More

    ಶ್ರೀಲಂಕಾ ಪ್ರವಾಸಕ್ಕೆ ಧವನ್​ ಅವರೇ ನಾಯಕನಾಗಲಿ ಎಂದು ವೇಗಿ ​ದೀಪಕ್ ಚಹರ್​ ಹೇಳಿದ್ಯಾಕೆ.?

    ನವದೆಹಲಿ: ಭಾರತದ ಬಹುತೇಕ ಕ್ರಿಕೆಟಿಗರು ಲಂಡನ್​ಗೆ ತೆರಳುವ ಸಲುವಾಗಿ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮ ಒಳಗೊಂಡ ಬಳಗ ಇಂಗ್ಲೆಂಡ್​ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಇತ್ತ, ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡಕ್ಕೆ ನಾಯಕ ಯಾರಾಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಶಿಖರ್​ ಧವನ್​, ಹಾರ್ದಿಕ್​ ಪಾಂಡ್ಯ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಭಾರತದ ವೇಗಿ ದೀಪಕ್​ ಚಹರ್​ ಮಾತ್ರ ಹಿರಿಯ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಅವರೇ ಲಂಕಾ ಪ್ರವಾಸಕ್ಕೆ ತಂಡ ಮುನ್ನಡೆಸಲಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿ ಆದರ್ಶವಾಗಿರಲಿ ಎಂದು ಕ್ರಿಕೆಟ್​ ಆಟಗಾರ್ತಿ ಪ್ರಿಯಾ ಪೂನಿಯಾಗೆ ತಂದೆ ಹೇಳಿದ್ಯಾಕೆ?,

    ನಾಯಕತ್ವ ಸ್ಥಾನಕ್ಕೆ ಶಿಖರ್​ ಭಾಯ್​ ಸೂಕ್ತ ಆಯ್ಕೆ. ಹಲವು ವರ್ಷಗಳಿಂದ ಕ್ರಿಕೆಟ್​ ಆಡಿದ ಅನುಭವ ಹೊಂದಿದ್ದಾರೆ. ತಂಡದ ಹಿರಿಯ ಆಟಗಾರನಾಗಿರುವುದರಿಂದ ಅವರೇ ನಾಯಕನಾಗುವುದು ಸೂಕ್ತ ಎಂದು ಹೇಳಿದ್ದಾರೆ. ಯುವ ಕ್ರಿಕೆಟಿಗರು ಅವರಿಂದ ಕಲಿಯುವುದು ಸಾಕಷ್ಟಿದೆ. ನಾನು ವೈಯಕ್ತಿಕವಾಗಿ ಹೇಳುವುದಾದರೆ ಧವನ್​ ಅವರೇ ನಾಯಕತ್ವಕ್ಕೆ ಸೂಕ್ತವಾದ ವ್ಯಕ್ತಿ ಎಂದು ದೀಪಕ್​ ಚಹರ್​ ಹೇಳಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ಟಿ20 ವಿಶ್ವಕಪ್​ ನಡೆಸುವುದು ಕಷ್ಟಕರ ಎಂದ ಆಸೀಸ್​ ಕ್ರಿಕೆಟಿಗ, 

    14ನೇ ಐಪಿಎಲ್​ನಲ್ಲಿ ಉತ್ತಮ ಲಯದಲ್ಲಿದ್ದೆ, ಶ್ರೀಲಂಕಾ ಪ್ರವಾಸದಲ್ಲಿ ಆಡಲು ಸನ್ನದ್ಧವಾಗಿದ್ದೇನೆ ಎಂದು ಚಹರ್​ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಏಕದಿನ ಹಾಗೂ ಟಿ20 ಎರಡೂ ಸರಣಿಗಳನ್ನು ಜಯಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.

    ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿಗೆ ನೆರವು ನೀಡಿದ ಕ್ರೀಡಾ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts