More

    ಸಾಂಪ್ರದಾಯಿಕ ಶೀಗೆ ಹುಣ್ಣಿಮೆ ಆಚರಣೆ

    ಲಕ್ಷ್ಮೇಶ್ವರ: ಅತಿವೃಷ್ಟಿ, ಕರೊನಾ ಆತಂಕದ ನಡುವೆ ರೈತ ಸಮುದಾಯ ಶುಕ್ರವಾರ ಸಾಂಪ್ರದಾಯಿಕ ಶೀಗೆ ಹುಣ್ಣಿಮೆಯನ್ನು ಸರಳ ರೀತಿಯಲ್ಲಿ ಆಚರಿಸಿದರು.

    ಮುಂಗಾರಿನ ಬೆಳೆಗಳ ಕೊಯ್ಲಿನ ಸಂದರ್ಭದಲ್ಲಿ ಭೂತಾಯಿಗೆ ಉಡಿ ತುಂಬಿ ಚರಗ ಚಲ್ಲಿ ಬೀಗರು, ಆತ್ಮೀಯರೊಡಗೂಡಿ ಸಹಪಂಕ್ತಿ ಭೋಜನದೊಂದಿಗೆ ಶೀಗಿ ಹುಣ್ಣಿಮೆ ಆಚರಿಸುವುದು ಸಂಪ್ರದಾಯ. ಹಬ್ಬದ ದಿನ ಹೊಲಕ್ಕೆ ತೆರಳಿ ಬನ್ನಿಗಿಡದ ಕೆಳಗಿರುವ ಪಾಂಡವರ ಸ್ವರೂಪದ ಕಲ್ಲುಗಳನ್ನು ಪೂಜಿಸುತ್ತಾರೆ. ನಂತರ ಭೂಮಿ ತಾಯಿಗೆ ಉಡಿ ತುಂಬಿ ತಯಾರಿಸಿದ ಪುಂಡಿಪಲ್ಲೆ, ಉಂಡಗಡುಬು ಇತರೆ ಪ್ರಸಾದ ಚರಗಾ ಚಲ್ಲುವ ಸಂಪ್ರದಾಯವೇ ಶೀಗಿ ಹುಣ್ಣಿಮೆ.

    ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿರುವ ಎಳ್ಳು, ಶೇಂಗಾ ಹೊಳಿಗೆ, ಉಂಡ ಗಡುಬು, ಕರ್ಚಿಕಾಯಿ, ಸಜ್ಜೆರೊಟ್ಟಿ, ಎಳ್ಳುಹಚ್ಚಿದ ರೊಟ್ಟಿ, ಪುಂಡಿಪಲ್ಯೆ, ಕರಿಹಿಂಡಿ, ಕಿಚಡಿ, ಅಕ್ಕಿ ುಗ್ಗಿ, ವಿವಿಧ ತರಹದ ಪಲ್ಯಾ, ಇತ್ಯಾದಿ ಭಕ್ಷ್ಯಗಳನ್ನು ಪೂಜೆ ಸಲ್ಲಿಸಿದ ಬಳಿಕ ಎಲ್ಲರೂ ಸಾಮೂಹಿಕವಾಗಿ ಕುಳಿತು ಊಟ ಮಾಡುತ್ತಾರೆ. ತಾಲೂಕಿನಲ್ಲಿ ಕೆಲ ರೈತರು ಶುಕ್ರವಾರ ಸೀಗೆ ಹುಣ್ಣಿಮೆ ಆಚರಿಸಿದರೆ, ಇನ್ನು ಹಲವರು ಶನಿವಾರವೂ ಹಬ್ಬ ಆಚರಿಸುವರು.

    **

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts