More

    ಫಿಫಾ ವರ್ಲ್ಡ್​​ ಕಪ್​ ಫೈನಲ್ಸ್​ಗೆ ಶಾರೂಖ್​ ಖಾನ್​ … ಯಾಕಿರಬಹುದು ಹೇಳಿ?

    ಮುಂಬೈ: ಫಿಫಾ ವರ್ಲ್ಡ್​​ ಕಪ್​ಗೆ ಇನ್ನು ಹೆಚ್ಚು ದಿನ ಉಳಿದಿಲ್ಲ. ಇದೇ ಭಾನುವಾರ, ಅರ್ಜೆಂಟಿನಾ ಮತ್ತು ಫ್ರಾನ್ಸ್​ಗಳ ನಡುವೆ ಫೈನಲ್​ ಪಂದ್ಯ ನಡೆಯಲಿದ್ದು, ಇವೆರಡರ ಪೈಕಿ ಯಾವ ದೇಶ ಗೆಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ, ಫೈನಲ್ಸ್​ ಪಂದ್ಯದಲ್ಲಿ ಬಾಲಿವುಡ್​ ನಟ ಶಾರೂಖ್​ ಖಾನ್​ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಈ ವಾರ 8 ಚಿತ್ರಗಳ ಬಿಡುಗಡೆ; ಮೂರು ವಾರಗಳಲ್ಲಿ ಒಟ್ಟು 25 ಚಿತ್ರಗಳು ತೆರೆಗೆ

    ಹೌದು, ಖತಾರ್​ನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್​​ ಕಪ್​ನ ಫೈನಲ್​ ಪಂದ್ಯದಲ್ಲಿ ಶಾರೂಖ್​ ಖಾನ್​ ಭಾಗವಹಿಸಲಿದ್ದಾರೆ. ಕ್ರಿಕೆಟ್​ ಅಭಿಮಾನಿಯಾಗಿರುವ ಶಾರೂಖ್​ಗೆ ಫುಟ್ಬಾಲ್​ ಬಗ್ಗೆ ಯಾವಾಗ ಅಷ್ಟೊಂದು ಪ್ರೀತಿ ಬೆಳೆಯಿತು ಎಂಬ ಪ್ರಶ್ನೆ ಸಹಜ. ನಿಜ ಹೇಳಬೇಕೆಂದರೆ, ಈ ಫೈನಲ್ಸ್​ನಲ್ಲಿ ಶಾರೂಖ್​ ಭಾಗವಹಿಸುತ್ತಿರುವುದು ಸಂಪೂರ್ಣ ಫೂಟ್ಬಾಲ್​ ಪ್ರೀತಿಯಿಂದಲ್ಲ. ಈ ವೇದಿಕೆಯನ್ನು ಶಾರೂಖ್​ ತಮ್ಮ ‘ಪಠಾಣ್​’ ಚಿತ್ರವನ್ನು ಪ್ರಮೋಟ್​ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ.

    ಶಾರೂಖ್​ ಖಾನ್​ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರವೊಂದು ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಆಗಿವೆ. ಈ ಮಧ್ಯೆ, ಅವರು ‘ಬ್ರಹ್ಮಾಸ್ತ್ರ’, ‘ರಾಕೆಟ್ರಿ’ ಮತ್ತು ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಅವೆಲ್ಲ ಅತಿಥಿ ಪಾತ್ರಗಳು. ಇನ್ನು, ‘ಪಠಾಣ್​’ ಚಿತ್ರದಲ್ಲಿ ಶಾರೂಖ್​ ಮೊದಲ ಬಾರಿಗೆ ಆಕ್ಷನ್​ ಹೀರೋ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವುದಕ್ಕೆ ಸಜ್ಜಾಗಿದ್ದಾರೆ. ಇದಕ್ಕೆ ಫಿಫಾಗಿಂತ ಇನ್ನೊಂದು ದೊಡ್ಡ ಅಂತಾರಾಷ್ಟ್ರೀಯ ವೇದಿಕೆ ಸಿಗುವುದು ಕಷ್ಟ ಎಂದು ಕಿಂಗ್​ ಖಾನ್​ಗೆ ಅರ್ಥವಾಗಿದೆ.

    ಇದನ್ನೂ ಓದಿ: IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳು …

    ಫಿಫಾ ಒಂದು ಜಾಗತಿಕ ವೇದಿಕೆಯಾಗಿದ್ದು, ಇಲ್ಲಿ ಚಿತ್ರವನ್ನು ಪ್ರಮೋಷನ್​ ಮಾಡಿದರೆ, ಜಗತ್ತಿನಾದ್ಯಂತ ಜನರನ್ನು ತಲುಪಬಹುದು ಎಂಬ ವಿಷಯ ಶಾರೂಖ್​ಗೆ ಗೊತ್ತಿಲ್ಲದೇನಲ್ಲ. ಅದೇ ಕಾರಣಕ್ಕೆ, ಅವರು ತಮ್ಮ ತಂಡದೊಂದಿಗೆ ಭಾನುವಾರ ಕತಾರ್​ಗೆ ಹೋಗಿ ಅಲ್ಲಿ ಫಿಫಾದಲ್ಲಿ ಭಾಗವಹಿಸಿ, ತಮ್ಮ ಚಿತ್ರವನ್ನು ಪ್ರಮೋಟ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಶಾರೂಖ್​ ಖಾನ್ ಆಗಲೀ, ಅವರ ತಂಡದವರಾಗಲೀ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಆದರೆ, ಶಾರೂಖ್​ ಖಾನ್​ ಯೂನಿವರ್ಸ್​ ಫ್ಯಾನ್​ ಕ್ಲಬ್​ ಎಂಬ ಅಭಿಮಾನಿ ಸಂಘವು ಇಂಥದ್ದೊಂದು ಪೋಸ್ಟ್​ ಹಾಕಿದೆ.

    ಬಾಲಿವುಡ್​ ಫೈಲ್ಸ್​; ಈ ವರ್ಷ ಯಾವ ಚಿತ್ರ ಎಷ್ಟು ಗಳಿಕೆ ಮಾಡಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts