More

    ಶಿರಾ ಬೈ ಎಲೆಕ್ಷನ್​ಗೆ ಕಾಂಗ್ರೆಸ್​ನಿಂದ ಉಸ್ತುವಾರಿ ನೇಮಕ

    ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಆರಂಭಿಕ ತೊಡಕಾಗಿದ್ದ ಕೆ.ಎನ್​.ರಾಜಣ್ಣ ಬಂಡಾಯ ಸದ್ಯಕ್ಕೆ ಶಮನವಾಗಿದೆ. ಈ ಚುನಾವಣೆ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ತುಮಕೂರು ಜಿಲ್ಲೆಯ ಇಬ್ಬರು ನಾಯಕರ ಹೆಗಲಿಗೆ ಹಾಕಿದ್ದಾರೆ. ಅಲ್ಲದೆ ಇಂದಿನಿಂದಲೇ(ಬುಧವಾರ) ಚುನಾವಣಾ ಚಟುವಟಿಕೆ ಶುರು ಮಾಡುವ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.

    ತುಮಕೂರು ಜಿಲ್ಲೆಯ ಕಾಂಗ್ರೆಸ್​ ಮುಖಂಡರಲ್ಲಿದ್ದ ಭಿನ್ನಾಭಿಪ್ರಾಯ ಶಮನ ಮಾಡುವ ನಿಟ್ಟಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಶಿರಾ ಕ್ಷೇತ್ರದ ಉಪಚುನಾವಣೆಯನ್ನು ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಎದುರಿಸಲು ತೀರ್ಮಾನಿಸಿದ್ದು, ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ಕೋಚೇರ್ಮನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿರಿ ಶಿರಾ ಬೈ ಎಲೆಕ್ಷನ್​; ಕಾಂಗ್ರೆಸ್​ ಸಭೆಯಲ್ಲಿ ಅಸಮಾಧಾನದ ಹೊಗೆ

    ಟಿ.ಬಿ ಜಯಚಂದ್ರ ಕಾಂಗ್ರೆಸ್​ ಅಭ್ಯರ್ಥಿ ಆಗಬೇಕು ಅಂತ ರಾಜಣ್ಣ ಸೂಚಿಸಿದ್ದಾರೆ. ನಾವು ಹೈಕಮಾಂಡ್​ಗೆ ಜಯಚಂದ್ರ ಹೆಸರು ಶಿಫಾರಸು ಮಾಡುತ್ತೇವೆ. ಇಂದಿನಿಂದಲೇ ಶಿರಾ ಬೈ ಎಲೆಕ್ಷನ್​ಗೆ ಕಾಂಗ್ರೆಸ್​ನಿಂದ ಉಸ್ತುವಾರಿ ನೇಮಕನಮ್ಮ ಚುನಾವಣಾ ಚಟುವಟಿಕೆಗಳು ಶುರುವಾಗಲಿವೆ. ನಾನು ಮತ್ತು ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಕ್ಷೇತ್ರದಲ್ಲಿ ಪ್ರಚಾರ ಮಾಡ್ತೀವಿ ಎಂದು ಡಿಕೆಶಿ ತಿಳಿಸಿದರು.

    ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿಯಲು ಕೆ.ಎನ್​. ರಾಜಣ್ಣ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೆ ಕಳೆದ ಚುನಾವಣೆಯಲ್ಲಿ ತನ್ನ ಸೋಲಿಗೆ ನಮ್ಮದೇ ಪಕ್ಷದ ನಾಯಕರ ಕೈವಾಡವಿತ್ತು ಎಂದೂ ಅಸಮಾಧಾನ ಹೊರಹಾಕಿದ್ದರು. ರಾಜಣ್ಣ ಕೈ ಬಂಡಾಯ ಅಭ್ಯರ್ಥಿ ಆಗಲಿದ್ದಾರೆ ಎಂದೇ ಸುದ್ದಿಯಾಗಿತ್ತು. ಇದರಿಂದ ಪಕ್ಷಕ್ಕಾಗುವ ಡ್ಯಾಮೇಜ್​ ಕಂಟ್ರೋಲ್​ ಮಾಡಲು ಮುಂದಾದ ಡಿಕೆಶಿ, ಬುಧವಾರ ಬೆಳಗ್ಗೆ ತುಮಕೂರು ಜಿಲ್ಲೆಯ ಡಾ.ಜಿ. ಪರಮೇಶ್ವರ್, ಟಿ.ಬಿ.ಜಯಚಂದ್ರ, ಎಸ್​.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಷಡಕ್ಷರಿ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ಅವರನ್ನೊಳಗೊಂಡ ಸಭೆ ನಡೆಸಿ, ರಾಜಣ್ಣ ಮತ್ತು ಪರಮೇಶ್ವರ್​ ಹೆಗಲಿಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸುವಲ್ಲಿ ಸಫಲರಾಗಿದ್ದಾರೆ.

    ಶಿರಾ ಉಪಚುನಾವಣೆಯನ್ನೇಕೆ ಇಷ್ಟೊಂದು ಸೀರಿಯಸ್ಸಾಗಿ ತಗೊಂಡಿದ್ದಾರೆ ಎಚ್​ಡಿಕೆ?

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    PHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts