More

    ಸಯೀದ್ ಅನ್ವರ್ ಸಾಧನೆ ಸರಿಗಟ್ಟಿದ ಶಾನ್ ಮಸೂದ್

    ಮ್ಯಾಂಚೆಸ್ಟರ್: ಇಂಗ್ಲೆಂಡ್ ವೇಗಿಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ತಾಳ್ಮೆಯ ಶತಕ ಸಿಡಿಸಿದ ಶಾನ್ ಮಸೂದ್ 24 ವರ್ಷಗಳಿಂದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಕೈಗೆಟುಕದ ಸಾಧನೆಯನ್ನು ಒಲಿಸಿಕೊಂಡಿದ್ದಾರೆ. ಈ ಮೂಲಕ ಅವರು ಮತ್ತೋರ್ವ ಎಡಗೈ ಆರಂಭಿಕ ಸಯೀದ್ ಅನ್ವರ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

    30 ವರ್ಷದ ಶಾನ್ ಮಸೂದ್ ಕಳೆದ 24 ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಮೊದಲ ಆರಂಭಿಕ ಎನಿಸಿಕೊಂಡಿದ್ದಾರೆ. ಸಯೀದ್ ಅನ್ವರ್ 1996ರ ಓವಲ್ ಟೆಸ್ಟ್‌ನಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಮಸೂದ್‌ರ ಈ ಸಾಧನೆಯ ಅಂಕಿ-ಅಂಶವನ್ನು ಹಂಚಿಕೊಂಡಿದೆ.

    ಸಯೀದ್ ಅನ್ವರ್ 1996ರ ಓವಲ್ ಟೆಸ್ಟ್‌ನಲ್ಲಿ ಅಮೋಘ 176 ರನ್ ಸಿಡಿಸಿ ಮಿಂಚಿದ್ದರು. ಅವರ ಆ ಸಾಧನೆಯಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ನಂತರ ಪಾಕಿಸ್ತಾನ ತಂಡ 5 ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೂ, ಆರಂಭಿಕರಿಂದ ಶತಕ ಸಿಡಿದಿರಲಿಲ್ಲ.

    ಇದನ್ನೂ ಓದಿ: ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ ವಹಿಸಲಿ ಎಂದ ನೆಟ್ಟಿಗರು!

    ಶಾನ್ ಮಸೂದ್ ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 3 ಶತಕ ಸಿಡಿಸಿದ 6ನೇ ಬ್ಯಾಟ್ಸ್‌ಮನ್ ಎನಿಸಿದರು. ಅವರು ಈ ಮುನ್ನ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ಗಳಲ್ಲೂ ಶತಕ ಸಿಡಿಸಿದ್ದರು. ಒಟ್ಟಾರೆಯಾಗಿ ಇದು ಅವರ 4ನೇ ಟೆಸ್ಟ್ ಶತಕ ಮತ್ತು ಜೀವನಶ್ರೇಷ್ಠ ಗಳಿಕೆಯಾಗಿದೆ. ಮಸೂದ್‌ಗೆ ಮುನ್ನ ಜಹೀರ್ ಅಬ್ಬಾಸ್ (1982-83), ಮುದಸ್ಸರ್ ನಜರ್ (1983), ಮೊಹಮದ್ ಯೂಸ್ು (2006), ಯೂನಿಸ್ ಖಾನ್ (2014) ಮತ್ತು ಮಿಸ್ಬಾ ಉಲ್ ಹಕ್ (2014) ಸತತ 3 ಶತಕ ಸಿಡಿಸಿದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

    ಶಾನ್​ ಮಸೂದ್​ ಶತಕದಾಟ, ಪಾಕಿಸ್ತಾನ ಉತ್ತಮ ಮೊತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts