More

    ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ: ಫಕೀರದಿಂಗಾಲೇಶ್ವರ ಸ್ವಾಮೀಜಿ

    ಶಿರಹಟ್ಟಿ:
    ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರ ಕೌಟುಂಬಿಕ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುವ ಜತೆಗೆ ಧಾರ್ಮಿಕ, ಶಿಕ್ಷಣ, ಆರೋಗ್ಯ ಭಾಗ್ಯ ಕಲ್ಪಿಸುವಂಥ ಬಹುಮುಖಿ ಸಮಾಜ ಸೇವಾ ಕಾರ್ಯಗಳು ಸ್ಮರಣೀಯವಾಗಿದ್ದು, ಇವುಗಳ ಸಂಕಲ್ಪಕ್ಕೆ ಬದ್ದರಾಗಿರುವ ವೀರೇಂದ್ರ ಹೆಗ್ಗಡೆ ಅವರ ಬದ್ಧತೆ ಪ್ರಶಂಸಾರ್ಹ ಎಂದುಸ್ಥಳೀಯ ಮಠದ ಉತ್ತರಾಧಿಕಾರಿ ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
    ಪಟ್ಟಣದ ಫಕೀರೇಶ್ವರ ನಗರದಲ್ಲಿ ಆರಂಭಿಸಿದ ಧಗ್ರಾ. ಯೋಜನೆಯ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
    ಮನೆಯ ನಾಲ್ಕು ಗೋಡೆಗಳ ಮಧ್ಯ ಕಷ್ಟ ಹೇಳಿ ಕೊಳ್ಳುವ ಕಾಲವೊಂದಿತ್ತು. ಆದರೆ ಪ್ರಸ್ತುತ ಸ್ವಾವಲಂಬನೆಯ ಹಾದಿಯಲ್ಲಿ ಬದುಕುತ್ತ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹಿಳೆ ಪುರುಷನಷ್ಟೇ ಸರಿಸಮಾನ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ. ಅಟೋ ಚಾಲಕಿಯಿಂದ ಹಿಡಿದು ವಿಮಾನ ಪೈಲಟ್‌ಳಾಗಿ ಸೇನೆಯ ಉನ್ನತ ಹುದ್ದೆಗಳಲ್ಲಿ ಮಹಿಳೆ ಸಾಧನೆ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು,.
    ಅAದು ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು ಎಂಬ ಧ್ಯೇಯವಾಕ್ಯದೊಂದಿಗೆ ಪಾದಾರ್ಪಣೆ ಮಾಡಿದ ಧಗ್ರಾ ಯೋಜನೆ ಇಂದು ಸಮಾಜ ಪೂರಕ ಸೇವಾ ಕಾರ್ಯ ಗಳ ಮೂಲಕ ವಿಶೇಷ ಛಾಪು ಮೂಡಿಸಿ ಆಲದ ಮರವಾಗಿ ಬೆಳೆದು ನಿಂತಿರುವುದಕ್ಕೆ ಸೇವಾ ಸಿಬ್ಬಂದಿ, ಸ್ತಿçÃಶಕ್ತಿ ಸಂಘಟನೆಗಳ ಬಲ ಎಂದರು.
    ಧಗ್ರಾ.ಯೋಜನೆ ಪ್ರಾದೇಶಿಕ ನಿರ್ದೇಶಕ ಗಣೇಶ ಬಿ. ಮಾತನಾಡಿ, ವಿರೇಂದ್ರ ಹೆಗ್ಗಡೆ ಅವರ ಸಂಕಲ್ಪಕ್ಕೆ ಬದ್ದರಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಕೆಲಸ ಕಾರ್ಯ ಹಾಗೂ ಆರ್ಥಿಕ ಸಬಲತೆಯಲ್ಲಿ ಉತ್ತರ ಪ್ರಾಂತದ ಗದಗ ಜಿಲ್ಲೆಯಲ್ಲಿ ಶಿರಹಟ್ಟಿ ಧಗ್ರಾ. ಯೋಜನೆ ಕಚೇರಿ ಮೊದಲ ಸ್ಥಾನದಲ್ಲಿದ್ದು, ಅವರಿಂದ ನಿರಂತರ ಸೇವಾ, ಅಭಿವೃದ್ದಿಕಾರ್ಯಗಳು ಸದಾ ಮುನ್ನÀಡೆಯುತ್ತಿರಲಿ ಎಂದು ಆಶಿಸಿದರು.
    ಧಗ್ರಾ. ಸಂಸ್ಥೆಯ ಯೋಜನಾಧಿಕಾರಿ ಶಿವಣ್ಣ ಎಸ್, ವೈ.ಎಸ್. ಪಾಟೀಲ, ಎಂ.ಡಿ.ಬಟ್ಟೂರ
    ಎಸ್.ಬಿ.ಮಹಾಜನಶೆಟ್ಟರ, ಎಂ.ಸಿ.ಹಿರೇಮಠ, ಎಚ್.ಡಿ. ಮಾಗಡಿ, ಪಕ್ಕೀರೇಶ ರಟ್ಟಿಹಳ್ಳಿ, ಮಹಾಂತೇಶ ದಶಮನಿ, ಧಗ್ರಾ.ಯೋಜನೆ ಮೇಲ್ವಿಚಾರಕ ಗಜೇಂದ್ರ ಜೈನ್. ಚಂದ್ರಕಲಾ ಎಸ್. ಹಾಗೂ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟಗಳ ಪದಾಧಿಕಾರಿಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts