More

    ಗೀರ್ ಅರಣ್ಯ ಪ್ರದೇಶದಲ್ಲಿ ‘ಲಯನ್​ ಶೋ’ : ಏಳು ಜನರಿಗೆ ಜೈಲು ಶಿಕ್ಷೆ

    ರಾಜ್​ಕೋಟ್​: ಕೃಷಿಗೆಂದು ನೀಡಿದ್ದ ಅರಣ್ಯ ಇಲಾಖೆಯ ಜಮೀನಿನಲ್ಲಿ ಕಾನೂನುಬಾಹಿರವಾಗಿ ಸಂರಕ್ಷಿತ ಏಷಿಯಾಟಿಕ್ ಸಿಂಹದ ಪ್ರದರ್ಶನ ನಡೆಸಿದ್ದ ಪ್ರಕರಣದಲ್ಲಿ, ಗುಜರಾತಿನ ನ್ಯಾಯಾಲಯ ಏಳು ಜನರಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 10,000 ರೂ. ದಂಡ ವಿಧಿಸಿದೆ. 2018 ರಲ್ಲಿ ಗೀರ್ ಅರಣ್ಯದ ಬಾಬರಿಯಾ ಶ್ರೇಣಿಯಲ್ಲಿ ನಡೆದ ಅಕ್ರಮ ‘ಲಯನ್​ ಶೋ’ದಲ್ಲಿ ಭಾಗವಹಿಸಿದ್ದ ನಾಲ್ವರು ಪ್ರವಾಸಿಗರು, ಜಮೀನಿನ ಮಾಲೀಕ ಮತ್ತು ಆತನ ಇಬ್ಬರು ಸಂಬಂಧಿಕರಿಗೆ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಶಿಕ್ಷೆ ನೀಡಲಾಗಿದೆ.

    ಇಲಿಯಾ ಹಾಥ್, ರವಿ ಪಟಡಿಯಾ, ದಿವ್ಯಾಂಗ್ ಗಜ್ಜರ್, ರತಿನ್ ಪಟೇಲ್, ಅಬ್ಬಾಸ್ ರಿಂಗ್‌ಬ್ಲೋಚ್, ಮಂಗಿಲಾಲ್ ಮೀನಾ ಮತ್ತು ಅಲ್ತಾಫ್ ಬ್ಲಾಚ್ ಎಂಬುವರು ಶಿಕ್ಷೆಗೊಳಗಾದವರು. ಆರು ಜನರಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 10,000 ರೂ. ನೀಡಿದ್ದರೆ, ಮಹಿಳಾ ಆರೋಪಿ ಮೀನಾಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡವನ್ನು ಮ್ಯಾಜಿಸ್ಟ್ರೇಟರು ವಿಧಿಸಿದ್ದಾರೆ.

    ಇದನ್ನೂ ಓದಿ: ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

    ಗೀರ್ ಗಢ್ದಾದ ಮ್ಯಾಜಿಸ್ಟ್ರೇಟರಾದ ಸುನಿಲ್​ಕುಮಾರ ದವೆ, ಕಾನೂನುಬಾಹಿರವಾಗಿ ಅರಣ್ಯ ಪ್ರವೇಶಿಸಿ ಸಂರಕ್ಷಿತ ವನ್ಯಪ್ರಾಣಿಗಳಿಗೆ ತೊಂದರೆ ನೀಡಿದ ಆರೋಪ ಎದುರಿಸುತ್ತಿದ್ದ ಎಂಟು ಆರೋಪಿಗಳಲ್ಲಿ ಏಳು ಜನರನ್ನು ತಪ್ಪಿತಸ್ಥರೆಂದು ಘೋಷಿಸಿ ಸೋಮವಾರ (ಮಾರ್ಚ್​ 8) ತೀರ್ಪು ನೀಡಿದ್ದಾರೆ, ಎಂಟನೆಯ ಆರೋಪಿ ಹಸಮ್ ಕರೇಜಾನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.

    ಮುಖ್ಯ ಆರೋಪಿ ಇಲಿಯಾ​​ನ ತಾತನಿಗೆ ಅರಣ್ಯ ಇಲಾಖೆಯಿಂದ ಗೀರ್​ ಸೋಮನಾಥ್ ಜಿಲ್ಲೆಯ ಧ್ರುಬಾಕ್‌ನಲ್ಲಿರುವ ಅರಣ್ಯ ಭೂಮಿಯನ್ನು ಕೃಷಿಗಾಗಿ ನೀಡಲಾಗಿತ್ತು. ಈ ಜಾಗದಲ್ಲಿ 2018ರ ಮೇ 18 ರಾತ್ರಿ ಪಟಡಿಯಾ, ಗಜ್ಜರ್, ಪಟೇಲ್ ಮತ್ತು ಮೀನಾ ಎಂಬ ಅಹಮದಾಬಾದ್​​ನ ಪ್ರವಾಸಿಗರನ್ನು ಆಹ್ವಾನಿಸಿದ್ದ ಇಲಿಯಾ, ಸಿಂಹಗಳನ್ನು ಪ್ರದರ್ಶನ ಮಾಡುವುದಕ್ಕಾಗಿ ತಲಾ 6,000 ರೂ. ಪಡೆದಿದ್ದ. ಆತನ ಸಂಬಂಧಿಕರಾದ ರಿಂಗ್‌ಬ್ಲೋಚ್, ಅಲ್ತಾಫ್ ಮತ್ತು ಕರೇಜಾ ಎಂಬುವರು ಜೀವಂತ ಕೋಳಿಗಳನ್ನು ತಂದು ಸಿಂಹಕ್ಕೆ ಬೇಟ್​ ಆಗಿ ನೀಡಿ ಈ ಅಪರಾಧವನ್ನು ಸಮರ್ಥಿಸಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆರೋಪಿಗಳು ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು ಎಂದು ದೋಷಾರೋಪಣೆ ಸಲ್ಲಿಸಲಾಗಿತ್ತು.

    ಇದನ್ನೂ ಓದಿ: ಭೂಮಿ- ಕಾವೇರಿ ತಂತ್ರಾಂಶ ಸರ್ವರ್​ ಡೌನ್​: ಜನರ ಪರದಾಟ, ಸರ್ಕಾರಕ್ಕೆ ಹಿಡಿಶಾಪ

    ಆರೋಪಿಗಳು ಅವರು ಮೊಬೈಲ್ ಫೋನಿನಲ್ಲಿ ಸಿಂಹದ ವೀಡಿಯೋ ರೆಕಾರ್ಡ್​ ಮಾಡಿದ್ದು, ಆ ಸಮಯದಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಈ ವೀಡಿಯೋವನ್ನು ಮುಖ್ಯ ಪುರಾವೆಯಾಗಿ ಕೋರ್ಟ್ ಮುಂದೆ ಇರಿಸಲಾಗಿತ್ತು. ಏಳು ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಮ್ಯಾಜಿಸ್ಟ್ರೇಟರು, ಇಲಿಯಾನ ಪೂರ್ವಿಕರಿಗೆ ಉಳುಮೆಗಾಗಿ ಭೂಮಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿ, ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂಪಡೆಯಬೇಕೆಂದೂ ಆದೇಶಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಗ್‌ ಬ್ರೇಕಿಂಗ್‌: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌- 11 ಜಿಲ್ಲೆಗಳಲ್ಲಿ 9 ಮನೆಯ ಮೇಲೆ ಎಸಿಬಿ ದಾಳಿ- ಇಲ್ಲಿದೆ ವಿವರ…

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts