More

    ಸ್ಲಿಮ್ ಆದ ಶೆರಿನ್; ಹೇಗಿದ್ದವರು ಹೇಗಾಗಿದ್ದಾರೆ ನೋಡಿ…

    ಬೆಂಗಳೂರು: ಸಿನಿಮಾ ಮಂದಿ ಅಂದರೆ ಡಯಟ್, ಫಿಟ್ನೆಸ್, ಯೋಗ ಸಾಮಾನ್ಯ. ನಿತ್ಯ ಒಂದಲ್ಲ ಒಂದು ವಿಡಿಯೋ, ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಕನ್ನಡತಿ, ಬಹುಭಾಷಾ ನಟಿ ಶೆರಿನ್ ಶೃಂಗಾರ್ ಇತ್ತೀಚೆಗಷ್ಟೇ ಇನ್ಸ್ಟಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ವರ್ಷದ ಹಿಂದೆ ಹೇಗಿದ್ದೆ, ಈಗ ಹೇಗಾಗಿದ್ದೇನೆ ಎಂದು ತೂಕ ಕಡಿಮೆ ಮಾಡಿಕೊಂಡ ಫೋಟೋ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಬರೋಬ್ಬರಿ 10 ಕೆಜಿ ಕಡಿಮೆ ಮಾಡಿಕೊಂಡು, ಸ್ಲಿಂ ಆಗಿದ್ದಾರೆ.

    ಇದನ್ನೂ ಓದಿ: ಕಿಚ್ಚ ಸುದೀಪ್​ ಶೇರ್​ ಮಾಡಿದ್ದಾರೊಂದು ಅಪರೂಪದ ಫೋಟೋ!

    ದರ್ಶನ್ ಜತೆಗೆ ‘ಧ್ರುವ’, ‘ಭೂಪತಿ’ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ ಮಂದಿಗೂ ಚಿರಪರಿಚಿತರಾದವರು ಶೆರಿನ್ ಶ್ರೀಂಗಾರ್. ಬಳಿಕ ಪಕ್ಕದ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತ ಅಲ್ಲಿನವರಿಗೂ ಹತ್ತಿರವಾದರು. ಆದರೆ, ಹೆಚ್ಚು ಕಾಲ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಶೆರಿನ್, 2015ರಲ್ಲಿ ತೆರೆಕಂಡ ತಮಿಳಿನ ‘ನಾನ್ಬೆಂದ’ ಚಿತ್ರವೇ ಕೊನೇ. ಅಲ್ಲಿಂದ ಈಚೆಗೆ ತೆಲುಗು, ತಮಿಳು ರಿಯಾಲಿಟಿ ಶೋಗಳಲ್ಲಿಯೇ ಸಕ್ರಿಯರಾಗಿದ್ದಾರೆ. ‘ಬಿಗ್ ಬಾಸ್’ ಅಲ್ಲದೆ, ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಟ್ರೋಲ್​ಗೆ ಹೆದರಿ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ ಕರಣ್​!

    ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಶೆರಿನ್, ಫಿಟ್ನೆಸ್ ಹಿಂದಿನ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ. ‘ಗುರಿ ಮುಟ್ಟುವುದಕ್ಕಾಗಿ ಒತ್ತಡಕ್ಕೊಳಗಾಗಬೇಡಿ. ನಮ್ಮ ಜೀವನಶೈಲಿ ಬದಲಾಯಿಸಿಕೊಂಡರೆ ಬದಲಾವಣೆ ತಾನಾಗಿಯೇ ಕಾಣುತ್ತದೆ. ಆ ಪಯಣವನ್ನು ಸ್ವತಃ ನೀವೇ ಎಂಜಾಯ್ ಮಾಡುತ್ತೀರಿ’ ಎಂದಿದ್ದಾರೆ ಶೆರಿನ್.

    ರಜನಿ- ಕಮಲ್ ಸಿನಿಮಾ ನಿಂತಿಲ್ಲ!; ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts