More

    ಶರಣ ಸಾಹಿತ್ಯಕ್ಕೆ ಅಪಾರ ಕೊಡುಗೆ

    ಕಾನಹೊಸಹಳ್ಳಿ: ವಾರ್ದಿಕ ಷಟ್ಪದಿಯಲ್ಲಿ ‘ಶ್ರೀಶರಣಬಸವೇಶ್ವರ ಚರಿತಂ’ ಕಾವ್ಯ ರಚಿಸಿ ಶರಣ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿರುವ ಕೀರ್ತಿ ಬಿ.ಎಂ.ಗುರುಸಿದ್ದಯ್ಯನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್ ಹೇಳಿದರು.

    ಇದನ್ನೂ ಓದಿ: ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಪದಗ್ರಹಣ

    ಕಾನಹೊಸಹಳ್ಳಿಯ ಶರಣೇಶ್ವರ ವಿದ್ಯಾಸಂಸ್ಥೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ಪಂಡಿತ ಪರಂಪರೆಯಲ್ಲಿ ಶ್ರೇಷ್ಠರಾಗಿದ್ದ ಇವರು ಕೂಡ್ಲಿಗಿಯಲ್ಲಿ ನಡೆದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹತ್ತಾರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಉತ್ತಮ ಸಾಧನೆ ಗೈದಿದ್ದರು. ಗುರುಸಿದ್ದಯ್ಯನವರ ಸಾಹಿತ್ಯ ಕೃಷಿಗೆ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠವು ಪ್ರೇರಣೆಯಾಗಿತ್ತು ಎಂದರು.

    ಎಚ್.ಎಂ.ಬಸವರಾಜ್, ಹಿರಿಯ ಸಾಹಿತಿ ಬಿ.ಎಂ.ಪ್ರಭುದೇವ, ಕಸಾಪ ಮಾಜಿ ಅಧ್ಯಕ್ಷ ಎಸ್.ಎಂ.ಗುರುಪ್ರಸಾದ್, ತಾಲೂಕು ಶಸಾಪ ಅಧ್ಯಕ್ಷ ಸಂಗಮೇಶ್ವರಯ್ಯ, ಶ್ರೀಶರಣೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಜೆ.ಎಂ.ಧನುಂಜಯ, ಬಿ.ಎಂ.ರಾಜಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts