More

    ರೂ. 1ರಿಂದ 28ಕ್ಕೆ ಏರಿತು ಷೇರಿನ ಬೆಲೆ: ಮುಖೇಶ್​ ಅಂಬಾನಿ ಸ್ವಾಧೀನದಿಂದ ಹೂಡಿಕೆದಾರರಿಗೆ ಖುಲಾಯಿಸಿತು ಅದೃಷ್ಟ

    ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ, ಮುಖೇಶ್ ಅಂಬಾನಿ ಅವರ ಜವಳಿ ಕಂಪನಿ ಅಲೋಕ್ ಇಂಡಸ್ಟ್ರೀಸ್ ಲಿಮಿಟೆಡ್ ಹೂಡಿಕೆದಾರರಿಗೆ ಬಲವಾದ ಆದಾಯವನ್ನು ನೀಡಿದೆ. ಅಕ್ಟೋಬರ್ 2019 ರಲ್ಲಿ, ಈ ಷೇರಿನ ಬೆಲೆ ರೂ. 1.4 ಇತ್ತು. ಈಗ ಇದು ಅಂದಾಜು ರೂ. 28 ಕ್ಕೆ ಏರಿದೆ. ಈ ಅವಧಿಯಲ್ಲಿ ಹೂಡಿಕೆದಾರರು 1900 ಪ್ರತಿಶತದಷ್ಟು ಲಾಭವನ್ನು ಪಡೆದಿದ್ದಾರೆ. ಹೂಡಿಕೆದಾರರು ಮಾರ್ಚ್ 2020 ರಲ್ಲಿ ಈ ಷೇರುಗಳಲ್ಲಿ ರೂ. 1,00,000 ಹೂಡಿಕೆ ಮಾಡಿದ್ದರೆ, ಈಗ ಅವರ ಷೇರಿನ ಮೊತ್ತ ರೂ. 20 ಲಕ್ಷ ಆಗುತ್ತಿತ್ತು.

    ಒಂದು ವರ್ಷದಲ್ಲಿ 114 ಪ್ರತಿಶತ ಆದಾಯ:
    ಕಳೆದ 1 ವರ್ಷದಲ್ಲಿ ಈ ಷೇರು ಬೆಲೆ ಶೇ. 114ರಷ್ಟು ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ ಇದುವರೆಗೆ ಶೇ. 31 ರಷ್ಟು ಬೆಳವಣಿಗೆ ಕಂಡುಬಂದಿದೆ. ಮಾರ್ಚ್‌ನಲ್ಲಿ ಇಲ್ಲಿಯವರೆಗೆ 3.5 ಶೇಕಡಾ ಸ್ಟಾಕ್ ಕುಸಿದಿದೆ, ಫೆಬ್ರವರಿಯಲ್ಲಿ ಶೇಕಡಾ 11 ಕುಸಿತ ದಾಖಲಾಗಿದೆ. ಆದರೆ, ಈ ವರ್ಷದ ಜನವರಿಯಲ್ಲಿ ಶೇ. 51.76ರಷ್ಟು ಏರಿಕೆಯಾಗಿದೆ.
    ಜನವರಿ 9, 2024 ರಂದು 52 ವಾರಗಳ ಗರಿಷ್ಠ ಬೆಲೆಯಾದ ರೂ. 39.05 ರಿಂದ ಈ ಷೇರುಗಳ ಬೆಲೆ ಈಗ ಶೇ. 28 ರಷ್ಟು ಕಡಿಮೆಯಾಗಿದೆ. ಇದೇ ಸಮಯದಲ್ಲಿ, ಇದು 52 ವಾರಗಳ ಕನಿಷ್ಠ ರೂ. 10.90 ರಿಂದ ಶೇ. 156 ರಷ್ಟು ಹೆಚ್ಚಾಗಿದೆ.

    ಅಲೋಕ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯವಾಗಿ ಜವಳಿ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುತ್ತದೆ. ಇದು ಬಟ್ಟೆಗಳು, ಹತ್ತಿ ಮತ್ತು ಮಿಶ್ರಿತ ನೂಲುಗಳು, ನೇಯ್ದ ಮತ್ತು ಹೆಣೆದ ಬಟ್ಟೆಗಳು, ಮನೆಯ ಜವಳಿ, ಪಾಲಿಯೆಸ್ಟರ್ ನೂಲುಗಳು ಮತ್ತು ಕಸೂತಿ ಉತ್ಪನ್ನಗಳು, ಹಾಗೆಯೇ ಶಾಪಿಂಗ್ ಬ್ಯಾಗ್‌ಗಳು ಮತ್ತು ಕರವಸ್ತ್ರಗಳ ವ್ಯಾಪಾರದಲ್ಲಿ ವ್ಯವಹರಿಸುತ್ತದೆ. ಕಂಪನಿಯು 1986 ರಲ್ಲಿ ಸ್ಥಾಪನೆಯಾಗಿದ್ದು, ಪ್ರಧಾನ ಕಚೇರಿ ಮುಂಬೈನಲ್ಲಿದೆ.

    ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳು
    ಡಿಸೆಂಬರ್ ತ್ರೈಮಾಸಿಕದಲ್ಲಿ (Q3FY24), ಕಂಪನಿಯು ರೂ. 215.5 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರೂ. 241.43 ಕೋಟಿ ನಷ್ಟವಾಗಿತ್ತು. ಏತನ್ಮಧ್ಯೆ, ಡಿಸೆಂಬರ್ ತ್ರೈಮಾಸಿಕದಲ್ಲಿ ಇದರ ಆದಾಯವು ಶೇ 26 ರಷ್ಟು ಕುಸಿದು ರೂ. 1,217 ಕೋಟಿಗೆ ತಲುಪಿದೆ.

    ಕಂಪನಿಯ ನಿವ್ವಳ ನಗದು ಹರಿವು ಮತ್ತು ಕಾರ್ಯಾಚರಣೆಯ ಚಟುವಟಿಕೆಗಳಿಂದ ನಗದು ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ನಿವ್ವಳ ನಗದು ಹರಿವು ಸುಧಾರಿಸಿದೆ ಎಂದು ಬ್ರೋಕರೇಜ್‌ ಸಂಸ್ಥೆಯಾದ ಐಸಿಐಸಿಐ ಡೈರೆಕ್ಟ್ ಹೇಳಿದೆ. ಇದರ ಅಪಾಯಗಳು ಆದಾಯ ಮತ್ತು ಲಾಭಗಳಲ್ಲಿನ ಕುಸಿತ. ಕಳೆದ 4 ತ್ರೈಮಾಸಿಕಗಳಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಆದಾಯದಲ್ಲಿ ಕುಸಿತ ಕಂಡುಬಂದಿದೆ. ಇದು ದುರ್ಬಲ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಕಂಪನಿಗಳ ವರ್ಗದಲ್ಲಿದೆ.

    ಜೆಎಂ ಫೈನಾನ್ಷಿಯಲ್ ಅಸೆಟ್ ರಿಕನ್​ಸ್ಟ್ರಕ್ಷನ್​ ಕಂಪನಿಯೊಂದಿಗೆ ಮುಖೇಶ್ ಅಂಬಾನಿಯವರ ಆರ್‌ಐಎಲ್ ಸ್ವಾಧೀನಪಡಿಸಿಕೊಂಡಿತ್ತು. ರಿಲಯನ್ಸ್ ಇಂಡಸ್ಟ್ರೀಸ್ 1,98,65,33,333 ಷೇರುಗಳನ್ನು ಅಥವಾ ಅಲೋಕ್ ಇಂಡಸ್ಟ್ರೀಸ್‌ನಲ್ಲಿ ಶೇಕಡಾ 40.01 ರಷ್ಟು ಪಾಲನ್ನು ಹೊಂದಿದೆ. ಆದರೆ ಜೆಎಂ ಫೈನಾನ್ಷಿಯಲ್​ ಅಸೆಟ್​ ರಿಕನ್​ಸ್ಟ್ರಕ್ಷನ್​ ಕಂಪನಿಯು ಶೇ. 34.99 ಪಾಲನ್ನು ಹೊಂದಿದೆ.

    ಲಂಚ ಕುರಿತು ಅಮೆರಿಕದ ತನಿಖೆ: ಅದಾನಿ ಸಮೂಹದ 10 ಷೇರುಗಳ ಬೆಲೆ ಕುಸಿತ; ರೂ 25,828 ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ

    1300% ಲಾಭ ನೀಡಿದ ಫಾರ್ಮಾ ಸ್ಟಾಕ್​: ಮ್ಯೂಚುವಲ್​ ಫಂಡ್​ ಕಂಪನಿ ಷೇರು ಖರೀದಿಸುತ್ತಿದ್ದಂತೆಯೇ ಮತ್ತೆ ಡಿಮ್ಯಾಂಡು

    6 ದಿನಗಳಲ್ಲಿ 2,584 ರೂಪಾಯಿ ಕುಸಿತ ಕಂಡ ಟಾಟಾ ಷೇರು: 2024ರ ಈ ಟಾಪ್​ ಸ್ಟಾಕ್​ಗೆ ಈಗ ಖರೀದಿದಾರರೇ ಇಲ್ಲ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts