More

    ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ತಮ್ಮನಿಗೆ ಬಂಗಾಳ ತಂಡದಲ್ಲಿ ಸ್ಥಾನ

    ಕೋಲ್ಕತ: ಟೀಮ್ ಇಂಡಿಯಾದ ವೇಗಿ ಮೊಹಮದ್ ಶಮಿ ಅವರ ಕಿರಿಯ ಸಹೋದರ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ಮೊಹಮದ್ ಕೈಫ್​, ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಬಂಗಾಳ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಬಂಗಾಳದ 23 ವಯೋಮಿತಿ ತಂಡದಿಂದ ಮೊಹಮದ್ ಕೈಫ್​  ಸೀನಿಯರ್ಸ್‌ ತಂಡಕ್ಕೆ ಬಡ್ತಿ ಪಡೆದಿದ್ದಾರೆ. ಶಮಿ ಅವರಂತೆ ವೇಗದ ಬೌಲರ್ ಆಗಿರುವ ಜತೆಗೆ ಕೈಫ್​, ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

    ಅನುಸ್ತೂಪ್ ಮುಜುಮ್ದಾರ್ ಹೊಸ ನಾಯಕ ಮತ್ತು ಶ್ರೀವತ್ಸ ಗೋಸ್ವಾಮಿ ಹೊಸ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ಋತುವಿನ ನಾಯಕ ಅಭಿಮನ್ಯು ಈಶ್ವರನ್ ಅವರನ್ನು ಚುಟುಕು ಕ್ರಿಕೆಟ್ ಜವಾಬ್ದಾರಿಯಿಂದ ವಿಮುಖಗೊಳಿಸಲಾಗಿದ್ದು, ಕೇವಲ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    ಇದನ್ನೂ ಓದಿ: ಆಸೀಸ್ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದ ಉಮೇಶ್ ಯಾದವ್

    30 ವರ್ಷದ ಮೊಹಮದ್ ಶಮಿ ಭಾರತ ತಂಡದ ಪರ ಈಗಾಗಲೆ 49 ಟೆಸ್ಟ್, 77 ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದು ಅವರ ತಮ್ಮ ಕೂಡ ಅಣ್ಣನ ಹಾದಿಯಲ್ಲಿ ಸಾಗುವ ಕನಸು ಕಾಣುತ್ತಿದ್ದಾರೆ. ಶಮಿ ಕುಟುಂಬದ ಮೂಲ ಉತ್ತರ ಪ್ರದೇಶವಾದರೂ, ಅಣ್ಣನಂತೆ ತಮ್ಮ ಕೂಡ ಬಂಗಾಳ ರಾಜ್ಯ ತಂಡವನ್ನು ಪ್ರತಿನಿಧಿಸಲು ಆದ್ಯತೆ ನೀಡಿದ್ದಾರೆ. ಮೊಹಮದ್ ಶಮಿ ಐಪಿಎಲ್‌ನಲ್ಲಿ ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಲ್ರೌಂಡರ್ ನಿರ್ವಹಣೆ ತೋರಿದರೆ ಮೊಹಮದ್ ಕೈಫ್​ಗೂ ಐಪಿಎಲ್ ತಂಡಗಳ ಅವಕಾಶ ಒಲಿದು ಬರುವ ನಿರೀಕ್ಷೆ ಇದೆ.

    ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

    ನಿವೃತ್ತಿ ಮಾತು ಸದ್ಯಕ್ಕಿಲ್ಲ ಎಂದ ಯುನಿವರ್ಸಲ್ ಬಾಸ್

    VIDEO: ಮುಂದುವರಿದ ಶ್ರೀಶಾಂತ್ ಸ್ಲೆಡ್ಜಿಂಗ್ ಆಟ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts