More

    ಕರೊನಾ ವೈರಸ್‌ನಿಂದ ಶಾಹಿದ್ ಅಫ್ರಿದಿ ಕುಟುಂಬ ಮುಕ್ತ

    ಲಾಹೋರ್: ಕರೊನಾ ವೈರಸ್ ಮಹಾಮಾರಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರಿಂದ ದೈನಂದಿನ ಜೀವನವೇ ಅಸ್ತವ್ಯಸ್ಥಗೊಂಡಿದೆ. ಆಳಿನಿಂದ ಹಿಡಿದು ಅರಸನವರೆಗೂ ಈ ಹೆಮ್ಮಾರಿಯ ಹೆದರಿಕೆಯಲ್ಲೇ ಕಾಲಕಳೆಯುತ್ತಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕುಟುಂಬ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಜೂನ್ 13 ರಂದು ಪಾಸಿಟಿವ್‌ಗೆ ಒಳಗಾಗಿದ್ದ ಅಫ್ರಿದಿ, ಇದೀಗ ಪತ್ನಿ ಹಾಗೂ ತಮ್ಮಿಬ್ಬರು ಪುತ್ರಿಯರ ಕರೊನಾ ವೈರಸ್ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಟೆನಿಸ್ ತಾರೆ ಜೋಕೊವಿಕ್ ಮತ್ತು ಪತ್ನಿ ಜೆಲೆನಾಗೆ ಕರೊನಾ ನೆಗೆಟಿವ್

    ದೇವರ ದಯೆ, ನನ್ನ ಪತ್ನಿ ಹಾಗೂ ಮಕ್ಕಳಾದ ಅಕ್ಸಾ ಹಾಗೂ ಅನ್ಸಾ ವರದಿ ನೆಗೆಟಿವ್ ಬಂದಿದ್ದು, ನಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಇದೀಗ ಮತ್ತೆ ಕುಟುಂಬ ಸೇರಿಕೊಳ್ಳಬಹುದು, ಇದುವರೆಗೂ ಕುಟುಂಬವನ್ನು ಮಿಸ್ ಮಾಡಿಕೊಂಡಿದ್ದೆ, ಎಂದು ತಮ್ಮ ಕಿರಿಯ ಪುತ್ರಿಯನ್ನು ಮುದ್ದಾಡುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ನನಗೆ ಕರೊನಾ ಪಾಸಿಟಿವ್ ಬಂದಿದ್ದು, ಬೇಗ ಸುಧಾರಿಸಿಕೊಳ್ಳಿ ಎಂದು ಎಲ್ಲರೂ ಪ್ರಾರ್ಥಿಸಿ ಎಂದು ಅಫ್ರಿದಿ ಅಭಿಮಾನಿಗಳಿಗೆ ಮನವಿ ಮಾಡಿದ್ದರು.

    ಇದನ್ನೂ ಓದಿ: VIDEO| ಹಾರ್ದಿಕ್​ ಪಾಂಡ್ಯ ಜಂಪಿಂಗ್ ಪುಷ್-ಅಪ್ ಸವಾಲಿಗೆ ಟ್ವಿಸ್ಟ್ ಕೊಟ್ಟ ವಿರಾಟ್​ ಕೊಹ್ಲಿ!

    20 ವರ್ಷಗಳ ಕಾಲ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಅಫ್ರಿದಿ ಪಾಕ್ ಪರ 27 ಟೆಸ್ಟ್, 398 ಏಕದಿನ ಹಾಗೂ 99 ಟಿ20 ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನಡೆ ನಡೆಸಿದ ಪರೀಕ್ಷೆಯಲ್ಲಿ ಪಾಕಿಸ್ತಾನ 10 ಆಟಗಾರರಿಗೆ ಕರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಮತ್ತೆರಡು ಪರೀಕ್ಷೆಯಲ್ಲಿ 6 ಮಂದಿ ವರದಿ ನೆಗೆಟಿವ್ ಬಂದಿತ್ತು.

    ಸಲಹೆ ನೀಡಲು ಹೋಗಿದ್ದ ಗ್ರ್ಯಾಂಟ್  ಫ್ಲವರ್‌ಗೆ ಚಾಕು ತೋರಿಸಿದ್ದ ಯೂನಿಸ್ ಖಾನ್…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts