More

    6 ದಿನಗಳಲ್ಲಿ 2,584 ರೂಪಾಯಿ ಕುಸಿತ ಕಂಡ ಟಾಟಾ ಷೇರು: 2024ರ ಈ ಟಾಪ್​ ಸ್ಟಾಕ್​ಗೆ ಈಗ ಖರೀದಿದಾರರೇ ಇಲ್ಲ ಏಕೆ?

    ಮುಂಬೈ: ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೋರೇಷನ್​ ಲಿಮಿಟೆಡ್​ (Tata Investment Corporation Ltd.) 2024ರಲ್ಲಿ ಅತಿಹೆಚ್ಚು ಏರಿಕೆ ಕಂಡ ಸ್ಟಾಕ್​ಗಳಲ್ಲಿ ಒಂದಾಗಿದೆ. ಆದರೂ ಕಳೆದ ವಾರದಿಂದ, ಸ್ಟಾಕ್ ಹಿನ್ನಡೆ ಕಂಡಿದೆ. ಸೋಮವಾರ ಸತತ 6ನೇ ದಿನ ಈ ಷೇರು ಬೆಲೆ ಕುಸಿತ ಕಂಡಿದ್ದು, ಈ ಅವಧಿಯಲ್ಲಿ 26%ಕ್ಕಿಂತ ಹೆಚ್ಚು ಇಳಿಕೆಯಾಗಿದೆ. 2024ರ ಟಾಪ್ ವಿನ್ನಿಂಗ್ ಸ್ಟಾಕ್ ಎಂದೇ ಪರಿಗಣಿತವಾಗಿದ್ದ ಈ ಷೇರು ಈಗ ಯು-ಟರ್ನ್ ತೆಗೆದುಕೊಂಡಿದೆ.

    ಕೊನೆಯ ಬಾರಿಗೆ ಈ ಸ್ಟಾಕ್​ ಬೆಲೆ ಮಾರ್ಚ್ 7ರಂದು ಏರುಗತಿಯಲ್ಲಿತ್ತು. ಸಾರ್ವಕಾಲಿಕ ಗರಿಷ್ಠ ಬೆಲೆ ರೂ 9,756.85 ಅನ್ನು ತಲುಪಿತ್ತು.

    2024ರ ಆರಂಭದಲ್ಲಿ, ಟಾಟಾ ಇನ್ವೆಸ್ಟ್‌ಮೆಂಟ್‌ನ ಷೇರಿನ ಬೆಲೆ 4,258.70 ರೂ. ಇತ್ತು. ಜನವರಿ 2024 ರಲ್ಲಿ 32.33% ರಷ್ಟು ಏರಿಕೆ ಕಂಡಿತು. ನಂತರ ಫೆಬ್ರವರಿಯಲ್ಲಿ 26% ಏರಿಕೆಯಾಗಿದೆ. ಅಲ್ಲದೆ, ಮಾರ್ಚ್ 2024 ರ ಆರಂಭವು ಈ ಷೇರಿಗೆ ಅಸಾಧಾರಣವಾಗಿತ್ತು. ಈ ತಿಂಗಳ ಮೊದಲ ಆರು ವಹಿವಾಟು ಅವಧಿಗಳಲ್ಲಿ, ಈ ಷೇರು ಬೆಲೆ ಮಾರ್ಚ್ 7, 2024 ರಂದು 9,756.85 ರೂ.ಗಳನ್ನು ಮುಟ್ಟಿ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿತು. ಈ 6 ದಿನಗಳಲ್ಲಿ 28% ರಷ್ಟು ಏರಿಕೆ ಕಂಡಿತು.

    ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಕಳೆದ ವರ್ಷ ಟಾಟಾ ಸನ್ಸ್ ಲಿಮಿಟೆಡ್​ ಅನ್ನು ಮೇಲಿನ-ಪದರದ NBFC (ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ) ಎಂದು ವರ್ಗೀಕರಿಸಿತು. ಸೆಪ್ಟೆಂಬರ್-25 ರೊಳಗೆ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದನ್ನು ಇದು ಕಡ್ಡಾಯಗೊಳಿಸಿತು. ಹೀಗಾಗಿ, ಟಾಟಾ ಸನ್ಸ್​ ಷೇರು ಮಾರುಕಟ್ಟೆ ಪ್ರವೇಶಕ್ಕಾಗಿ ಐಪಿಒ ಪ್ರಕಟಿಸುವುದು ದೂರವಿಲ್ಲ ಎಂಬ ಸಂಗತಿ ಎಲ್ಲೆಡೆ ಸದ್ದು ಮಾಡತೊಡಗಿತು. ಇದು ಎಲ್ಲಾ ಟಾಟಾ ಗ್ರೂಪ್ ಷೇರುಗಳ ಬೆಲೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಯಿತು. ಇದರ ಲಾಭವು ಟಾಟಾ ಇನ್ವೆಸ್ಟ್‌ಮೆಂಟ್ ಷೇರುಗಳಿಗೂ ತಟ್ಟಿತು.

    ಜನವರಿ 1 ರಿಂದ ಮಾರ್ಚ್ 7, 2024 ರವರೆಗೆ, ಟಾಟಾ ಇನ್ವೆಸ್ಟ್‌ಮೆಂಟ್ ಷೇರುಗಳ ಬೆಲೆಯು 58 ಶತಕೋಟಿ ಡಾಲರ್​ನಷ್ಟು ಹೆಚ್ಚಾಯಿತು. ಈ ಅವಧಿಯಲ್ಲಿ, ಟಾಟಾ ಇನ್ವೆಸ್ಟ್‌ಮೆಂಟ್ ಷೇರು ಬೆಲೆ 129% ಕ್ಕಿಂತ ಹೆಚ್ಚು ಏರಿತು.

    ಮಾರ್ಚ್ 11 ರಿಂದ, ಟಾಟಾ ಇನ್ವೆಸ್ಟ್‌ಮೆಂಟ್ ಷೇರು ಬೆಲೆ ಇಳಿಮುಖವಾಯಿತು. ನಿರಂತರವಾಗಿ 5% ಇಳಿಕೆಯಾಗಿ ಲೋವರ್ ಸರ್ಕ್ಯೂಟ್‌ಗಳನ್ನು ಹೊಡೆಯಿತು. ಮಾರ್ಚ್ 11 ರಿಂದ 18 ರವರೆಗೆ, ಈ ಷೇರಿನ ಬೆಲೆಯು 2,584.6 ರೂಪಾಯಿ ಅಥವಾ 26.5% ನಷ್ಟು ಕಡಿಮೆಯಾಗಿದೆ.

    ಸೋಮವಾರ ಕೂಡ ಈ ಷೇರು 5% ಕುಸಿತವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು. ಈ ಷೇರಿನ ಬೆಲೆ ರೂ 7,172.25 ತಲುಪಿತು. ಈ ಷೇರುಗಳಲ್ಲಿ ಹಲವಾರು ಮಾರಾಟಗಾರರು ಇದ್ದರು. ಆದರೆ ಖರೀದಿದಾರರು ಇರಲಿಲ್ಲ. ಇದು ಮಾರ್ಚ್ 11 ರಿಂದಲೂ ಇದೇ ಪರಿಸ್ಥಿತಿ ಇದೆ. ಈ ಷೇರುಗಳಲ್ಲಿ ಈ ಮೊದಲು ಹೂಡಿಕೆದಾರರು ತಮ್ಮ ಲಾಭವನ್ನು ನಗದೀಕರಿಸುತ್ತಿದ್ದಾರೆ.

    ಈ ಷೇರಿನಲ್ಲಿ ಕುಸಿತದ ಪ್ರವೃತ್ತಿಯು ಎರಡು ಕಾರಣಗಳಿಂದಾಗಿರಬಹುದು. ಮೊದಲನೆಯದಾಗಿ, ಈ ಷೇರಿನ ಏಕಾಏಕಿ ಅಪಾರ ಸಾಪ್ತಾಹಿಕ ಏರುಗತಿಯ ನಂತರ, ಟಾಟಾ ಸನ್ಸ್ ಐಪಿಒ ಬರುವುದರ ಮೇಲಿನ ಅನುಮಾನಗಳು ಉಲ್ಬಣಗೊಂಡವು. ಷೇರು ಮಾರುಕಟ್ಟೆ ಪ್ರವೇಶ ತಪ್ಪಿಸಲು ಟಾಟಾ ಸನ್ಸ್​ ಸಂಸ್ಥೆಯು ಇತರ ಆಯ್ಕೆಗಳನ್ನು ನೋಡುತ್ತಿದೆ ಎಂದು ವರದಿಗಳು ಹೇಳಿವೆ. ಟಾಟಾ ಸನ್ಸ್ ತನ್ನ ಐಪಿಒ ಕುರಿತಂತೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎಂಬುದನ್ನು ಗಮನಾರ್ಹವಾಗಿದೆ.

    ಎರಡನೆಯದಾಗಿ, ಕಳೆದ ವಾರದಿಂದ ಒಟ್ಟಾರೆ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸ್ಟಾಕ್‌ಗಳಲ್ಲಿ ತೀವ್ರ ಮಾರಾಟಗಳು ಕಂಡುಬಂದಿವೆ, ಏಕೆಂದರೆ ಮಾರುಕಟ್ಟೆ ನಿಯಂತ್ರಕ ಸೆಬಿ ಈ ಸಣ್ಣ ಕಂಪನಿಗಳಲ್ಲಿ ಹೂಡಿಕೆಗಾಗಿ ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಅಲ್ಲದೆ, ಸಣ್ಣ ಕಂಪನಿಗಳ ಷೇರುಗಳ ಮೌಲ್ಯಮಾಪನ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಹೀಗಾಗಿ, ಮಿಡ್‌ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳು ಬೆಲೆಯಲ್ಲಿ ಕುಸಿತ ಕಂಡುಬರುತ್ತಿದೆ.

    5 ವರ್ಷಗಳಲ್ಲಿ 3955% ಲಾಭ ನೀಡಿದ ಷೇರು: ಕಾಮಗಾರಿ ಪೂರ್ಣಗೊಳಿಸಿದ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್​ ಸರ್ಕ್ಯೂಟ್ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts