More

    ಶೀಗಿ ಹುಣ್ಣಿಮೆ. ಆರತಿ ಮಾರಾಟ ನೀರಸ

    ಅಳವಂಡಿ: ಸಂಪ್ರದಾಯಕವಾಗಿ ಆಚರಿಸುವ ಹಬ್ಬಗಳಲ್ಲಿ ಶೀಗೆ ಹುಣ್ಣಿಮೆ ಒಂದು. ಮಹಿಳೆಯರು ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿದ ಶಿಗವ್ವನಿಗೆ ಆರತಿ ಬೆಳಗುವರು. ರೈತರು ಮಸಾರಿ ಜಮೀನಿನಲ್ಲಿ ಬೆಳೆದ ಬೆಳೆಗೆ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಸಂಭ್ರಮಿಸುವರು.

    ಇದನ್ನೂ ಓದಿ: ಸಾಂಪ್ರದಾಯಿಕ ಶೀಗೆ ಹುಣ್ಣಿಮೆ ಆಚರಣೆ

    ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ತೇವಾಂಶ ಕೊರತೆಯಿಂದ ನಾಶವಾಗಿ ರೈತ ನಷ್ಟ ಅನುಭವಿಸಿದ್ದಾನೆ. ಆದರೂ, ಸಂಪ್ರದಾಯದಂತೆ ಮಸಾರಿ ಜಮೀನಿನಲ್ಲಿ ಪೂಜೆ ಸಲ್ಲಿಸಿ ಚರಗ ಚಲ್ಲಲು ತಯಾರಿ ನಡೆಸಿದ್ದಾನೆ.

    ಹುಣ್ಣಿಮೆಗೆ ಮಹಿಳೆಯರಿಗೆ ಮುಖ್ಯವಾಗಿ ಸಕ್ಕರೆ ಆರತಿ ಗೊಂಬೆ ಬೇಕು. ಆರತಿ ತಟ್ಟೆಯಲ್ಲಿ ಇಟ್ಟುಕೊಂಡು ಗುಂಪು ಗುಂಪಾಗಿ ತೆರಳಿ ಹಾಡು ಹೇಳುತ್ತಾ ಶೀಗವ್ವನಿಗೆ ಪೂಜೆ ಸಲ್ಲಿಸಲಾಗುವುದು.

    ಗ್ರಾಮದಲ್ಲಿ ಆರತಿ ಮಾರಾಟ ನೀರಸವಾಗಿ ನಡೆದಿದ್ದು. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಆರತಿ ಬೆಲೆಯ ಸುಮಾರು 20 ರೂಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ಸುಮಾರು 80 ರೂಗಳ ಆಸು ಪಾಸಿನಲ್ಲಿ ಮಾರಾಟ ಆಗಿದ್ದವು. ಪ್ರಸಕ್ತ ವರ್ಷ 100 ರೂಗಳ ಆಸುಪಾಸಿನಲ್ಲಿ ಮಾರಾಟ ಆಗುತ್ತಿವೆ. ಆರತಿ ಜತೆಗೆ ಹೂಗಳ ಮಾರಾಟ ಸಹ ನಡೆದಿದೆ.

    ಕಳೆದ 20 ವರ್ಷದಿಂದ ಆರತಿ (ಸಕ್ಕರೆಗೊಂಬೆ) ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಈ ವರ್ಷ ಮಳೆ ಕಡಿಮೆಯಾಗಿದ್ದರಿಂದ ರೈತರಲ್ಲಿ ಸಂಭ್ರಮ ಕಡಿಮೆ ಇದೆ. ಮಾರಾಟ ಕೂಡ ಕಡಿಮೆಯಾಗಿದೆ. ಕಳೆದ ವರ್ಷ 80 ರೂ ವರೆಗೆ ಮಾರಾಟ ಮಾಡಿದ್ದೇವೆ. ಈ ವರ್ಷ 100 ರೂ ಗಳವರೆಗೆ ಮಾರಾಟ ಮಾಡುತ್ತಿದ್ದೇವೆ.
    ರೇಖಾ. ಅಳವಂಡಿ ಆರತಿ ತಯಾರಕರು.

    ಬರದಿಂದ ಪ್ರಸಕ್ತ ವರ್ಷ ಹಬ್ಬದ ಸಂಭ್ರಮ ಕಡಿಮೆ ಇದೆ. ಸಂಪ್ರದಾಯದಂತೆ ಆರತಿ (ಸಕ್ಕರೆಗೊಂಬೆ) ಖರೀದಿ ಮಾಡಿ ಶೀಗವ್ವನಿಗೆ ಬೆಳಗುತ್ತೇವೆ. ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತವೆ.
    ತೇಜಸ್ವಿನಿ ಮಾಲಿಪಾಟೀಲ, ಗೃಹಿಣಿ ಅಳವಂಡಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts