾರ್ ಉಪನ್ಯಾಸ ನೀಡಿ, ಅನನ್ಯ ಭಕ್ತಿ, ವಿಶ್ವಾಸ ಮತ್ತು ನಂಬಿಕೆಯಿಂದ ಭಗವಂತನನ್ನು ಆರಾಧಿಸಿದಲ್ಲಿ ಸಂಕಷ್ಟ ಸಮಯದಲ್ಲಿ ಕೈಹಿಡಿಯುತ್ತಾನೆ ಎನ್ನಲು ಮಹಾವಿಷ್ಣು ನರಸಿಂಹ ಅವತಾರವೇ ಸಾಕ್ಷಿ. ಬಲ, ಅಧಿಕಾರ, ಅಹಂಕಾರದಿಂದ ಮನುಷ್ಯತ್ವ ಮರೆತವನಿಗೆ ಭಗವಂತನೇ ಸ್ವಯಂ ಅವತರಿಸಿ ಸೂಕ್ತ ಶಿಕ್ಷೆ ನೀಡಿ ಸರಿದಾರಿಗೆ ತರುವ ಮೂಲಕ ಭೂಮಿಯಲ್ಲಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವುದು ನರಸಿಂಹ ಅವತಾರದ ತತ್ವವಾಗಿದೆ.

    ಸರ್ವರೂ ಭಗವಂತನನ್ನು ಏಕನಿಷ್ಠೆಯಿಂದ ನಂಬಿ ಆರಾಧಿಸುವಂತೆ ಹೇಳಿದರು. ಪಟ್ಟಾಭಿರಾಮಚಂದ್ರ, ಹನುಮಂತ ಮತ್ತು ನರಸಿಂಹ ದೇವರಿಗೆ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಭಜನಾ ಮಂಡಳಿಯಿಂದ ನರಸಿಂಹ ದೇವರ ಸುಳಾದಿಗಳ ಪಾರಾಯಣ, ಪಲ್ಲಕ್ಕಿ ಉತ್ಸವ, ನರಸಿಂಹ ಪ್ರತಿಮೆಯ ಪ್ರದಕ್ಷಿಣೆ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಇತರ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts