More

    ಸೋಲಿನಿಂದ ಕಂಗೆಟ್ಟ ಬಾಲಿವುಡ್​: ನೆಲಕಚ್ಚಿತು ಶಂಶೆರಾ, ನಡೆಯಲಿಲ್ಲ ರಣಬೀರ್​ ಜಾದೂ!

    ಮುಂಬೈ: ಬಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ನೆಲಕಚ್ಚುತ್ತಿವೆ. ಯಶ್​ ರಾಜ್​​ ಸಂಸ್ಥೆಯಡಿ ನಿರ್ಮಾಣವಾದ ನಾಲ್ಕೂ ಸಿನಿಮಾಗಳು ತೀರ ಕಳಪೆ ಪ್ರದರ್ಶನ ಕಂಡಿವೆ. ಈ ವರ್ಷ ಬಿಡುಗಡೆಯಾದ ಸತತ 4 ಸಿನಿಮಾಗಳು ಸೋಲು ಕಂಡಿವೆ.

    ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಣಬೀರ್ ಕಪೂರ್​ ನಟನೆಯ ಶಂಶೇರಾ ಚಿತ್ರ ಬಿಡುಗಡೆಯಾದ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ನೂರಾರು ಕೋಟಿ ರೂ.ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಚಿತ್ರ ಮೊದಲ ದಿನ ಕೇವಲ 10ಕೋಟಿ ರೂ.ಗಳಿಕೆ ಕಂಡಿದೆ.ನಂತರದ ದಿನದಲ್ಲೂ ಸುಧಾರಣೆಯಾಗಲಿಲ್ಲ, ಸದ್ಯ ಯಶ್​ ರಾಜ್​​ ಬ್ಯಾನರ್​ ಅಡಿ ನಿರ್ಮಾಣವಾದ 4ನೇ ಸಿನಿಮಾ ಇದಾಗಿದ್ದು, ಇದೂ ಕೂಡ ಅದೇ ಸಾಲಿಗೆ ಸೇರ್ಪಡೆಯಾಗುತ್ತಿದೆ.

    ಬಂಟಿ ಔರ್​ ಬಬ್ಲಿ 2, ಸಾಮ್ರಾಟ್​ ಪೃಥ್ವಿರಾಜ್, ಜಯೆಶಾಭಾಯಿ ಜೋರ್ದಾರ್​, ನಂತರ ಇದೀಗ ಶಂಶೇರಾ ಕೂಡ ಇದೇ ಹಾದಿಯನ್ನು ಹಿಡಿದಿದೆ. ಯಶ್ ರಾಜ್​ ಚಿತ್ರಗಳೆಂದರೆ ಅದು ದಾಖಲೆ ಮಟ್ಟದಲ್ಲಿ ಗಳಿಕೆ ಕಾಣುವ ಚಿತ್ರ ಎಂದೇ ಹೇಳಲಾಗಿತ್ತು. ಆದರೀಗ ಕಾಲ ಬದಲಾಗಿದೆ, ಜನರು ಬಾಲಿವುಡ್​ ಸಿನಿಮಾಗಳತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. (ಏಜೆನ್ಸೀಸ್​)

    ನನ್ನ ಜೀವನದಲ್ಲಿ ಶೇ.10ರಷ್ಟು ನೆಮ್ಮದಿ ಉಳಿಯಲಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸೂಪರ್​ ಸ್ಟಾರ್​​ ರಜನಿಕಾಂತ್​!

    ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ಬಿತ್ತು ವಿಂಡ್​ ಪವರ್​ ಫ್ಯಾನ್​: ತಪ್ಪಿತು ಭಾರೀ ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts